Friday, January 24, 2025

ವಿಜಯಪುರದಲ್ಲಿ ನಾಲ್ಕು ವರ್ಷದ ಗಂಡು ಮಗು ಕಳ್ಳತನಕ್ಕೆ ಯತ್ನ

ವಿಜಯಪುರ : ನಾಲ್ಕು ವರ್ಷದ ಗಂಡು ಮಗು ಕಳ್ಳತನಕ್ಕೆ ಯತ್ನ ಮಾಡಿದ ಘಟನೆ ವಿಜಯಪುರ ನಗರದ ಬಸವನ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಕಳ್ಳನ ಬೆನ್ನಟ್ಟಿ ಕಳ್ಳನಿಂದ ಮಗು ರಕ್ಷಿಸಿದ ತಾಯಿ ರೇಣುಕಾ. ಬಳಿಕ ಕಳ್ಳನನ್ನ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಜನ ಜಮಾಯಿಸಿದ್ದು ನೋಡಿ ಮಾನಸಿಕ ಅಸ್ವಸ್ಥನಂತೆ ಕಳ್ಳನ ಡ್ರಾಮಾ ಮಾಡಿದ್ದು, ದಾದಾಪೀರ, ಕಾಸೀಮ್, ಸಲೀಮ್, ಮೈಬೂಬ್ ಎಂದೆಲ್ಲ ಹೆಸರು ಹೇಳಿದ್ದಾನೆ.

ಸಂತೋಷ್ -ರೇಣುಕಾ ದಂಪತಿಯ ಗಂಡು ಮಗುವನ್ನು, ನಾಲ್ಕು ವರ್ಷದ ಮಗು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ ಖದೀಮ ಅಂಗಡಿಗೆ ಬಂದಿದ್ದ ಮಗುವನ್ನು ಕದ್ದು ಕೊಂಡು ಹೋಗುತ್ತಿದ್ದ. ಮಗು ಅಳುವ ದ್ವನಿ ಕೇಳಿ ತಾಯಿ ರೇಣುಕಾ ಕಳ್ಳನ ಬೆನ್ನಟ್ಟಿ ಹಿಡಿದು ಮಗುವಿನ ರಕ್ಷಣೆ ಮಾಡಲಾಗಿದ್ದು, ಬಳಿಕ ಸ್ಧಳೀಯರು ಕಳ್ಳನನ್ನು ಕಂಬಕ್ಕೆ ಕಟ್ಟಿ ಥಳ್ಳಿಸಿದ್ದಾರೆ.

RELATED ARTICLES

Related Articles

TRENDING ARTICLES