Tuesday, November 5, 2024

ಕಾಂಗ್ರೆಸ್​​​ನವ್ರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ವಾ?: ಮಹೇಶ್ ಟೆಂಗಿನಕಾಯಿ

ಬೆಂಗಳೂರು: ಕಾಂಗ್ರೆಸ್​​​ನವ್ರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ವಾ? ಎಂದು ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಅವರು ಕಾಂಗ್ರೆಸ್​​ ನಾಯಕರಿಗೆ ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್ ಪ್ರತಿಭಟನೆ ವಿಚಾರಕ್ಕೆ ಸಂಭಂದಿಸಿದಂತೆ ಬಿಜೆಪಿ ಕಚೇರಿಯಲ್ಲಿ ಛಲವಾದಿ ನಾರಾಯಣ ಸ್ವಾಮಿ ಹಾಗೂ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಅವರು ಜಂಟಿ ಸುದ್ದಿಗೋಷ್ಟಿಯನ್ನು ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ನವ್ರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ವಾ? ತನಿಖೆನೇ ಮಾಡಬೇಡಿ ಅನ್ನೋದು ಎಷ್ಟು ಸರಿ? ರಮೇಶ್ ಕುಮಾರ್ ಅವರು ಋಣ ತೀರಿಸುವ ಮಾತಾಡಿದಾರೆ. ಅವರ ಮಾತಿಂದಲೇ ಕಾಂಗ್ರೆಸ್ ನವ್ರು ಭ್ರಷ್ಟಾಚಾರ ಮಾಡಿ ಬಂದವರು ಅಂತ ಗೊತ್ತಾಗುತ್ತೆ. ಕಾಂಗ್ರೆಸ್ ಪ್ರತಿಭಟನೆಗೆ ಬಿಜೆಪಿ ವಿರೋಧ ಇದೆ. ಎಲ್ಲ ಪಕ್ಷಗಳ ಅನೇಕ ನಾಯಕರೂ ಕೇಸ್ ಗಳನ್ನು ಎದುರಿಸಿದ್ದಾರೆ. ಕಾಂಗ್ರೆಸ್ ಪ್ರತಿಭಟನೆ ಮೂಲಕ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದೆ. ಸೋನಿಯಾ ಗಾಂಧಿ ವಿಚಾರಣೆ ಎದುರಿಸಲಿ. ನಿರ್ದೋಷಿ ಆಗಿದ್ರೆ ಹೊರಗೆ ಬರ್ತಾರೆ ಎಂದು ತಿಳಿಸಿದರು.

ಕಾಂಗ್ರೆಸ್ ನಾಯಕರು ಪ್ರಶ್ನಾತೀತರೇ? ಬಿಜೆಪಿಯವರು ಪ್ರಶ್ನಾತೀತರೇ? ಯಾರೂ ಈ ದೇಶದಲ್ಲಿ ಪ್ರಶ್ನಾತೀತರಲ್ಲ. ಮೋದಿ, ಅಮಿತ್ ಶಾ ಸಹ ವಿಚಾರಣೆ ಎದುರಿಸಿ ಬಂದವರೇ. ಕಾನೂನು ಮೀರಿ ಏನೂ ಮಾಡಕ್ಕಾಗಲ್ಲ. ಇವತ್ತಿನ ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟ ಮಾಡಿಲ್ಲ. ಸೋನಿಯಾಗಾಂಧಿ ಯಾವಾಗ ಸ್ವಾತಂತ್ರ್ಯ ಹೋರಾಟ ಮಾಡಿದ್ರು ? ಗಾಂಧೀಜಿ ನೇತೃತ್ವದ ಕಾಂಗ್ರೆಸ್ ಮಾತ್ರ ಸ್ವಾತಂತ್ರ್ಯ ಹೋರಾಟ ಮಾಡಿರೋದು. ಅದು ಆಗಿನ ಕಾಂಗ್ರೆಸ್, ಗಾಂಧಿ-ನೆಹರೂ ಜೋಡೆತ್ತು ಇದ್ದ ಕಾಂಗ್ರೆಸ್ ಅದು ಎಂದು ವಾಗ್ದಾಳಿ ನಡೆಸಿದರು.

ಇನ್ನು ಇದೇ ವೇಲೆ ರಮೇಶ್ ಕುಮಾರ್ ಋಣ ಸಂದಾಯದ ಹೇಳಿಕೆಗೆ ಪ್ರತಿಕ್ರಿಯಿಸಿ, ನಾಲ್ಕು ತಲೆಮಾರಿಗೆ ಬೇಕಾಗುವಷ್ಟು ಮಾಡಿಕೊಂಡಿದೀವಿ ಅಂದ್ರೆ ಏನರ್ಥ? ದೇಶ ಲೂಟಿ ಮಾಡಿದೀವಿ ಅಂತಾರೆ? ಋಣ ತೀರಿಸಲಿಲ್ಲ‌ ಅಂದ್ರೆ ತಿನ್ನೋ ಅನ್ನಕ್ಕೆ ಹುಳ ಬೀಳುತ್ತೆ ಅಂದಿದ್ದಾರೆ.ಇಡಿ ವಿಚಾರಣೆ ನಡೀತಿರೋದು ಸರಿ ಇದೆ. ಕಾರುಗಳಿಗೆ ಅವರೇ ಬೆಂಕಿ ಹಾಕಿದಾರೆ. ಇದು ಸಂವಿಧಾನ ರಕ್ಷಣೆ ಮಾಡೋ ರೀತೀನಾ? ಎಂದು ಅವರ ಹೇಳಿಕೆಗಳು ಖಂಡನೀಯವಾಗಿದೆ ಎಂದರು.

RELATED ARTICLES

Related Articles

TRENDING ARTICLES