Wednesday, January 22, 2025

8 ಎಕರೆಯಲ್ಲಿ ಉಪ್ಪಿ UI ಸೆಟ್

ರಾಜಮೌಳಿ ಹಾಗೂ ಶಂಕರ್ ಸಿನಿಮಾಗಳಲ್ಲಿನ ಹೊಸ ಜಗತ್ತು ಕಂಡು ಬೆರಗಾಗ್ತಿದ್ದ ಸಿನಿಪ್ರಿಯರಿಗೆ ಅವುಗಳನ್ನ ಮೀರಿಸೋ ಅಂತಹ ಸಿನಿಪ್ರಪಂಚ ಕಟ್ಟಿಕೊಟ್ಟಿದ್ದು ಪ್ರಶಾಂತ್ ನೀಲ್. ಆದ್ರೆ ಅದ್ರ ಹಿಂದಿನ ಮಾಸ್ಟರ್​ಮೈಂಡ್ ಮಾತ್ರ ಒಬ್ಬರೇ. ಇದೀಗ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಕೇರ್ ಆಫ್ ಅಡ್ರೆಸ್ ಆಗಿರೋ ಆರ್ಟ್​ ಡೈರೆಕ್ಟರ್, ಉಪ್ಪಿಯ ಯುಐಗಾಗಿ 8 ಎಕರೆಯಲ್ಲಿ ಬೃಹತ್ ಸೆಟ್ ಹಾಕ್ತಿದ್ದಾರೆ. ಅದ್ರ ಇನ್​ಸೈಡ್ ಸ್ಟೋರಿ ನಿಮ್ಮ ಮುಂದೆ.

8 ಎಕರೆಯಲ್ಲಿ ಉಪ್ಪಿ UI ಸೆಟ್.. ಶಿವು ಕಣ್ಣಲ್ಲಿ ಕಬ್ಜ, ಸಲಾರ್

ಊರಲ್ಲೆಲ್ಲಾ ಚಾಲ್ತಿಯಲ್ಲಿರೋ ಏಕೈಕ ಆರ್ಟ್​ ಡೈರೆಕ್ಟರ್ ಶಿವು

ನಾನು ಡೈರೆಕ್ಟರ್ ಟೂಲ್ ಎಂದ ಕೆಜಿಎಫ್ ಆರ್ಟ್​ ಮಾಸ್ಟರ್

2002ರಲ್ಲೇ ರವಿಮಾಮನಿಂದ ಶಿಷ್ಯನಿಗೆ 10 ಸಾವಿರ ಸಂಭಾವನೆ

ಇಡೀ ವಿಶ್ವವೇ ನಮ್ಮ ಕನ್ನಡ ಸಿನಿದುನಿಯಾದತ್ತ ತಿರುಗಿ ನೋಡುವಂತೆ ಮಾಡಿದ ಚಿತ್ರ ಕೆಜಿಎಫ್. ಅದ್ರ ಹಿಂದಿನ ಮೂವರು ಮಾಸ್ಟರ್​​ಮೈಂಡ್ಸ್ ಅಂದ್ರೆ ಯಶ್, ಪ್ರಶಾಂತ್ ನೀಲ್ ಹಾಗೂ ವಿಜಯ್ ಕಿರಗಂದೂರು. ಆದ್ರೆ ಇವ್ರಿಗೆ ಸಪೋರ್ಟಿವ್ ಆಗಿ ನಿಂತಿದ್ದು, ವಿಶ್ಯುವಲ್ ಟ್ರೀಟ್ ನೀಡಿದ್ದು ಮಾತ್ರ ಮಾನ್​ಸ್ಟರ್ ಟೆಕ್ನಿಷಿಯನ್ಸ್. ಕೆಜಿಎಫ್​ನ ನರಾಚಿ ಸಾಮ್ರಾಜ್ಯದ ಹಿಂದಿರೋ ಕ್ರಿಯೇಟರ್, ಆರ್ಟ್​ ಡೈರೆಕ್ಟರ್ ಶಿವಕುಮಾರ್ ಅನ್ನೋದು ಎಲ್ರಿಗೂ ಗೊತ್ತೇಯಿದೆ.

ಎಲ್​ ಡೊರಾಡೋ ಆರ್ಟ್​ ಡಿಪಾರ್ಟ್​ಮೆಂಟ್ ಮೇಕಿಂಗ್ ವಿಡಿಯೋದಲ್ಲಿ ಅವ್ರ ಎಫರ್ಟ್​, ಹಾರ್ಡ್​ ವರ್ಕ್​ ಹಾಗೂ ಡೆಡಿಕೇಷನ್ ಎದ್ದು ಕಾಣ್ತಿತ್ತು. ತೆರೆ ಹಿಂದೆಯೇ ಇದ್ದು, ಸ್ಕ್ರೀನ್​ನ ಶ್ರೀಮಂತವಾಗಿ ಕಾಣುವಂತೆ ಮಾಡಿದ ರಿಯಲ್ ಹೀರೋ ಇವ್ರು. ಶಿವಕುಮಾರ್ ಅವ್ರ ಆರ್ಟ್​ ವರ್ಕ್​ ಎಂಥದ್ದು ಅನ್ನೋದನ್ನ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆದ್ರೆ ಇಂತಹ ಅತ್ಯದ್ಭುತ ಪ್ರತಿಭೆ ಯಾರ ಶಿಷ್ಯ ಅನ್ನೋ ಕ್ಯೂರಿಯಾಸಿಟಿ ಎಲ್ರಿಗೂ ಇದ್ದೇ ಇರುತ್ತೆ.

ಯೆಸ್.. ಇವ್ರು ಟ್ರೆಂಡ್ ಸೆಟ್ಟರ್, ಕನಸುಗಾರ ಡಾ. ವಿ ರವಿಚಂದ್ರನ್​ರ ಶಿಷ್ಯ. ಇವ್ರನ್ನ ಆರ್ಟ್​ ಡಿಪಾರ್ಟ್​ಮೆಂಟ್ ಅಥ್ವಾ ಸಿನಿಮಾ ಲೈನ್​ಗೆ ಕರೆತಂದಿದ್ದೇ ರವಿಮಾಮ. 2002ರಲ್ಲೇ ಸಣ್ಣದೊಂದು ಕೆಲಸಕ್ಕೆ 10 ಸಾವಿರದಷ್ಟು ದೊಡ್ಡ ಸಂಭಾವನೆ ನೀಡಿ, ಅವ್ರ ಕಲೆಗೆ ಬೆಲೆ ನಿಗದಿ ಮಾಡಿದ್ದು ಇದೇ ಕ್ರೇಜಿಸ್ಟಾರ್. ಅವ್ರೊಂಥರಾ ಲಕ್ಕಿ ಪರ್ಸನ್. ಅವ್ರ ಗರಡಿಯಿಂದ ಆಶೀರ್ವಾದ ಪಡೆದು ಬಂದ ಅದೆಷ್ಟೋ ಮಂದಿ ಇಂದು ದೊಡ್ಡ ಸ್ಥಾನಮಾನದಲ್ಲಿದ್ದಾರೆ.

ಅಂದಹಾಗೆ ಕೆಜಿಎಫ್ ಚಿತ್ರದಿಂದ ಶಿವಕುಮಾರ್ ಅವ್ರ ಡಿಮ್ಯಾಂಡ್ ಹೆಚ್ಚಾಯ್ತು ಅಂದ್ರೆ ತಪ್ಪಾಗಲ್ಲ. ಸದ್ಯ ಕನ್ನಡದಲ್ಲಿ ತಯಾರಾಗ್ತಿರೋ ಬಹುತೇಕ ಎಲ್ಲಾ ಪ್ಯಾನ್ ಇಂಡಿಯಾ ಸಿನಿಮಾಗಳ ಹಿಂದಿನ ಆರ್ಟ್​ ಮಾಸ್ಟರ್ ಇವ್ರೇ ಆಗಿದ್ದಾರೆ. ಪ್ರಶಾಂತ್ ನೀಲ್- ಡಾರ್ಲಿಂಗ್​ ಪ್ರಭಾಸ್​ರ ಸಲಾರ್, ಉಪೇಂದ್ರ- ಸುದೀಪ್ ಕಾಂಬೋನ ಕಬ್ಜ ಹಾಗೂ ಉಪ್ಪಿ ಡೈರೆಕ್ಷನ್​ನ ಯುಐ ಸಿನಿಮಾಗಳ ಹಿಂದೆ ಇವ್ರ ಕೈಚಳಕವಿದೆ.

