Wednesday, January 22, 2025

KRS ಡ್ಯಾಂ ಭರ್ತಿ

ಮಂಡ್ಯ : KRS ಡ್ಯಾಂ ಭರ್ತಿಯಾದ ಹಿನ್ನಲೆಯಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಬಾಗೀನ ಸಮರ್ಪಣೆ ಮಾಡಲಿದ್ದಾರೆ.

ಇಂದು ಮಧ್ಯಾಹ್ನ 12 ಗಂಟೆಗೆ ಡ್ಯಾಂ ನ‌ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿ ಬಾಗೀನ ಸಲ್ಲಿಸಲಿದ್ದು, ಸಿಎಂ ಜೊತೆ ಸಂಪುಟದ ಹಲವು ಸಹದ್ಯೋಗಿಗಳು ಭಾಗಿಯಾಗಲಿದ್ದಾರೆ. ಸಿಎಂ ಆದ ನಂತರ ಎರಡನೇ ಬಾರಿ ಬಾಗೀನ ಸಲ್ಲಿಸುತ್ತಿದ್ದಾರೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರೊ KRS ಡ್ಯಾಂ, ಇಂದಿನ ಮಟ್ಟ 124.80 ಅಡಿ ಇದ್ದು, ಗರಿಷ್ಠ ಮಟ್ಟ 124.80 ಅಡಿ ಇದೆ. ಒಳಹರಿವು 59,675,ಕ್ಯೂಸೆಕ್ ಇದೆ. ಹೊರಹರಿವು 53,027 ಕ್ಯೂಸೆಕ್ ಇದೆ. ಸಂಗ್ರಹ ಸಾಮಾರ್ಥ್ಯ 49.452 tmc ಇದ್ದು, ಇಂದಿನ ಸಂಗ್ರಹ 49,452 tmc ಇದೆ.

RELATED ARTICLES

Related Articles

TRENDING ARTICLES