ಶಿವಮೊಗ್ಗ : ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ನೂರೈವತ್ತಕ್ಕೂ ಹೆಚ್ಚು ಸ್ಥಾನ ನೀಡಿ ಬಿಜೆಪಿಯನ್ನೇ ಅಧಿಕಾರಕ್ಕೆ ತರ್ತಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಲೈಟ್ ಆಗಿ ಮುಖ್ಯಮಂತ್ರಿ ಆಗಿದ್ದವರೇ ಈಗ ಮನೆಗೆ ಹೋದ್ರು. ಜನರು ಇವರನ್ನು ಚಾಮುಂಡೇಶ್ವರಿಯಲ್ಲಿ ಸೋಲಿಸಿಲ್ವಾ..? ಇನ್ನೂ ಯಾವತ್ತೋ ಚುನಾವಣೆ ಇದೆ. ಇಬ್ನೂ ಹೆಣ್ಣೆ ಹುಡುಕಿಲ್ಲ-ನಿಶ್ಚಿತಾರ್ಥ ಆಗಿಲ್ಲ. ಇನ್ನೂ ಮದುವೆನೇ ಆಗಿಲ್ಲ. ಆಗಲೇ ಮುಖ್ಯಮಂತ್ರಿ ನಾವು ಎಂದು ಇಬ್ಬರು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಇನ್ನು, ಆ ಮುಖ್ಯಮಂತ್ರಿಗೆ, ಮಗುವಿಗೆ ಇಬ್ಬಿಬ್ರು ಅಪ್ಪ ಆಗಲು ಸಾಧ್ಯವೇನು.? ಕಾಂಗ್ರೆಸ್ನಲ್ಲಿ ಇವರಿಬ್ಬರಿಗೆ ಉಗಿಯೋರು ಇಲ್ವಾ…? ಛೀಮಾರಿ ಹಾಕುವವರು ಇಲ್ವಾ..? ಇನ್ಯಾವೊತ್ತೋ ಚುನಾವಣೆ, ಈ ರಾಜ್ಯದ ಜನ ಯಾವತ್ತೋ ಸೋಲಿಸಿಯಾಗಿದೆ. ಈಗಲೇ ಜಾತಿ ಮುಂದಿಟ್ಟುಕೊಂಡು ಇವರಿಬ್ಬರು ಮುಖ್ಯಮಂತ್ರಿ ಆಗಲು ಹೊರಟಿದ್ದಾರಲ್ಲ. ಕುರುಬರು, ಒಕ್ಕಲಿಗರು ಇವರಿಬ್ಬರಿಗೂ ಒಪ್ಪಿಲ್ಲ. ಯಾವುದೇ ಕಾಲಕ್ಕೂ ಇವರಿಗೆ ಎರಡೂ ಜಾತಿಯವರು ಒಪ್ಪಲ್ಲ. ರಾಜ್ಯದ ಜನ ಇವರಿಗೆ ಜಾತಿವಾದಿ ಎಂದು ಮತ್ತೊಮ್ಮೆ ಮನೆಗೆ ಕಳಿಸ್ತಾರೆ ಎಂದರು.
ಇನ್ನು, ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ನೂರೈವತ್ತಕ್ಕೂ ಹೆಚ್ಚು ಸ್ಥಾನ ನೀಡಿ ಬಿಜೆಪಿಯನ್ನೇ ಅಧಿಕಾರಕ್ಕೆ ತರ್ತಾರೆ. ಬಿಜೆಪಿಯವರೇ ಕರ್ನಾಟಕದ ಮುಖ್ಯಮಂತ್ರಿ ಆಗ್ತಾರೆ. ಬಾದಮಿಯಲ್ಲಿಯೂ ನಿಲ್ಲಲ್ಲ, ಚಾಮುಂಡೇಶ್ವರಿಯಲ್ಲೂ ನಿಲ್ಲಲ್ಲ. ಅಲ್ಲಿ ನಿಂತರೆ ಸೋಲ್ತಿನಿ ಅಂತಾ ಗೊತ್ತು ಅವರಿಗೆ. ಅವರು ನಿಲ್ಲೋದೇ ಚಾಮರಾಜಪೇಟೆಯಲ್ಲಿ, ಜಮೀರ್ ಅಹಮದ್ ಹತ್ರಾನೆ. ಅಲ್ಲಿ ಮುಸಲ್ಮಾನರು ಅತಿ ಹೆಚ್ಚಿದ್ದಾರೆ. ಅಲ್ಲಿ ಓಟ್ ಬರುತ್ತೆ ಎಂಬ ಭ್ರಮೆಯಲ್ಲಿದ್ದಾರೆ. ರಾಹುಲ್ ಗಾಂಧಿ ಹೇಗೆ ಕೇರಳಕ್ಕೆ ಹೋದರೋ ಗಾಗೇ ಇವರು ಚಾಮರಾಜಪೇಟೆಗೆ ಹೋಗ್ತಾರೆ ಎಂದರು.