Monday, December 23, 2024

ಅರ್ಜುನ್ ರೆಡ್ಡಿಯನ್ನ ಮೀರಿಸುತ್ತಾ ದೇವರಕೊಂಡ ಲೈಗರ್..?

ಅರ್ಜುನ್ ರೆಡ್ಡಿಯಿಂದ ಕ್ರೇಜ್ ಕಾ ಬಾಪ್ ಆಗಿದ್ದ ವಿಜಯ್ ದೇವರಕೊಂಡ, ಇದೀಗ ಕ್ರಾಸ್​ಬ್ರೀಡ್ ಸಾಲಾ ಲೈಗರ್ ಆಗಿ ಅಬ್ಬರಿಸುತ್ತಿದ್ದಾರೆ. ಬಾಕ್ಸಿಂಗ್ ದಂತಕಥೆ ಮೈಕ್ ಟೈಸನ್, ಬಾಹುಬಲಿಯ ಶಿವಗಾಮಿಯ ಗತ್ತು, ಗಮ್ಮತ್ತು ಇರೋ ಲೈಗರ್ ಟ್ರೈಲರ್​ಗೆ ಸಿನಿದುನಿಯಾ ಸ್ಟನ್ ಆಗಿದೆ. ಪೂರಿ ಸ್ಟೈಲ್ ಆಫ್ ಮೇಕಿಂಗ್​ನಲ್ಲಿ ಲೈಗರ್ ದರ್ಶನ ಒಮ್ಮೆ ಮಾಡಿಬಿಡಿ.

ಅರ್ಜುನ್ ರೆಡ್ಡಿಯನ್ನ ಮೀರಿಸೋ ದೇವರಕೊಂಡ ಲೈಗರ್

ಪೂರಿ ಸೃಷ್ಟಿಸಿದ ಕ್ರಾಸ್​ಬ್ರೀಡ್ ಸಾಲಾ ಲೈಗರ್ ಗಜ ಘರ್ಜನೆ

ತೊದಲು ಭಾಷೆಯಲ್ಲಿ ಫೈಟರ್​ನ​​ ಮೆಗಾ ಫೈಟಿಂಗ್..!​​

ಮೈಕ್ ಟೈಸನ್ ಪಂಚ್.. ಶಿವಗಾಮಿ ರಮ್ಯಾ ಗಮ್ಮತ್ತು

ಟಾಲಿವುಡ್​ ಸೂಪರ್​ ಸ್ಟಾರ್​​ ವಿಜಯ್​ ದೇವರಕೊಂಡ ಹಾಗೂ ಮಾಸ್​​ ಡೈರೆಕ್ಟರ್​ ಪೂರಿ ಜಗನ್ನಾಥ್​ ಕಾಂಬಿನೇಷನ್​​​ನ ಸಿನಿಮಾ ಲೈಗರ್,​​​ ರಿಲೀಸ್​ಗೂ ಮುನ್ನವೇ ವೈಬ್ರೇಷನ್​ ಕ್ರಿಯೇಟ್​ ಮಾಡಿದೆ. ಬಾಕ್ಸರ್​​ ಲುಕ್​​ನಲ್ಲಿ ಲೈಗರ್​ ಚಿತ್ರ ಕೊಟ್ಟ  ಕಾವು ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುತ್ತಿದೆ. ಬಾಕ್ಸಿಂಗ್​ ದಂತಕಥೆ, ದಿಗ್ಗಜ ಮೈಕ್​ ಟೈಸನ್​​ ರೋಲ್​​​ ಕೂಡ ಸಿನಿಮಾದಲ್ಲಿ ಕಿಚ್ಚಿನ ಕಿಡಿ ಹಚ್ಚಿದೆ. ಲೈಗರ್​ ಚಿತ್ರದ ಟ್ರೈಲರ್​ ರಿಲೀಸ್​ ಆದ ಕೆಲವೇ ಕ್ಷಣಗಳಲ್ಲಿ ಹಿಟ್ಸ್​​ ದಾಖಲಿಸುತ್ತಿದೆ.

ಒಂದು ಲಯನ್​ ಟೈಗರ್​ಗೆ ಹುಟ್ಟಿರೋನು ಇವನು ಅನ್ನೋ ಮೈನವಿರೇಳಿಸೋ ಡೈಲಾಗ್​​ ಮೂಲಕ ಟ್ರೈಲರ್​ ಆರಂಭವಾಗಲಿದೆ. ಎರಡು ನಿಮಿಷ ಐದು ಸೆಕೆಂಡ್​ಗಳ ಕಾಲ ನಿಮ್ಮ ಮೈರೋಮಗಳು ನೆಟ್ಟಗಾಗುತ್ತವೆ. ಕ್ರಾಸ್​​ ಬ್ರೀಡ್​​ ಸರ್​​ ನನ್ನ ಮಗ ಅಂತಾ ಶಿವಗಾಮಿ  ಖ್ಯಾತಿಯ ರಮ್ಯಾಕೃಷ್ಣ ಹೇಳೋ ಡೈಲಾಗ್​​ ಸಿನಿಮಾದಲ್ಲಿ ಟೈಗರ್​​​​​ ಘರ್ಜನೆ ಯಾವ ಲೆವೆಲ್​​ನಲ್ಲಿ ಇರಲಿದೆ ಅನ್ನೋ ಮುನ್ಸೂಚನೆ ಕೊಟ್ಟಿದೆ.

