Thursday, December 19, 2024

ನಮಗಂತೂ ಪ್ರಧಾನಿಯಲ್ಲಿ ತಾಯಿ ಹೃದಯ ಕಂಡಿಲ್ಲ : ನಲಪಾಡ್​​

ಚಾಮರಾಜನಗರ : ನಮಗಂತೂ ಮೋದಿ ತಾಯಿ ಹೃದಯ ಕಂಡಿಲ್ಲ, ಶೋಭಕ್ಕ ಎಲ್ಲ್ ಕಂಡ್ರು ಗೊತ್ತಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಗೆ ನಲಪಾಡ್ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗಂತೂ ಮೋದಿ ತಾಯಿ ಹೃದಯ ಕಂಡಿಲ್ಲ, ಶೋಭಕ್ಕ ಎಲ್ಲ್ ಕಂಡ್ರು ಗೊತ್ತಿಲ್ಲ. ಮಗು ಕುಡಿಯುವ ಹಾಲಿನ ಮೇಲೂ ಜಿಎಸ್ಟಿ ಹಾಕಿದ್ದಾರೆ. ಮೊಸರು, ಅಕ್ಕಿ ಸೇರಿದಂತೆ ಎಲ್ಲದರ ಮೇಲೂ ಟ್ಯಾಕ್ಸ್ ಹೇರಿದ್ದಾರೆ. ಬರೀ ಅಂಬಾನಿ ಅದಾನಿ ಎರಡು ಕಂಪನಿಗಳಿಗೆ ಸೇರಿದ ಸರ್ಕಾರ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು, ಯುವಕರಿಗೆ ಹೇಗೆ ಕೆಲಸ ಕೊಡಿಸುವುದು, ಅವರನ್ನು ಹೇಗೆ ಮುಂದಕ್ಕೆ ತರುವುದು ಎಂಬುದು ಕಾಂಗ್ರೆಸ್ ಯೋಚನೆ ಮಾಡಿದ್ದು, ಬಿಜೆಪಿಯವರ ಯೋಚನೆ ಹೇಗೆ ಪಿಕ್ ಪಾಕೆಟ್ ಮಾಡೋದು, ದುಡ್ಡು ಮಾಡೋದು ಹೇಗೆ ಎಂಬುದಾಗಿದೆ. ಇದರ ವಿರುಧ್ಧ ನಾವು ಹೋರಾಟ ಮಾಡಲು ಯೋಜನೆ ರೂಪಿಸಿದ್ದೇವೆ. ಕಾಂಗ್ರೆಸ್ ನಲ್ಲಿ ಯಾವುದೇ ಬಣಗಳಿಲ್ಲ, ಸಾಮೂಹಿಕ ನಾಯಕತ್ವದಿಂದ ಚುನಾವಣೆಗೆ ಹೋಗುತ್ತೇವೆ. ಮುಂದಿನ ಚುನಾವಣೆಯಲ್ಲಿ ನಮ್ಮ ಸರ್ಕಾರ ಬಂದೇ ಬರುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಒಂದಾದರೂ ಜನಪರ ಕಾರ್ಯಕ್ರಮ ತಂದಿದ್ದಾರಾ ಎಂದು ಬಿಜೆಪಿ ಸರ್ಕಾರದ ವಿರುದ್ದ ನಲಪಾಡ್ ಕಿಡಿಕಾಡಿದ್ದಾರೆ.

RELATED ARTICLES

Related Articles

TRENDING ARTICLES