Wednesday, January 22, 2025

ಅಂದು ಬಳ್ಳಾರಿ ದರ್ಬಾರ್; ಇಂದು ಶ್ರೀನು ಲವ್ ದರ್ಬಾರ್

ಓ ಮೈ ಲವ್​ ಟೈಟಲ್​ಗೆ ತಕ್ಕಂತೆ ಈ ಸಿನಿಮಾ ಸ್ನೇಹ, ಪ್ರೀತಿ, ತ್ಯಾಗದ ಸಮ್ಮಿಲನ. ಸದ್ಯ ರಾಜ್ಯಾದ್ಯಂತ ಯುವ ಮನಸ್ಸುಗಳನ್ನು ಕದ್ದಿರೋ ಸಿನಿಮಾ. ಪ್ರೀತಿಯ ಹೊಸ ಸೆಳೆತಕ್ಕೆ ಚಿತ್ರರಸಿಕರು ಆಯಸ್ಕಾಂತದಂತೆ ಆಕರ್ಷಿತರಾಗಿದ್ದಾರೆ. ಈ ಅದ್ಧೂರಿ ಚಿತ್ರದ ಹಿಂದೆ ಸ್ಮೈಲ್​​ ಶ್ರೀನು ಕೈಚಳಕವಿದೆ. ಪ್ರತಿ ಫ್ರೇಮಿನ ಅದ್ಭುತ ದೃಶ್ಯಗಳ ಹಿಂದೆ ಸಿನಿಮಾಂತ್ರಿಕ ಸ್ಮೈಲ್​ ಶ್ರೀನು ಕರಾಮತ್ತಿದೆ.

ಅಂದು ಬಳ್ಳಾರಿ ದರ್ಬಾರ್.. ಇಂದು ಶ್ರೀನು ಲವ್ ದರ್ಬಾರ್

ಕಾಲೇಜ್​ ಕ್ಯಾಂಪಸ್​ ಲವ್​ಸ್ಟೋರಿಗೆ ಪ್ರೇಕ್ಷಕ ಫುಲ್​​ ಮಾರ್ಕ್ಸ್..!​​​​​​​​

ಓ ಮೈ ಲವ್​​ ನಂತ್ರ ದೊಡ್ಡ ಪ್ರಾಜೆಕ್ಟ್​​ಗೆ ಸ್ಮೈಲ್​​ ಶ್ರೀನು ಪ್ಲಾನ್​​​​

ಟಾಲಿವುಡ್ ಕೈಬೀಸಿ ಕರೆದರೂ ತವರು ಮರೆಯದ ಡೈರೆಕ್ಟರ್

ಸಿನಿಮಾ ಸೆಟ್ಟೇರಿದ ದಿನದಿಂದ ಇಲ್ಲಿವರೆಗೂ ಓ ಮೈ ಲವ್​​ ಕ್ರೇಜ್​ ನಿಂತಿಲ್ಲ. ಅಕ್ಷಿತ್​ ಶಶಿಕುಮಾರ್​ ಸಿನಿಕರಿಯರ್​​ನ ಮೊದಲ ಸಿನಿಮಾ ಇದು. ಅಕ್ಷಿತ್​​ರನ್ನ ಗ್ರ್ಯಾಂಡ್​ ಆಗಿ ಇಂಡಸ್ಟ್ರಿಗೆ ಲಾಂಚ್​ ಮಾಡೋ ಕನಸು ಕಂಡಿದ್ದರು  ಸುಪ್ರಿಂ ಹೀರೋ ಶಶಿಕುಮಾರ್​. ಹಾಗಾಗಿ ಮಗನನ್ನು ಮೋಸ್ಟ್​ ಟ್ಯಾಲೆಂಟೆಡ್​ ಡೈರೆಕ್ಟರ್​​ ಸ್ಮೈಲ್​ ಶ್ರೀನು ಕೈಗೆ ಒಪ್ಪಿಸಿದ್ರು. ಅಂದುಕೊಂಡಂತೆ ಸ್ಮೈಲ್​ ಶ್ರೀನು ಫಿಲ್ಮ್ ಮೇಕಿಂಗ್ ಸ್ಟೈಲ್​ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಓ ಮೈ ಲವ್​​ ಚಿತ್ರಕ್ಕೆ ಬಹುಪರಾಕ್ ಅಂತಿದ್ದಾರೆ.

ಅಕ್ಷಿತ್​ ಶಶಿಕುಮಾರ್​​​ ಹಾಗೂ ಕೀರ್ತಿ ಕಲ್ಕೆರೆ ಅಭಿನಯದ ಓ ಮೈ ಲವ್​​ ಸಿನಿಮಾ ರಾಜ್ಯಾದ್ಯಂತ ತೆರೆಕಂಡು ಭರ್ಜರಿ ಪ್ರದರ್ಶನ ಕಾಣ್ತಿದೆ. ಸಿನಿಮಾ ನೋಡಿ ಹೊರಬಂದ ಪ್ರೇಕ್ಷಕರು ಸಿನಿಮಾದ ಕಥೆಗೆ, ಮೇಕಿಂಗ್​​ ಸ್ಟೈಲ್​​​​​​ಗೆ ಕ್ಲೀನ್​ ಬೋಲ್ಡ್​ ಆಗಿದ್ದಾರೆ. ಆ್ಯಕ್ಷನ್​ ಸೀಕ್ವೆನ್ಸ್ ನೆಕ್ಸ್ಟ್​​​ ಲೆವೆಲ್​​ನಲ್ಲಿ ಮೂಡಿ ಬಂದಿವೆ. ಇವೆಲ್ಲದರ ಹಿಂದೆ ಸ್ಮೈಲ್​​ ಶ್ರೀನು ಕಸರತ್ತು ಎದ್ದು ಕಾಣ್ತಿದೆ. ಸ್ಮೈಲ್​ ಶ್ರೀನು ಇಟ್ಟಿರೋ ಫ್ರೇಮಿಗೆ ಸಿನಿರಸಿಕರು ಕೂಡ ಚಿಲ್​ ಆಗಿದ್ದಾರೆ.

ಒಂದು ಸಿನಿಮಾ ಸೋತ್ರೆ ಅಲ್ಲಿಗೆ ಸಿನಿಮಾ ರಂಗದಿಂದ ದೂರ ಸರಿದು ಬಿಡುವ ಈ ಕಾಲದಲ್ಲಿ, ಫೀನಿಕ್ಸ್​​ ಹಕ್ಕಿಯಂತೆ ಮತ್ತೆ ಪುಟಿದೆದ್ದು ಓ ಮೈ ಲವ್​ ಸಿನಿಮಾಗೆ ಕೈ ಹಾಕಿದ್ರು ನಿರ್ದೇಶಕ ಶ್ರೀನು. ಬಳ್ಳಾರಿ ದರ್ಬಾರ್​ ಸಿನಿಮಾಗೆ ಆ್ಯಕ್ಷನ್​​ ಕಟ್​ ಹೇಳಿದ್ದ ಶ್ರೀನು, ಬಳ್ಳಾರಿಯ ಗಣಿ​ ಬ್ಯಾಕ್​ಡ್ರಾಪ್​ ಮೇಲೆ ಕಥೆ ಹೆಣೆದಿದ್ದರು. ಈ ಸಿನಿಮಾ ನಿರೀಕ್ಷೆ ಯಂತೆ ಯಶಸ್ಸು ಕಾಣಲಿಲ್ಲ. ಇದೀಗ ಇಟ್ಟ ಹೆಜ್ಜೆ ಹಿಂದಿಡದ ನಿರ್ದೇಶಕ, ಓ ಮೈ ಲವ್​ ಸಿನಿಮಾ ಮೂಲಕ ರಾಜ್ಯಾದ್ಯಂತ ಲವ್​ ದರ್ಬಾರ್​​​ ನಡೆಸುತ್ತಿದ್ದಾರೆ.

ಬಹುದಿನಗಳಿಂದ ಇಂತಹ ಒಂದು ಕಥೆಗೆ ಸಿನಿಮಾ ಮಾಡಬೇಕು ಅಂತ ಕಾಯ್ತಿದ್ದ ನಿರ್ದೇಶಕರಿಗೆ ಜಿ. ರಾಮಾಂಜಿನಿ ಹಣ ಹೂಡಿಕೆ ಮಾಡುವುದರ ಜೊತೆಗೆ ಕಥೆ ಕೂಡ ನೀಡಿದ್ರು. ಸ್ಮೈಲ್​ ಶ್ರೀನು ಸ್ಕ್ರೀನ್​​ಪ್ಲೇ, ಡೈಲಾಗ್ಸ್​​ ಎಲ್ಲವೂ ರೋಚಕವಾಗಿ ಮೂಡಿ ಬಂದಿದ್ದು, ತೆರೆಕಂಡ ಎಲ್ಲಾ ಥಿಯೇಟರ್​ಗಳಲ್ಲೂ ಓ ಮೈ ಲವ್​ ಯಶಸ್ವಿಯಾಗಿ ಮುನ್ನುಗ್ತಿದೆ.

ಪಕ್ಕದ ಟಾಲಿವುಡ್​ ಅಂಗಳದೊಂದೊಗೆ ಉತ್ತಮ ಬಾಂಧವ್ಯ ಹೊಂದಿರೋ ಸ್ಮೈಲ್ ಶ್ರೀನುಗೆ ಓ ಮೈ ಲವ್​​ಗೂ ಮುನ್ನ ಸಾಕಷ್ಟು ಮಂದಿ ಸಿನಿಮಾ ಮಾಡಲು ಓಪನ್ ಆಫರ್ ನೀಡಿದ್ರು. ಆದ್ರೆ ಮಾತೃಭಾಷೆಯಲ್ಲೇ ಸಿನಿಮಾ ಮಾಡೋ ಆಶಯದೊಂದಿಗೆ ತೆಲುಗು ಇಂಡಸ್ಟ್ರಿ ಕಡೆ ಪಯಣ ಬೆಳೆಸಲಿಲ್ಲ ಶ್ರೀನು. ಇದು ಅವ್ರ ಕನ್ನಡಾಭಿಮಾನದ ಕೈಗನ್ನಡಿಯೂ ಹೌದು. ಸದ್ಯ ಬಿಗ್ ಸ್ಟಾರ್​ಗೆ ಌಕ್ಷನ್ ಕಟ್ ಹೇಳೋಕೆ ತಯಾರಿ ನಡೆಸ್ತಿರೋ ಶ್ರೀನು, ಯಾವ ಹೀರೋ ಜೊತೆ ಸಿನಿಮಾ ಅನೌನ್ಸ್ ಮಾಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

ರಾಕೇಶ್​ ಆರುಂಡಿ, ಫಿಲ್ಮ್​​​​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES