Sunday, December 22, 2024

ತಲೆನೋವಿಗೆ ಪ್ರತಿಬಾರಿ ಮಾತ್ರೆ ತೆಗೊಳೋದಕ್ಕಿಂತ ಇವುಗಳನ್ನು ಟ್ರೈ ಮಾಡಿ

ತಲೆನೋವು ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ.  ತಲೆನೋವು ಬಂದರೆ ಸಾಕಪ್ಪ ಎನ್ನುವಷ್ಟು ನಮ್ಮನ್ನು ಬಾಧಿಸುತ್ತದೆ.  ಇದರ ನಿವಾರಣೆಗೆ ನಾವು ಮಾತ್ರೆ ಹಾಗೇ ಕ್ಲಿನಿಕ್ ಮೊರೆ ಹೋಗುತ್ತೇವೆ. ನಾನಾ ಪ್ರಯೋಗಗಳನ್ನು ಮಾಡುತ್ತೇವೆ.

ಏನೇ ಮಾಡಿದರೂ ನಿಮ್ಮ ತಲೆ ನೋವು ಸರಿ ಹೋಗಿರುವುದಿಲ್ಲ. ಒತ್ತಡ , ಅತೀ ಯೋಚನೆಯಿಂದಲೂ ನಿಮಗೆ ತಲೆ ನೋವು ಕಾಣಿಸುತ್ತದೆ. ಮನೆಯಲ್ಲಿ ಸಿಗುವ ವಸ್ತುಗಳನ್ನು ಉಪಯೋಗಿಸಿ ನಿಮ್ಮ ತಲೆ ನೋವಿಗೆ ಪ್ರಾಥಮಿಕ ಚಿಕಿತ್ಸೆ ಮಾಡಿಕೊಳ್ಳಬಹುದು. ನೋವು ಕಡಿಮೆಯಾಗಲು ನೀವು ಈ ರೀತಿಯ ಪರಿಹಾರವನ್ನು ಅನುಸರಿಸಬಹುದು.

ಎಲ್ಲರ ಅಡುಗೆ ಮನೆಯಲ್ಲಿ ಲವಂಗವಿರುತ್ತದೆ. ಲವಂಗ ಮತ್ತು ಉಪ್ಪನ್ನು ಬಳಸಿ ಪರಿಹಾರ ಕಾಣಬಹುದು. ಈ ಮನೆಮದ್ದನ್ನು ತಯಾರಿಸಲು ಲವಂಗ ಪುಡಿ ಮತ್ತು ಉಪ್ಪಿನ ಮಿಶ್ರಣವನ್ನು ಸಿದ್ಧಪಡಿಸಬೇಕು. ಈ ಮಿಶ್ರಣವನ್ನು ಹಾಲಿನೊಂದಿಗೆ ಸೇರಿಸಿ ಕುಡಿದರೆ ನಿಮ್ಮ ತಲೆನೋವು ಶೀಘ್ರವಾಗಿ ಕಡಿಮೆಯಾಗುತ್ತದೆ. ಹಾಗೆಯೇ  ಉಪ್ಪಿನಲ್ಲಿರುವ ಹೈಗ್ರಾಕೊಪಿಕ್ ಅಂಶಗಳು ತಲೆನೋವಿಗೆ ಪರಿಣಾಮಕಾರಿಯಾಗಿ ಫಲಿಸುತ್ತದೆ. ಹೀಗಾಗಿ ಈ ಮನೆಮದ್ದನ್ನು ಬಳಸಿ ಶ್ರೀಘ್ರದಲ್ಲೇ ತಲೆನೋವನ್ನು ನಿವಾರಿಸಿಕೊಳ್ಳಬಹುದು.

ಇನ್ನೂ ಸುಲಭ ವಿಧಾನವೆಂದರೆ ಕೊಬ್ಬರಿ ಎಣ್ಣೆಗೆ ಸ್ವಲ್ಪ ನಿಂಬೆರಸ ಮಿಶ್ರಣ ಮಾಡಿ ನೆತ್ತಿಗೆ ಹಚ್ಚಿದರೆ ತಲೆನೋವು ಕಡಿಮೆಯಾಗುತ್ತದೆ. ಇದು ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು  ಒಳ್ಳೆಯದು. 10 ರಿಂದ 15 ನಿಮಿಷದಲ್ಲಿ ತಲೆನೋವು ಕಡಿಮೆಯಾಗಿ ನಿಮಗೆ ಆರಾಮದಾಯಕ ಅನುಭವ ನೀಡುತ್ತದೆ.

 

RELATED ARTICLES

Related Articles

TRENDING ARTICLES