Sunday, December 22, 2024

ಜಾರ್ಖಂಡ್ ಬ್ಯೂಟಿ ಜೊತೆ ವಸಿಷ್ಠ ಸಿಂಹ ‘ಲವ್ಲಿ’ ರೊಮ್ಯಾನ್ಸ್

ಕಂಚಿನ ಕಂಠದ ಚೆಲುವ, ಸ್ಯಾಂಡಲ್​ವುಡ್​​ನ ​​​ಮೋಸ್ಟ್​ ಟ್ಯಾಲೆಂಟೆಡ್​​ ಆ್ಯಕ್ಟರ್​ ವಸಿಷ್ಠ ಸಿಂಹಗೆ ಲವ್ಲಿ ಹುಡ್ಗಿ ಸಿಕ್ಕಿದ್ದಾಳೆ. ಜಾರ್ಖಂಡ್ ಬ್ಯೂಟಿಯ ಪ್ರೇಮದಲ್ಲಿರೋ ವಸಿಷ್ಠನ ವಿಶಿಷ್ಟ ಲವ್ ಸ್ಟೋರಿ ಎಂಥದ್ದು ಅನ್ನೋದ್ರ ಡಿಟೇಲ್ಸ್​ ಇಲ್ಲಿದೆ.

ಖಡಕ್​ ವಾಯ್ಸ್​​ ಮೂಲಕ ವಿಲನ್​​ ರೋಲ್​ಗಳಲ್ಲಿ ಆರ್ಭಟಿಸುತ್ತಿದ್ದ ವಸಿಷ್ಠ ಸಿಂಹ, ಒಂದು ಸಣ್ಣ ಗ್ಯಾಪ್​ನ ನಂತ್ರ ಮತ್ತೆ ನಾಯಕನಾಗಿ ಲವ್ಲೀ ಚಿತ್ರದ ಮೂಲಕ ಎಂಟ್ರಿ ಕೊಡ್ತಿದ್ದಾರೆ. ಈಗಾಗ್ಲೇ ಈ ಚಿತ್ರದ ಫಸ್ಟ್​​​​ ಲುಕ್​ ಪೋಸ್ಟರ್​ಗಳು ಸಿಕ್ಕಾಪಟ್ಟೆ ವೈರಲ್​​ ಆಗಿದ್ದು, ಹಲವು ವಿಶೇಷತೆಗಳಿಂದ ಸಿನಿಮಾ ಸದ್ದು ಮಾಡ್ತಿದೆ. ಟಗರು ಚಿಟ್ಟೆ ವಸಿಷ್ಠ ಸಿಂಹ, ಲಾಂಗ್​​ ಹಿಡಿದು ವಿಲನ್​ ಆಗೋಕೂ ಸೈ, ರೋಸ್​ ಹಿಡಿದು ಹೀರೋ ಆಗೋಕೂ ಜೈ.

ಲವ್ಲೀ ಸಿನಿಮಾ ಸೆಟ್ಟೇರಿದ ದಿನದಿಂದ ವಸಿಷ್ಟ ಜೊತೆ ಸ್ಕ್ರೀನ್​ ಶೇರ್​ ಮಾಡೋ ಬ್ಯೂಟಿಫುಲ್​​ ಬೆಡಗಿ ಯಾರಾಗ್ತಾರೆ ಅನ್ನೋ ಗೊಂದಲ ಎಲ್ಲರಿಗೂ ಇತ್ತು. ಇದೀಗ ಈ ಕುತೂಹಲಕ್ಕೆ ಬ್ರೇಕ್​ ಬಿದ್ದಿದೆ. ವಸಿಷ್ಠ ಸಿಂಹಗೆ ನಾಯಕಿಯಾಗಿ ಜಾರ್ಖಂಡ್​ ಮೂಲದ ಸ್ಟೆಫಿ ಪಟೇಲ್​ ಆಯ್ಕೆ ಆಗಿದ್ದಾರೆ. ಈಕೆ 2018ರ ಮಿಸ್ ಇಂಡಿಯಾ. ಅಷ್ಟೇ ಅಲ್ಲ ಹಿಂದಿ, ಕೊರಿಯನ್, ತಮಿಳು ಸಿನಿಮಾಗಳ ಮತ್ತು ವೆಬ್ ಸೀರೀಸ್​ಗಳಲ್ಲಿ ನಟಿಸಿರೋ ಸ್ಟೆಫಿ​​​​ಗೆ ಇದು ಮೊದಲ ಕನ್ನಡ ಸಿನಿಮಾ. ಲವ್ಲಿ ಚಿತ್ರಕ್ಕೆ ಚೇತನ್ ಕೇಶವ್ ಆ್ಯಕ್ಷನ್ ಕಟ್ ಹೇಳ್ತಿದ್ರೆ, ಎಂ.ಆರ್ ರವೀಂದ್ರ ಕುಮಾರ್ ನಿರ್ಮಾಣ ಮಾಡ್ತಿದ್ದಾರೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES