Wednesday, January 22, 2025

H.D.ಕೋಟೆಯಲ್ಲಿ ‘ನಮ್ಮ ಅಪ್ಪಾಜಿ ಕ್ಯಾಂಟೀನ್’ ಆರಂಭ

ಮಂಡ್ಯ: ವನಸಿರಿ ನಾಡು ಹೆಚ್.ಡಿ.ಕೋಟೆಯಲ್ಲಿ ಅಪ್ಪಾಜಿ ಕ್ಯಾಂಟಿನ್ ಲೋಕಾರ್ಪಣೆಯಾಗಿದೆ. ಹಸಿದು ಬಂದವ್ರಿಗೆ ಹೊಟ್ಟೆ ತುಂಬಾ ಅನ್ನ ನಿಡ್ಬೇಕು ಅನ್ನೋ ಉದ್ದೇಶದಿಂದ ಹೆಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ಕೃಷ್ಣ ನಾಯಕ ಆರಂಭಿಸಿರೋ ಅಪ್ಪಾಜಿ ಕ್ಯಾಂಟಿನ್‌ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದ್ದಾರೆ.

ವನಸಿರಿ ನಾಡು H.D.ಕೋಟೆಯ ಮಿನಿ ವಿಧಾನ  ಸೌಧದ ಎದುರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹೆಸರಿನಲ್ಲಿ ಅಪ್ಪಾಜಿ ಕ್ಯಾಂಟೀನ್ ಉದ್ಘಾಟನೆಗೊಂಡಿದೆ. ಹೆಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಕೃಷ್ಣ ನಾಯಕ್ ಆರಂಭಿಸಿರುವ ಅಪ್ಪಾಜಿ ಕ್ಯಾಂಟೀನ್‌ಗೆ HD ಕುಮಾರಸ್ವಾಮಿ ಚಾಲನೆ ನೀಡಿದರು.

ಇನ್ನು ಈ ಬಗ್ಗೆ ಮಾತನಾಡಿದ ಮಾಜಿ ಸಿ.ಎಂ.ಹೆಚ್.ಡಿ.ಕುಮಾರಸ್ವಾಮಿ ಕೃಷ್ಣ ನಾಯಕ್ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಇನ್ನು ಸೋಮವಾರದಿಂದ ಶನಿವಾರದವರೆಗೂ ಕಾರ್ಯನಿರ್ವಹಿಸಲಿರುವ ಅಪ್ಪಾಜಿ ಕ್ಯಾಂಟೀನ್‌ನಲ್ಲಿ ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟ ಕೇವಲ 10 ರೂಪಾಯಿಗೆ ಸಿಗಲಿದೆ. ಸುಮಾರು 8 ಮಂದಿ ಬಾಣಸಿಗರ ಮೂಲಕ ಅಡುಗೆ ತಯಾರಾಗಲಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಜೆಡಿಎಸ್ ಮುಖಂಡ ಕೃಷ್ಣನಾಯಕ ಇದು ಚುನಾವಣೆಗಾಗಿ ಆರಂಭ ಮಾಡಿರುವ ಕ್ಯಾಂಟೀನ್ ಅಲ್ಲ. ನಾನು ಇರೋವರೆಗೂ ಈ ಕ್ಯಾಂಟೀನ್ ಇರುತ್ತೆ. ಅತಿ ಕಡಿಮೆ ದರದಲ್ಲಿ ಆಹಾರ ನೀಡೋ ಉದ್ದೇಶ ನಮ್ಮದು ಎಂದರು.

ಒಟ್ಟಿನಲ್ಲಿ, ಒಂದೊಳ್ಳೆ ಉದ್ದೇಶದಿಂದ ಜೆಡಿಎಸ್ ಮುಖಂಡ ಕೃಷ್ಣ ನಾಯಕ್ ಅಪ್ಪಾಜಿ ಕ್ಯಾಂಟೀನ್ ಆರಂಭಿಸಿದ್ದು ಹಸಿದು ಬರೋ ಜನ್ರಿಗೆ ಆಹಾರ ನೀಡಲಿ ಎನ್ನೋದು ಕೂಡ ನಮ್ಮ ಆಶಯ.

ಕ್ಯಾಮರಾ ಮನ್ ಹರೀಶ್ ಜೊತೆ ಸುರೇಶ್ ಬಿ.ಪವರ್ ಟಿವಿ ಮೈಸೂರು.

RELATED ARTICLES

Related Articles

TRENDING ARTICLES