ಚಡ್ಡಿ ಹಾಕೋ ವಯಸ್ಸಿನಲ್ಲೇ ವಿಜಯ್​​ ದೊಡ್ಡ  ಫೈಟರ್​​​​. ಇವನನ್ನು ಎದುರು ಹಾಕ್ಕೋಂಡ್ರೆ ಮೂಳೆ ಮುರಿಯೋದ್ರಲ್ಲಿ ಟಾಪರ್​​​. ಲಯನ್​ ಟೈಗರ್​ ಮಿಕ್ಸ್​ ಬ್ರೀಡ್​ ಇದು. ಹಾಗಾಗಿ ಬಾಕ್ಸಿಂಗ್​ ಅಖಾಡಕ್ಕೆ ಇಳಿಯೋ ಮುಂಚೆ, ಮೈ ಕೈ ಗಟ್ಟಿ ಇದೆಯಾ ಅಂತಾ ನೋಡ್ಕೋಬೇಕು. ಸಿನಿಮಾದಲ್ಲಿ ಅಮ್ಮ ಮಗನ ಕಾಂಬಿನೇಷನ್​​ ವಿಭಿನ್ನವಾಗಿ ಮೂಡಿ ಬಂದಿದೆ. ಪ್ರೀತಿ, ಪ್ರೇಮ, ಸಾಹಸಮಯ ದೃಶ್ಯ, ತಾಯಿ ಮಗನ ಸೆಂಟಿಮೆಂಟ್​​ ಸಿನಿಮಾ ಉದ್ದಕ್ಕೂ ಇರೋ ಸೂಚನೆ ಸಿಕ್ಕಿದೆ. ವಿಜಯ್​ಗೆ ಮಾತು ತಡವರಿಸಿದ್ರೂ, ಶತ್ರುಗಳನ್ನು ಸೆದೆಬಡಿಯಲು ಎಂದು ತಡವರಿಸೋದಿಲ್ಲ.

ಒಂದು ಕಡೆ ಲೈಗರ್​ ಐ ಯಾಮ್​ ಫೈಟರ್​ ಅಂತಾ ಮೈ ಕೊಡವಿ ಬರೋ ಸಿಂಹನಂತೆ ಘರ್ಜನೆ  ಮಾಡ್ತಿದ್ರೆ, ನೀನು ಫೈಟರ್​ ಆದ್ರೇ, ನಾನು ಏನು ಅಂತಾ ಬಾಕ್ಸಿಂಗ್​ ದಿಗ್ಗಜ ಮೈಕ್​ ಟೈಸನ್​ ಸವಾಲಾಕುತ್ತಾರೆ. ಒಟ್ನಲ್ಲಿ ವಿಶ್ವ ಕಂಡ ಶ್ರೇಷ್ಠ ದಿಗ್ಗಜ ಮೈಕ್​​ ಟೈಸನ್​​ ಜೊತೆ ನಡೆಯೋ ಯುದ್ಧ ಭರ್ಜರಿಯಾಗಿರಲಿದೆ. ಹಸಿದ ಹೆಬ್ಬುಲಿಗಳ ಹೋರಾಟ ಭಯಂಕರವಾಗಿರಲಿದೆ. ಹಾಲಿವುಡ್​​​ ರೇಂಜ್​​​ ಮೀರಿಸೋ ಲೈಗರ್​ ಟ್ರೈಲರ್​​ಗೆ ಚಿತ್ರರಸಿಕರು ಕ್ಲೀನ್​ ಬೋಲ್ಡ್​ ಆಗಿದ್ದಾರೆ.

ಮದಗಜಗಳ ಸೆಣಸಾಟ ನೋಡೋಕೆ ಆಗಸ್ಟ್​​ 22ರವರೆಗೂ ಕಾಯಲೇಬೇಕು. ಒಟ್ಟು ಐದು ಭಾಷೆಗಳಲ್ಲಿ ಲೈಗರ್​​ ದರ್ಬಾರ್​​​​​ ಜೋರಾಗಿರಲಿದೆ. ಪೂರಿ ಜಗನ್ನಾಥ್​​ ಊಹೆಗೂ ಮೀರಿದ ಸಿನಿಮಾ ರೆಡಿ ಮಾಡಿದ್ದಾರೆ. ವಿಜಯ್​ ಕಟ್ಟುಮಸ್ತು ದೇಹ ಕಣ್ತುಂಬಿಕೊಳ್ಳೋಕೆ ಕೆಲದಿನಗಳವರೆಗು ಕಾಯಲೇಬೇಕಾಗಿದೆ. ಕಥೆ ಬರೆದು ನಿರ್ದೇಶನ ಮಾಡ್ತಿರೋ ಪುರಿ ಜಗನ್ನಾಥ್​​​​​​ ಅವರ ಕನಸಿನ ಸಿನಿಮಾ ಇದು. ಈ ಚಿತ್ರಕ್ಕೆ ಕರಣ್​ ಜೋಹರ್​​, ಚಾರ್ಮಿ ಕೌರ್​​, ಅಪೂರ್ವ ಮೆಹ್ತಾ, ಪೂರಿ ಜಗನ್ನಾಥ್​ ಕೂಡ ಬಂಡವಾಳ ಹೂಡಿದ್ದಾರೆ. ವಿಷ್ಣು ಶರ್ಮಾ ಕ್ಯಾಮೆರಾ ಕೈಚಳಕ ಟ್ರೈಲರ್​ ಪೂರ್ತಿ ಜಗಮಗಿಸುತ್ತೆ. ಅಂತೂ ಕ್ರಾಸ್​ ಬ್ರೀಡ್​ ಕರಾಮತ್ತು ಸಿಲ್ವರ್​​ ಸ್ಕ್ರೀನ್​ ಮೇಲೆ ಹೇಗಿರುತ್ತೋ ಕಾದು ನೋಡ್ಬೇಕು.

ರಾಕೇಶ್ ಆರುಂಡಿ, ಫಿಲ್ಮ್​​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES