Monday, December 23, 2024

ಮಗಳ ಮದುವೆಗೆ ತಂದಿದ್ದ ಚಿನ್ನಾಭರಣ ದೋಚಿದ ಖದೀಮರು

ಬಳ್ಳಾರಿ: ದೇವರ ಕಾರ್ಯಕ್ಕೆ ತೆರಳಿದ ವೇಳೆ ಮನೆಗೆ ಕನ್ನ ಹಾಕಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಮಗಳ ಮದುವೆ ಕಾರ್ಯಕ್ಕೆ ತಂದಿದ್ದ ಬಂಗಾರವನ್ನ ದೋಚಿದ ಖದೀಮರು, ಪೌರಕಾರ್ಮಿಕನ ಮನೆಯನ್ನೂ ಬಿಡದೇ ದೋಚಿದ ಕಳ್ಳರು. ಶ್ರೀರಾಮಪುರ ಕಾಲೋನಿಯ ನಿವಾಸಿ ನಾರಾಯಣಪ್ಪ ಮನೆಯಲ್ಲಿ ಕಳ್ಳತನ ನಡೆದಿದೆ.

ಇನ್ನು, ಪಾಲಿಕೆಯಲ್ಲಿ ಪೌರ ಕಾರ್ಮಿಕನಾಗಿ ಕೆಲಸ ಮಾಡ್ತಿದ್ದ ನಾರಾಯಣಪ್ಪ. 2ನೇ ಮಗಳ ಮದುವೆಗಾಗಿ ಬಂಗಾರ ಖರೀದಿಸಿದ್ರು. ಮದುವೆ ಹಿನ್ನೆಲೆ ವಿಶೇಷ ಪೂಜೆ ಮಾಡೋದಕ್ಕಾಗಿ ಹುಲಗಿಯ ಹುಲಿಗೆಮ್ಮ ದೇವಸ್ಥಾನಕ್ಕೆ ತೆರಳಿದ್ರು. ಈ ವೇಳೆ ಮನೆಯ ಬೀಗ ಮುರಿದು 20 ತೊಲೆ ಬಂಗಾರ,400 ಗ್ರಾಂ ಬೆಳ್ಳಿ ಮತ್ತು 70 ಸಾವಿರಕ್ಕೂ ಹೆಚ್ಚು ನಗದು ಕಳ್ಳತನ ಮಾಡಿದ್ದಾರೆ. ದೇವಸ್ಥಾನದಿಂದ ಬಂದು ನೋಡಿದಾಗ ಕಳ್ಳತನವಾಗಿರೋದು ಬಯಲಿಗೆ ಬಂದಿದ್ದು, ಬ್ರೂಸ್ ಪೇಟೆ ಠಾಣೆ ‌ಪೊಲೀಸರಿಂದ ತನಿಖೆ ನಡೆಸಲಾಗಿದೆ.

RELATED ARTICLES

Related Articles

TRENDING ARTICLES