Wednesday, January 22, 2025

ಅನ್ನಭಾಗ್ಯಕ್ಕೆ ಕನ್ನ: ಬಿಜೆಪಿಗರು ಎಲ್ಲದರಲ್ಲೂ ನುಂಗಣ್ಣರಾಗಿದ್ದಾರೆ; ಬಿ‌ ಕೆ ಹರಿಪ್ರಸಾದ್

ಬೆಂಗಳೂರು: ಬಿಜೆಪಿಗರು ಎಲ್ಲದರಲ್ಲೂ ನುಂಗಣ್ಣರಾಗಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ.

ಸ್ಟಿಂಗ್ ಆಪರೇಷನ್​​ಗಳ ಕಿಂಗ್ ಪವರ್ ಟಿವಿಯ ಪವರ್ ಫುಲ್ ಸ್ಟಿಂಗ್​​ಗೆ ಸರ್ಕಾರದ ಉಸಿರು ಗಟ್ಟುತ್ತೆ. ಹೌದು ಬೆಳಗಿನಿಂದಲೇ ಹೊಟ್ಟೆಗೆ ಏನ್ ತಿಂತಿರಿ ಸ್ಟಿಂಗ್ ಆಪರೇಷನ್ ಕಾರ್ಯಕ್ರಮ ನಡೆಯುತ್ತಿದ್ದು ರಾಜ್ಯದ ಜನರ ಗಮನ ಸೆಳೆದಿದೆ. ಬಡವರ ಹೊಟ್ಟೆ ಸೇರಬೇಕಿದ್ದ ಪಡಿತರ ಅಕ್ಕಿ ಅಕ್ರಮ ಸಾಗಾಟ ದಂದೆಯ ಮಾಫೀಯಾ ಕುರಿತು ಪವರ್ ಟಿವಿ ಲೈವ್ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು, ನಮಗೂ ಕೂಡ ಈ ಬಗ್ಗೆ ಮಾಹಿತಿ ಬಂದಿದೆ. ಕಾಳಸಂತೆಯಲ್ಲಿ ಅಕ್ಕಿ ಮಾರಾಟ ವಾಗುತ್ತಿದೆ. ಅನ್ನಭಾಗ್ಯ ಅಕ್ಕಿಹೆ ಪಾಲಿಸ್ ಮಾಡಿ ಮಾರಾಟ ವಾಗುತ್ತಿದೆ. ಇದರಲ್ಲಿ ಅಧಿಕಾರಿಗಳು, ಸಚಿವರು ಎಲ್ಲರೂ ಭಾಗಿಯಾಗಿದ್ದಾರೆ. ಈ ಬಗ್ಗೆ ಹೋರಾಟ ಮಾಡುವ ಬಗ್ಗೆ ಕುಳಿತು ಚರ್ಚೆ ಮಾಡುತ್ತೇವೆ ಹಾಗೂ ಪವರ್ ಟಿವಿ ವರದಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಇದೇ ವೇಳೆ ಪವರ್ ಟಿವಿ ಸ್ಟಿಂಗ್​​ಗೆ ಬಿ‌ ಕೆ ಹರಿಪ್ರಸಾದ್ ಅವರು, ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹಾಗೂ ಬಿಜೆಪಿಗರಿಂದ ಮತ್ತೆನನ್ನೂ ಸಾಧ್ಯವಿದೆ. ಅವರು ಎಲ್ಲದರಲ್ಲೂ ನುಂಗಣ್ಣರಾಗಿದ್ದಾರೆ. ತಿನ್ನೊ ಅನ್ನಕ್ಕೂ ಕನ್ನ ಹಾಕಿದ್ದಾರೆ. ಈ ಬಗ್ಗೆ ತನಿಖೆ ಆಗಬೇಕು. ಮುಂದಿನ ದಿನದಲ್ಲಿ ಈ ಬಗ್ಗೆ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದರು.

RELATED ARTICLES

Related Articles

TRENDING ARTICLES