Wednesday, January 22, 2025

ದೇಶಾದ್ಯಂತ ಕಿಚ್ಚ ಹಲ್​ಚಲ್; ರೋಣನಿಗೆ ವೈರಲ್ ಫೀವರ್

ಪ್ಯಾನ್ ಇಂಡಿಯಾ ಸಿನಿಮಾಗಳ ಭರಾಟೆಯಲ್ಲಿ ಕನ್ನಡಿಗರದ್ದೇ ಕಾರುಬಾರು, ದರ್ಬಾರ್. ಜುಲೈ ಎಂಡ್​ಗೆ ವಿಕ್ರಾಂತ್ ರೋಣ ತೆರೆಗಪ್ಪಳಿಸಲಿದ್ದು, ದೇಶಾದ್ಯಂತ ರೋಣನ ಫೀವರ್ ಸಖತ್ ಜೋರಿದೆ. ಆದ್ರೆ ಅದ್ರ ಪ್ರೊಮೋಷನ್​ನಿಂದ ಅಭಿನಯ ಚಕ್ರವರ್ತಿಗೇನೇ ಫೀವರ್ ಬಂದಿರೋದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಗುಮ್ಮ ಸಾಂಗ್ ಜೊತೆ ಕಿಚ್ಚ ಆಲ್​ರೈಟ್ ಸಿಹಿಸುದ್ದಿಯ ಹೂರಣ ನಿಮ್ಮ ಮುಂದೆ.

ದೇಶಾದ್ಯಂತ ಕಿಚ್ಚ ಹಲ್​ಚಲ್.. ರೋಣನಿಗೆ ವೈರಲ್ ಫೀವರ್

ಸೋಶಿಯಲ್ ಮೀಡಿಯಾದಲ್ಲಿ ಕೊರೋನಾ ಎಂಬ ವದಂತಿ

ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ಎಂದ ಜಾಕ್ ಮಂಜು..!

ಗುಮ್ಮ ಬಂದ ಗುಮ್ಮ.. ಅಭಿನಯ ಚಕ್ರವರ್ತಿ ರೌದ್ರಾವತಾರ

ತ್ರಿಬಲ್ ಆರ್, ಕೆಜಿಎಫ್ ನಂತ್ರ ಭಾರತೀಯ ಚಿತ್ರರಂಗದಲ್ಲಿ ಸಖತ್ ಸದ್ದು ಮಾಡ್ತಿರೋ ಸೌತ್​ನ ಪ್ಯಾನ್ ಇಂಡಿಯಾ ಸಿನಿಮಾ ಅಂದ್ರೆ ವಿಕ್ರಾಂತ್ ರೋಣ. ಇದು ಪಕ್ಕಾ ಆ್ಯಕ್ಷನ್ ಅಡ್ವೆಂಚರ್ ಫ್ಯಾಂಟಸಿ ಎಂಟರ್​ಟೈನರ್ ಆಗಿದ್ದು, ಈಗಾಗ್ಲೇ ರೋಣನ ಪ್ರಪಂಚದಲ್ಲಿ ಏನೆಲ್ಲಾ ಇದೆ ಅನ್ನೋದು ಸ್ಯಾಂಪಲ್ಸ್​ನಿಂದ ಅನಾವರಣಗೊಂಡಿದೆ.

ಕನ್ನಡದ ಜೊತೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್ ಹೀಗೆ ದೇಶ ವಿದೇಶಗಳೆಲ್ಲಾ ಇದೇ ಜುಲೈ 28ಕ್ಕೆ ರಿಲೀಸ್ ಆಗ್ತಿರೋ ರೋಣನ ಫೀವರ್ ಸಖತ್ ಜೋರಿದೆ. ಆದ್ರೆ ಅದ್ರ ಪ್ರಚಾರ ಕಾರ್ಯಗಳು ಕೂಡ ಭರದಿಂದ ಸಾಗ್ತಿದ್ದು, ಪ್ರೊಮೋಷನ್ಸ್ ಮಾಡಿ ಹೈರಾಣಾಗಿರೋ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ಗೇನೇ ಫೀವರ್ ಬಂದಿರೋದು ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದೆ.

ಅಂದಹಾಗೆ ಸುದೀಪ್ ಅವ್ರಿಗೆ ಕೊರೋನಾ ಪಾಸಿಟಿವ್ ಆಗಿದೆ ಅನ್ನೋ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿತ್ತು. ಈ ಕುರಿತು ಸ್ಪಷ್ಟನೆ ನೀಡಿರೋ ನಿರ್ಮಾಪಕ ಕಮ್ ಕಿಚ್ಚನ ಆಪ್ತ ಗೆಳೆಯ ಜಾಕ್ ಮಂಜು, ಅದು ಕೊರೋನಾ ಅಲ್ಲ, ಜಸ್ಟ್ ವೈರಲ್ ಫೀವರ್ ಅಷ್ಟೇ ಎಂದಿದ್ದಾರೆ. ಮಳೆಯಲ್ಲಿ ನೆಂದಿರೋದ್ರ ಜೊತೆ ಕ್ರಿಕೆಟ್ ಆಡಿದ್ರು, ಜೊತೆಗೆ ಪ್ರಚಾರ ಕಾರ್ಯಗಳಿಗಾಗಿ ಡೆಲ್ಲಿ, ಮುಂಬೈ ಸುತ್ತಿಬಂದಿದ್ರು, ಹೀಗಾಗಿ ಓಡಾಟ ಹೆಚ್ಚಾಗಿ ಫೀವರ್ ಬಂದಿದೆ ಅನ್ನೋದು ನಿರ್ಮಾಪಕರ ಮಾತಾಗಿದೆ.

