Sunday, January 5, 2025

ತಂದೆಯ ತಿಥಿ ಕಾರ್ಯಕ್ಕೆ ಹೇಳಲು ಹೋಗುತ್ತಿದ್ದ ಮಗ ಅಪಘಾತದಲ್ಲಿ ಸಾವು

ಹಾಸನ: ತಂದೆಯ ತಿಥಿ ಕಾರ್ಯಕ್ಕೆ ಹೇಳಲು ಹೋಗುತ್ತಿದ್ದ ಮಗ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಆಂದಲೆಯಲ್ಲಿ ನಡೆದಿದೆ.

ಬೈಕ್ ಗೆ ಹಿಂಬದಿಯಿಂದ ಇನೋವಾ ಕಾರು ಡಿಕ್ಕಿಯಾದ ಪರಿಣಾಮದಿಂದಾಗಿ ಬೈಕ್ ನಲ್ಲಿದ್ದ ಬೇಲೂರು ತಾಲ್ಲೂಕು ವೀರಾಪುರ ಗ್ರಾಮದ ಪ್ರದೀಪ್(27), ಚಿಕ್ಕಮಗಳೂರು ಸಮೀಪದ ಸಿರುವಾಸೆ ಗ್ರಾಮದ ಮೂರ್ತಿ (32), ಸಾವನ್ನಪ್ಪಿದ್ದಾರೆ.

ವೀರಾಪುರದ ಪ್ರದೀಪ್ ನ ತಂದೆ ಒಂದು ವಾರದ ಹಿಂದೆ ಮರಣ ಹೊಂದಿದ್ದರು. ತಂದೆಯ ತಿಥಿ ಕಾರ್ಯಕ್ಕೆ ಹೇಳಲು ಕಲ್ಯಾಣಪುರಕ್ಕೆ ಬರುತ್ತಿದ್ದಾಗ ಅಪಘಾತ ನಡೆದಿದ್ದು, ಸ್ಥಳಕ್ಕೆ ಸರ್ಕಲ್‌ ಇನ್ಸ್ ಪೆಕ್ಟರ್ ಎಸ್.ಎನ್. ಶ್ರೀಕಾಂತ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತಪಟ್ಟ ಪ್ರದೀಪ್ ಕಳೆದ ಒಂದು ವರ್ಷದ ಹಿಂದೆ ಮದುವೆಯಾಗಿತ್ತು. ಮೂರ್ತಿ ಎಂಬುವರಿಗೂ ಮದುವೆಯಾಗಿದ್ದು ಎರಡು ಪುಟ್ಟ ಮಕ್ಕಳಿದ್ದಾರೆ.

RELATED ARTICLES

Related Articles

TRENDING ARTICLES