Sunday, November 24, 2024

ರೈತರ ಬೆಳೆಗಳಿಗೆ ಬಸವನಹುಳುವಿನ ಕಾಟ..!

ಕಲಬುರಗಿ : ರೈತರು ಬೆಳೆದ ಬೆಳೆಗಳನ್ನು ತಿಂದು ಇಡೀ ಬೆಳೆ ನಾಶ ಮಾಡುತ್ತಿರುವ ದೃಶ್ಯ, ಕಲಬುರಗಿ ಹಾಗೂ ಬೀದರ್‌ ಜಿಲ್ಲೆಗಳ ರೈತರ ಜಮೀನುಗಳಲ್ಲಿ ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತಿವೆ. ಸದ್ಯ ಪ್ರಸಕ್ತ ಮುಂಗಾರಿನಲ್ಲಿ ರೈತರು ಬಿತ್ತನೆ ಮಾಡಿದ ಉದ್ದು,ಹೆಸರು ಹಾಗು ಸೋಯಾ ಬೆಳೆಗಳನ್ನೆ ಈ ಬಸವನ ಹುಳುಗಳು ಸಂಪೂರ್ಣ ತಿಂದು ಹಾಕುತ್ತಿವೆ. ಇನ್ನು ರೈತರ ಕಣ್ಣು ಎದುರಿಗೆ ಬೆಳೆ ಹಾನಿಯಾದ್ರೂ ಇದಕ್ಕೆ ಯಾವ ಔಷಧಿಯೂ ಇರದ ಹಿನ್ನೆಲೆ ರೈತರ ಕೈ ಕಟ್ಟಿ ಕೂಡುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಪ್ರತಿ ಎಕರೆಗೆ 12 ಸಾವಿರ ರೂಪಾಯಿ ಪರಿಹಾರಕ್ಕೆ ಆಗ್ರಹಿಸಲಾಗಿದೆ.

ಇನ್ನು ಪ್ರತಿ ಬಾರಿ‌ ಈ ಬಸವನ ಹುಳುಗಳು ಸರಿಸುಮಾರು 100ರ ಆಸುಪಾಸಿನಲ್ಲಿ ಮೊಟ್ಟೆ ಇಡುತ್ತವೆ. ಹೀಗಾಗಿ ದಿನ ಕಳೆದಂತೆ ಈ ಹುಳುಗಳ ಕಾಟ ಹೆಚ್ಚಾಗಿ ರೈತರಲ್ಲಿ‌ ಮತ್ತಷ್ಟು ಆತಂಕ ಸೃಷ್ಟಿಸುತ್ತಿವೆ. ಸದ್ಯ ಕೃಷಿ ಇಲಾಖೆ ಅಧಿಕಾರಿಗಳ ಪ್ರಕಾರ ಕಲಬುರಗಿಯ ಆಳಂದ,ಚಿಂಚೋಳಿ,ಕಮಲಾಪುರ ಹಾಗೂ ಬೀದರ್ ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ಶೇಕಡಾ 60 ರಷ್ಟು ಬೆಳೆ ಬಸವನ ಹುಳುಗಳಿಂದ ನಾಶವಾಗಿದೆ. ಆದ್ರೆ, ಈ ಹುಳುಗಳಿಗೆ ಔಷಧಿಯಿಲ್ಲ. ಹೀಗಾಗಿ ಉಪ್ಪಿನ ನೀರು ಅಥವಾ ಬೆಲ್ಲ‌ ಮಿಶ್ರಿತ ಚುರುಮುರಿ ಸಿಂಪಡಿಸಲು ಕೃಷಿ ಅಧಿಕಾರಿಗಳು ಸಲಹೆ ನೀಡುತ್ತಿದ್ದಾರೆ.

ಇನ್ನೂ ದುರಂತ ಅಂದ್ರೆ ಈ ಹುಳಗಳು ಹೀಗೆ ಬೆಳೆ ಹಾಳು ಮಾಡಿದ್ರೆ ಇದಕ್ಕೆ ರೈತರಿಗೆ ಇನ್ಸೂರೆನ್ಸ್ ಹಣ ಸಹ ಸಿಗುವುದಿಲ್ಲ, ಹೀಗಾಗಿ ಕಲಬುರಗಿ- ಬೀದರ್ ಜಿಲ್ಲೆಯ ರೈತರ ಸಂಕಷ್ಟ ಅರಿತು ಸರ್ಕಾರ ಅನ್ನದಾತರ ನೆರವಿಗೆ ಧಾವಿಸಬೇಕಾಗಿದೆ.

ಅನಿಲ್‌ಸ್ವಾಮಿ ಪವರ್ ಟಿವಿ ಕಲಬುರಗಿ

RELATED ARTICLES

Related Articles

TRENDING ARTICLES