ಇನ್ನು ವಿಕ್ರಾಂತ್ ರೋಣ ನೊಡುಗರನ್ನ ಬೇರೆಯದ್ದೇ ಪ್ರಪಂಚಕ್ಕೆ ಕೊಂಡೊಯ್ಯಲಿದ್ದು, ಗುಮ್ಮನಾಗಿ ನೋಡುಗರ ಮನಸನ್ನ ಗುಮ್ಮಲಿದ್ದಾರೆ ಆಲ್ ಇಂಡಿಯಾ ಕಟೌಟ್ ಕಿಚ್ಚ ಸುದೀಪ್. ಅನೂಪ್ ಭಂಡಾರಿ ಬರೆದಿರೋ ಕತ್ತಲಲ್ಲಿ ಕಳ್ಳನಂತೆ, ಬೇಟೆಯಾಡೋ ಬಿಲ್ಲನಂತೆ ಅನ್ನೋ ಸಾಲುಗಳ ಸಾಹಿತ್ಯವಿರೋ ನ್ಯೂ ಸಾಂಗ್ ಲಾಂಚ್ ಆಗಿದೆ. ಗುಮ್ಮ ಬಂದ ಗುಮ್ಮ ಅನ್ನೋ ಈ ಹಾಡಿಗೆ ಅಜನೀಶ್ ಲೋಕನಾಥ್​ರ ಸಂಗೀತವಿದ್ದು, ಅನೂಪ್, ದೀಪಕ್, ಅಜನೀಶ್ ಗಾಯನವಿದೆ.

ಭಯನೇ ಇಲ್ಲದಿರೋ ಡೆಡ್ಲಿ ಡೆವಿಲ್ ವಿಕ್ರಾಂತ್ ರೋಣನ ಗತ್ತು, ಗಮ್ಮತ್ತು ಸಾರುವ ಸಾಂಗ್ ಇದಾಗಿದ್ದು, ಚಿತ್ರದ ತೂಕ ಮತ್ತಷ್ಟು ಹೆಚ್ಚಿಸಿದೆ. ಒಂದ್ಕಡೆ ರೋಣ ಆಲ್ಬಂನಿಂದ ನ್ಯೂ ಸಾಂಗ್ ಬಂದಿರೋ ಖುಷಿ. ಮತ್ತೊಂದ್ಕಡೆ ಸುದೀಪ್​ ಆರೋಗ್ಯದ ಬಗ್ಗೆ ಆತಂಕ. ಆದ್ರೆ ಜಾಕ್ ಮಂಜು ಅವ್ರು ಆ ಆತಂಕ ದೂರವಾಗಿಸಿದ್ದು, ವಿಡಿಯೋ ಮೂಲಕ ಸ್ಪಷ್ಟನೆ ನೀಡಿರೋದು ಸುದೀಪಿಯೆನ್ಸ್​ನ ನಿರಾಳಗೊಳಿಸಿದೆ.

ಅನೂಪ್ ಭಂಡಾರಿ ನಿರ್ದೇಶನದ, ಸುದೀಪ್, ಜಾಕ್ವೆಲಿನ್, ನಿರೂಪ್ ಭಂಡಾರಿ, ನೀತಾ ಅಶೋಕ್ ನಟನೆಯ ಈ ಸಿನಿಮಾ ಇದೇ ಜುಲೈ 28ಕ್ಕೆ ವಿಶ್ವದಾದ್ಯಂತ ಗ್ರ್ಯಾಂಡ್ ರಿಲೀಸ್ ಆಗಲಿದೆ. ಜಾಕ್ ಮಂಜು ಅವ್ರ ಪ್ರೊಡಕ್ಷನ್ ವ್ಯಾಲ್ಯೂಸ್​ ಎಂಥದ್ದು ಅನ್ನೋದು ಸದ್ಯದಲ್ಲೇ ಅನಾವರಣಗೊಳ್ಳಲಿದ್ದು, ನಾಳೆಯಿಂದ ಕಿಚ್ಚ ಅಗೈನ್ ಪ್ರೊಮೋಷನಲ್ ಕೆಲಸಗಳಲ್ಲಿ ಭಾಗಿಯಾಗಲಿದ್ದಾರೆ ಅನ್ನೋದು ಲೇಟೆಸ್ಟ್ ಖಬರ್. ಇನ್ನು ಎಲ್ಲರ ಚಿತ್ತ ಪ್ರೀ ರಿಲೀಸ್ ಇವೆಂಟ್ ಮೇಲಿದ್ದು, ಗುಮ್ಮ ಜೋರಾಗೇ ಗುಡುಗಲಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES