Friday, September 20, 2024

ಮೊಸರು – ಮಜ್ಜಿಗೆಗೆ GST : ಗ್ರಾಹಕರ ನಡುವೆ ಚಿಲ್ಲರೆ ಸಮಸ್ಯೆ

ಬೆಂಗಳೂರು : ಪ್ಯಾಕೆಟ್ ಹಾಲಿನ ಉತ್ಪನ್ನಗಳಿಗೆ ಕೇಂದ್ರ ಸರ್ಕಾರ ಶೇಕಡ 5ರಷ್ಟು ಜಿ.ಎಸ್‌.ಟಿ. ವಿಧಿಸಿರುವ ಕಾರಣ ಕರ್ನಾಟಕ ಹಾಲು ಮಹಾಮಂಡಳಿ ತನ್ನ ಉತ್ಪನ್ನಗಳ ದರವನ್ನು ತಲಾ 50 ಪೈಸೆಯಷ್ಟು ಏರಿಕೆ ಮಾಡಿದೆ. ಇದು ಈಗ ಮಾರಾಟಗಾರರು ಮತ್ತು ಗ್ರಾಹಕರ ನಡುವೆ ಚಿಲ್ಲರೆ ಸಮಸ್ಯೆಗೆ ಕಾರಣವಾಗಿದೆ.

ಈ ಹಿಂದೆ 200 ml ಮೊಸರಿನ ದರ 10 ರೂಪಾಯಿಗಳಾಗಿದ್ದು, ಈಗ ಶೇಕಡ ಐದರಷ್ಟು ಜಿಎಸ್‌ಟಿ ವಿಧಿಸಿರುವ ಕಾರಣ ಅದರ ಬೆಲೆ 10ರೂಪಾಯಿ 50 ಪೈಸೆಗಳಾಗಿದೆ. ಈಗ ಈ ಐವತ್ತು ಪೈಸೆಯೇ ಮಾರಾಟಗಾರರು ಹಾಗೂ ಗ್ರಾಹಕರಿಗೆ ತಲೆನೋವಾಗಿ ಪರಿಣಮಿಸಿದೆ. 50 ಪೈಸೆ ಚಲಾವಣೆಯಲ್ಲಿದ್ದರೂ ಸಹ ಅದು ಹೆಚ್ಚಾಗಿ ಬಳಕೆಯಲ್ಲಿಲ್ಲ. ಹೀಗಾಗಿ ಗ್ರಾಹಕರು 11ರೂ ನೀಡಿದರೆ ಮಾರಾಟಗಾರರು ಅವರಿಗೆ 50 ಪೈಸೆ ನೀಡಲು ಸಾಧ್ಯವಾಗುತ್ತಿಲ್ಲ. ಗ್ರಾಹಕರಿಗೂ 10 ರೂಪಾಯಿ 50 ಪೈಸೆ ನೀಡಲು ಸಾಧ್ಯವಾಗುತ್ತಿಲ್ಲ.

ಇಷ್ಟೇ ಅಲ್ಲ, ಆನ್ಲೈನ್ ಮೂಲಕ ಪಾವತಿಸುವವರಿಗೂ ಐವತ್ತು ಪೈಸೆ ಹಿಂದಿರುಗಿಸಲು ಸಮಸ್ಯೆಯಾಗುತ್ತಿದೆ. ಈ ‘ಚಿಲ್ಲರೆ’ ಸಮಸ್ಯೆ ಈಗ ಹಿರಿಯ ಅಧಿಕಾರಿಗಳ ಗಮನಕ್ಕೂ ಬಂದಿದೆ ಎನ್ನಲಾಗಿದ್ದು, ಇದಕ್ಕೆ ಯಾವ ರೀತಿ ಪರಿಹಾರ ಕಂಡುಹಿಡಿಯಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

RELATED ARTICLES

Related Articles

TRENDING ARTICLES