Monday, December 23, 2024

ನನ್ನಿಂದಾಗಿ ಪಕ್ಷಕ್ಕೆ ಮುಜುಗರ ಆಯ್ತಲ್ಲಾ ಎಂಬ ನೋವು ಇದೆ : ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ : ನಾನು ನಂಬಿರುವ ತಾಯಿ ನನಗೆ ನಿನ್ನೆ ಮುಕ್ತನಾಗಿಸಿದ್ದಾಳೆ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಭಾಷಣ ಮಾಡಿದ ಅವರು ನನ್ನಿಂದಾಗಿ ಪಕ್ಷಕ್ಕೆ ಮುಜುಗರ ಆಯ್ತಲ್ಲಾ ಎಂಬ ನೋವು ಇದೆ. ಆ ಸಂತೋಷ್ ಪಾಟೀಲ್ ಯಾಕೆ ಸಣ್ಣ ವಯಸ್ಸಿನಲ್ಲೆ ಸತ್ತ ಎಂಬ ನೋವು ಇದೆ. ಸಣ್ಣ ವಯಸ್ಸಿನಲ್ಲೇ ಆ ಹೆಣ್ಣು ಮಗಳು ವಿಧವೆ ಆದಳಲ್ಲಾ ಎಂಬ ನೋವಿದೆ. ಸಂತೋಷ್ ಪಾಟೀಲ್ ಯಾಕೆ ಆತ್ಮಹತ್ಯೆ ಮಾಡಿಕೊಂಡ ಎಂಬ ಪ್ರಶ್ನೆ ಮತ್ತು ನೋವಿದೆ. ನಾನು ನಂಬಿರುವ ತಾಯಿ ನನಗೆ ನಿನ್ನೆ ಮುಕ್ತನಾಗಿಸಿದ್ದಾಳೆ ಎಂದರು.

ಇನ್ನು, ನಾನು ಈಗ ಕಾರಲ್ಲಿ ಬರುವಾಗ ಕಾಂಗ್ರೆಸ್ ನ ಲೀಡರ್ ಒಬ್ಬರು ಫೋನ್ ಮಾಡಿದ್ದರು. ಅಣ್ಣಾ ನಿನ್ನ ಮೇಲೆ ಈ ಆರೋಪ ಯಾಕೆ ಬಂತು ಎಂಬುದೇಗೊತ್ತಾಗುತ್ತಿಲ್ಲ. ಏನಾದ್ರೂ ಆಗ್ಲೀ ನಿನಗೆ ಅಭಿನಂದನೆಗಳು ಎಂದು ಹೇಳಿದರು. ಕಾಂಗ್ರೆಸ್ ನವರಿಗೂ ಸತ್ಯಾಂಶ ಏನು ಎಂಬುದು ತಿಳಿದು ಬಂದಿದೆ ಎಂದರು.

RELATED ARTICLES

Related Articles

TRENDING ARTICLES