Monday, December 23, 2024

ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಮುಂದಾದ ಬಿಜೆಪಿ

ಮೈಸೂರು : ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಪ್ಲಾನ್ ರೂಪಿಸಿದ್ದು, ಇಂದು ಕೆ.ಆರ್ ಪೇಟೆಯಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆಯನ್ನು ನೀಡಲಿದ್ದಾರೆ.

ನಗರದ ಕಾರ್ಯಕ್ರಮಗಳ ಶಂಕುಸ್ಥಾಪನೆ, ಉದ್ಘಾಟನಾ ಕಾರ್ಯಕ್ರಮ ಆಯೋಜನೆ ನೀಡಿದ್ದು, ಸರ್ಕಾರಿ ಯೋಜನೆ ಚಾಲನೆ ನೀಡೋದ್ರ ಜೊತೆಯಲ್ಲೇ ಈಗಿನಿಂದಲೇ ಪಕ್ಷ ಸಂಘಟನೆ ಮಂಡ್ಯ ಭಾಗದ ಟಿಕೆಟ್ ಆಕಾಂಕ್ಷಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಹಲವು ಸಚಿವರು ಭಾಗಿಯಾಗಲಿದ್ದಾರೆ.

ಬೆಳಗ್ಗೆ 9:30 ಕ್ಕರ ಬೆಂಗಳೂರಿನಿಂದ ಮಂಡ್ಯಕ್ಕೆ ಸಿಎಂ ಪ್ರಯಾಣ ಬೆಲೆಸಲಿದ್ದು, HAL ನಿಂದ ವಿಶೇಷ ವಿಮಾನ ನಿಲ್ದಾಣದಿಂದ ಮಾಜಿ ಸಿಎಂ ಬಿಎಸ್ವೈ, ಸಿಎಂ ಬೊಮ್ಮಾಯಿ‌ ಒಟ್ಟಿಗೆ ಪ್ರಯಾಣ ಬೆಳೆಸಲಿದ್ದಾರೆ. 10:40 ಕ್ಕೆ ಮಂಡ್ಯ ಕೆ.ಆರ್.ಪೇಟೆ ತಲುಪಲಿರುವ ನಾಯಕರು, ಬಳಿಕ ವಿವಿಧ ಕಾಮಗಾರಿಗಳಿಗೆ ಉದ್ಘಾಟನೆ, ಶಂಕುಸ್ಥಾಪನೆ, ಸರ್ಕಾರಿ ಸವಲತ್ತುಗಳನ್ನು ವಿತರಣೆ ಮಾಡಿದ ಬಳಿಕ ಸಿಎಂ ಬೊಮ್ಮಾಯಿ ಮಧ್ಯಾನ್ಹ 3 ಕ್ಕೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.

RELATED ARTICLES

Related Articles

TRENDING ARTICLES