ಸದ್ಯ ಇದೇ ಜುಲೈ 28ಕ್ಕೆ ಕಿಚ್ಚ ಸುದೀಪ್​ರ ಪ್ಯಾನ್ ವರ್ಲ್ಡ್​ ಸಿನಿಮಾ ವಿಕ್ರಾಂತ್ ರೋಣ ತೆರೆಗಪ್ಪಳಿಸುತ್ತಿದೆ. ಆ ಫ್ಯಾಂಟಮ್ ವರ್ಲ್ಡ್​ ಕ್ರಿಯೇಟರ್ ಒನ್ಸ್ ಅಗೈನ್ ಇದೇ ಶಿವಕುಮಾರ್. ನೋಡುಗರಿಗೆ ನೆಕ್ಸ್ಟ್ ಲೆವೆಲ್ ಕಿಕ್ ಕೊಡೋ ಅಂತಹ ಸ್ವಾಭಾವಿಕವಾದ ದಟ್ಟ ಅರಣ್ಯ, ಟೆಂಪಲ್, ಪೊಲೀಸ್ಟ್ ಸ್ಟೇಷನ್, ಗೋಡೌನ್ ಹೀಗೆ ಸಾಕಷ್ಟು ಬೃಹತ್ ಸೆಟ್​ಗಳನ್ನ ನಿರ್ಮಿಸಿದ್ದಾರೆ.

ಕೆಪಿ ಶ್ರೀಕಾಂತ್ ಹಾಗೂ ಲಹರಿ ಮ್ಯೂಸಿಕ್ ನಿರ್ಮಾಣದಲ್ಲಿ ತಯಾರಾಗ್ತಿರೋ ಯುಐ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಆ್ಯಕ್ಷನ್ ಕಟ್ ಹೇಳ್ತಿರೋದು ಗೊತ್ತೇಯಿದೆ. ಇದ್ರ ಮೇಕಿಂಗ್ ಬಾಲಿವುಡ್ ಸಿನಿಮಾಗಳನ್ನ ಮೀರಿದ್ದು ಅನ್ನೋದು ಈಗೀಗ ಅರ್ಥವಾಗ್ತಿದೆ. ಆರ್ಟ್​ ಡೈರೆಕ್ಟರ್ ಶಿವಕುಮಾರ್ ಅವ್ರೇ ಹೇಳಿದಂತೆ ಬೆಂಗಳೂರಿನ ಬಹುತೇಕ ಎಲ್ಲಾ ಸ್ಟುಡಿಯೋ ಫ್ಲೋರ್​ಗಳಲ್ಲಿ ಯುಐ ಶೂಟಿಂಗ್ ನಡೀತಿದೆ. ಅಲ್ಲದೆ, 8 ಎಕರೆ ವಿಶಾಲವಾದ ಭೂಮಿಯಲ್ಲಿ ಯುಐನ ಬೃಹತ್ ಸೆಟ್ ತಯಾರಾಗಲಿದೆಯಂತೆ. ಅಲ್ಲಿಗೆ ಸಿನಿಮಾದ ಮೇಕಿಂಗ್ ಕ್ವಾಲಿಟಿ, ಸ್ಕೇಲ್ ಎಷ್ಟರ ಮಟ್ಟಿಗೆ ಇರಲಿದೆ ಅಂತ ನೀವೇ ಊಹಿಸಿ.

ಒಟ್ಟಾರೆ ತಾನೊಬ್ಬ ಡೈರೆಕ್ಟರ್ ಟೂಲ್ ಅಷ್ಟೇ ಅನ್ನೋ ಈ ಆರ್ಟ್​ ಮಾಸ್ಟರ್, ಸಕ್ಸಸ್​​ಫುಲ್ ಸಿನಿಮಾಗಳ ಹಿಂದಿನ ಪ್ಯಾಷನೇಟ್ ಮಾಸ್ಟರ್​ಪೀಸ್ ಆಗಿರೋದು ಖುಷಿಯ ವಿಚಾರ. ಇವ್ರ ಕೆಲಸವನ್ನು ಡೈರೆಕ್ಟರ್ ಮೆಚ್ಚಿದ್ರೆ ಸಾಕಂತೆ. ಇದು ನಿಜವಾಗ್ಲೂ ಒಬ್ಬ ಟೆಕ್ನಿಷಿಯನ್​ಗೆ ಇರಬೇಕಿರೋ ಬೇಸಿಕ್ ಸೆನ್ಸ್. ಶಿವಕುಮಾರ್ ಅವ್ರ ಕಲಾಕುಂಚದಲ್ಲಿ ಹೀಗೆಯೇ ಬಿಗ್ ಬ್ಯಾನರ್ ಹಾಗೂ ಸದಭಿರುಚಿಯ ಸಿನಿಮಾಗಳು ಮೂಡಿ ಬರಲಿ ಅಂತ ಹಾರೈಸೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES