Wednesday, January 22, 2025

ಸರ್ಕಾರ ಕೊಟ್ಟರೆ ನಿಮ್ಮ ಮನೆ ಮಗನಾಗಿ ಕೆಲಸ ಮಾಡುತ್ತೇನೆ : ಹೆಚ್​​ಡಿಕೆ

ರಾಮನಗರ : ರೈತರು ನೆಮ್ಮದಿಯಿಂದ ಬದಕಲು ಚಾಮುಂಡೇಶ್ವರಿ ತಾಯಿ ಆಶಿರ್ವಾದ ಬೇಕು ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ರಾಮನಗರದ ಚಾಮುಂಡೇಶ್ವರಿ ಕರಗ ಮಹೋತ್ಸವದ ಸಾಂಸ್ಕೃತಿಕ ‌ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷ ಗಳಿಂದ ನಿಮ್ಮನ್ನ ನೋಡಲು ಈ ರೀತಿ ಸಾಧ್ಯವಾಗಿರಲಿಲ್ಲ. ಕೊವಿಡ್ ನಿಂದ ಕರಗ ಮಾಡಲು ಸಾಧ್ಯವಾಗಿರಲಿಲ್ಲ. ನನಗೆ ರಾಜಕೀಯ ಜನ್ಮ ಕೊಟ್ಟಿರುವ ನಿಮ್ಮ ಜೊತೆ ಮನಸ್ಸಿನಲ್ಲಿ ಇರುವ ಭಾವನೆ ಹಂಚಿಕೊಳ್ಳಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ರೈತರು ನೆಮ್ಮದಿಯಿಂದ ಬದಕಲು ಚಾಮುಂಡೇಶ್ವರಿ ತಾಯಿ ಆಶಿರ್ವಾದ ಬೇಕು. 2019 ರ ಜುಲೈ ರಂದು ನನ್ನ ಅಧಿಕಾರವನ್ನ ಕುತಂತ್ರದಿಂದ ತೆಗೆಯಲಾಗಿತು. ತಾಯಿ ಚಾಮುಂಡೇಶ್ವರಿ ಆಶಿರ್ವಾದ ಪಡೆದು ನಿಮ್ಮ ಸಮ್ಮುಖದಲ್ಲಿ ಪ್ರತಿಜ್ಷೆ ಮಾಡಿ ಹೊರಟಿದ್ದೇನೆ. ನಮ್ಮ ಬದುಕು ಇರುವುದು ಹಳ್ಳಿಯಲ್ಲಿ. ಕಳೆದ ರಾಜಕೀಯ ಸನ್ನಿವೇಶದಲ್ಲಿ ಎರಡು ಕಡೆ ಚುನಾವಣೆಗೆ ಸ್ವರ್ಧೆ ಮಾಡಿದ್ದೇ. ಕಾರ್ಯಕರ್ತರ ಒತ್ತಡದಿಂದ ಸ್ವರ್ಧೆ ಮಾಡಿದ್ದೇ. ನಾನು ಮಣ್ಣಲಿ ಮಣ್ಣಾಗುವುದು ಇದೇ ಮಣ್ಣಿನಲ್ಲಿ ಎಂದು ಹೇಳಿದರು.

ಇನ್ನು, ಸಸಿಯಾಗಿ ನೆಟ್ಟು, ರಾಜ್ಯದಲ್ಲಿ ಹೆಮ್ಮಾರವಾಗಿ ಬೆಳೆಸಿದ್ದೀರಿ. ನೀವು ಕೊಟ್ಟ ಶಕ್ತಿಯನ್ನ ಲಕ್ಷಾಂತರ ಜನರಿಗೆ ಧಾರೆ ಎರೆದಿದ್ದೇನೆ. ನನ್ನ ರಾಮನಗರ ತಾಲೂಕಿನ ಸಂಬಂಧ ತಾಯಿ ಮಗನ ಸಂಬಂಧ. ಚನ್ನಪಟ್ಟಣ ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟರೆ ಮತ್ತೆ ಅಲ್ಲಿ ಗೆಲ್ಲಲೂ ಕಷ್ಟ ಎಂದು ಕೊಂಡೆ. ನನ್ನ ಜೀವನದ ಸವಾಲು ಪಂಚರತ್ನ ಯೋಜನೆ ನಾನು ಬದುಕಿರುವ ಒಂದೊಂದು ಕ್ಷಣ ಬಡವರಿಗಾಗಿ ಬದುಕುತ್ತೇನೆ. ನೀವು ಕೊಟ್ಟಿರುವ ಶಕ್ತಿಯಿಂದ ಕೆಲಸ ಮಾಡುತ್ತಿದ್ದೇನೆ. ರಾಜೀವ್ ಗಾಂಧಿ ವಿವಿ ಕಾಮಗಾರಿಗೆ ಗುದ್ದಲಿ ಪೂಜೆ ಮಾಡುತ್ತೆನೆ ಎನ್ನುತ್ತಾರೆ ಅಷ್ಟೇ ಆದರೆ ಕಾಮಗಾರಿ ಆರಂಭಿಸಿಲ್ಲ.

ರಾಮನಗರದಲ್ಲಿ ಕೆಲ ತಪ್ಪಿನ ರಾಜಕಾರಣ ‌ಮಾಡುತ್ತಿದ್ದಾರೆ. ಆರೋಗ್ಯದ ಸಮಸ್ಯೆ ಇದ್ದರು ನಿಮ್ಮ ಸೇವೆ ಮಾಡಲು ಹೊರಟಿದ್ದೇನೆ. ನಾನು ಶಿಕ್ಷಣ ಸಂಸ್ಥೆ, ಕೈಗಾರಿಕೆ ‌ಹೊಂದಿಲ್ಲ ,ಕೇತಗಾನಹಳ್ಳಿ ಬಳಿ‌ 45 ಎಕರೆ ಜಮೀನು ಬಿಟ್ಟರೇ ಬೇರೆ ಏನು ಇಲ್ಲ. ಐದು ವರ್ಷದ ಸರ್ಕಾರ ಕೊಟ್ಟರೆ ನಿಮ್ಮ ಮನೆ ಮಗನಾಗಿ ಕೆಲಸ ಮಾಡುತ್ತೇನೆ. ಅಪಪ್ರಚಾರಕ್ಕೆ ಒಳಗಾಗಬೇಡಿ. ಏನೇ ಇದ್ದರು ನನ್ನ ಬಳಿ ಬಂದು ತಿಳಿಸಿ. ನನ್ನ ಸಂಕಲ್ಪಕ್ಕೆ ನಿಮ್ಮ ಆರ್ಶಿವಾದ ಬೇಕು ನನ್ನ ಭಾವನೆಗಳನ್ನ ನಿಮ್ಮ ಮುಂದೆ ಇಟ್ಟಿದ್ದೇನೆ. ನನಗೆ ತಾಯಿ ಚಾಮುಂಡೇಶ್ವರಿ ಮೇಲೆ ನಂಬಿಕೆ ಇದೆ. ನಾಡಿನಲ್ಲಿ ಬಹಳ ಜನ ಸಿಎಂ ಆಗಬೇಕು ಎಂದು ಆಸೆ ಪಟ್ಟಿದ್ದಾರೆ. ಆದರೆ ಭಗವಂತನ ಇಚ್ಛೆ ಬೇರೆ ಇದೆ. ಚಾಮುಂಡೇಶ್ವರಿ ಇಚ್ಛೆ ಬೇರೆ ಇದೆ. ಜನರ ಹಾಗೂ ಚಾಮುಂಡೇಶ್ವರಿ ಆಶಿರ್ವಾದದಿಂದ ಮತ್ತೆ ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂದರು.

RELATED ARTICLES

Related Articles

TRENDING ARTICLES