Tuesday, January 7, 2025

ಕಾಂಗ್ರೆಸ್ ಜಾತಿ ಜಾತಿ ನಡುವೆ ವಿಷ ಬೀಜ ಬಿತ್ತಿದೆ : ಸುನೀಲ್ ಕುಮಾರ್

ಬೆಂಗಳೂರು : ಹೆಸರು ಭಾರತ್ ಜೋಡೊ ಆದ್ರೆ ಕಾರ್ಯಕ್ರಮ ಭಾರತ ಮುರಿಯೋದು ಎಂದು ಕಾಂಗ್ರೆಸ್ ಭಾರತ್ ಜೋಡೊ ಯಾತ್ರೆಗೆ ಸುನೀಲ್ ಕುಮಾರ್ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತವನ್ನು ಕಾಂಗ್ರೆಸ್ ಮುರಿದಿದ್ದೆ. ಕಾಂಗ್ರೆಸ್ ಜಾತಿ ಜಾತಿ ನಡುವೆ ವಿಷ ಬೀಜ ಬಿತ್ತಿದೆ. ಭಾರತ ಒಡೆಯುವ ಕೆಲಸ ಸ್ವಾತಂತ್ರ್ಯ ಪೂರ್ವದಲ್ಲೂ ಮಾಡಿದೆ. ಅಸ್ಸಾಂ ವಿಚಾರದಲ್ಲಿ ದೇಶ ಮುರಿದಿದ್ದು ಕಾಂಗ್ರೆಸ್. ಈಗ ಯಾಕೆ ಭಾರತ್ ಜೋಡೊ ಕಾರ್ಯಕ್ರಮ ಮಾಡ್ತಾರೊ ಗೊತ್ತಿಲ್ಲ ಎಂದರು.

ಲೋಕಾಯುಕ್ತಕ್ಕೆ ಪವರ್ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾಳೆ ಸಚಿವ ಸಂಪುಟ ಸಭೆಯಲ್ಲಿ ಉಳಿದ ವಿಚಾರ ಚರ್ಚೆ ಮಾಡ್ತೇವೆ ಎಂದಷ್ಟೇ ಹೇಳಿದ ಸಚಿವ ನಮ್ಮ ಪಾರ್ಟಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಕಾಲಕಾಲಕ್ಕೆ ಪಕ್ಷ ತೀರ್ಮಾನಗಳನ್ನು ಮಾಡುತ್ತೆ. ಅದು ಪಕ್ಷದ ಆಂತರಿಕ ವಿಚಾರ ನಮ್ಮ ಪಾರ್ಟಿ ಒಂದು ಜಾತಿ ಸಮುದಾಯ ವ್ಯಕ್ತಿಗೆ ಕುಟುಂಬಕ್ಕೆ ಸೀಮಿತವಾದ ಪಾರ್ಟಿ ಅಲ್ಲ ಎಂದು ಸುನೀಲ್ ಕುಮಾರ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES