Wednesday, January 22, 2025

ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿಗೆ ED ನೋಟಿಸ್‌

ನವದೆಹಲಿ : ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿಗೆ ವಿಚಾರಣೆಗೆ ಆಗಮಿಸುವಂತೆ ED ನೋಟಿಸ್‌ ನೀಡಿದೆ.

ಬೆಳಗ್ಗೆ 11 ಗಂಟೆಗೆ ದೆಹಲಿಯ ED ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ನೀಡಿದ್ದಾರೆ. ED ನೋಟಿಸ್‌ ನೀಡಿರೋದನ್ನ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ ನಡೆಸಿದ್ದು, ಎಐಸಿಸಿ ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.

ಇನ್ನು, ರಾಜಭವನ ಮುತ್ತಿಗೆ ರಾಜ್ಯ ಕಾಂಗ್ರೆಸ್​ ನಾಯಕರ ನಿರ್ಧಾರ ಮಾಡಿದ್ದು, ಡಿಕೆಶಿ, ಸಿದ್ದರಾಮಯ್ಯ,ಸೇರಿ 3 ಸಾವಿರ ಕಾರ್ಯಕರ್ತರು ಭಾಗಿ ಸಾಧ್ಯತೆ ಇದೆ. ಬೆಂಗಳೂರಿನ ಫ್ರೀಡಂಪಾರ್ಕ್‌ ಸೇರಿದಂತೆ ನಗರಾದ್ಯಂತ ಬಿಗಿ ಭದ್ರತೆ ನೀಡಿದ್ದು, ಪಶ್ಚಿಮ ವಿಭಾಗದ DCP ಲಕ್ಷ್ಮಣ್‌ ನಿಂಬರಗಿ ನೇತೃತ್ವದಲ್ಲಿ ಐವರು ಎಸಿಪಿ, 15 ಇನ್ಸ್‌ಪೆಕ್ಟರ್‌, 30 ಪಿಎಸ್‌ಐ, 600 ಪೊಲೀಸರು ಹೆಚ್ಚುವರಿಯಾಗಿ 5 ಕೆಎಸ್ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ.

RELATED ARTICLES

Related Articles

TRENDING ARTICLES