Thursday, November 21, 2024

ಅದ್ದೂರಿ ದಸರಾಗೆ ಸರ್ಕಾರದಿಂದ ನಿರ್ಧಾರ..!

ಮೈಸೂರು : ಕಳೆದೆರೆಡು ವರ್ಷಗಳಿಂದ ದಸರಾ ಆಚರಣೆಯನ್ನು ಸರಳವಾಗಿ ಮಾಡಿದ್ದ ಸರ್ಕಾರ ಈ ಬಾರಿ ಅದ್ದೂರಿ ಆಚರಣೆಗೆ ಸರ್ಕಾರ ನಿರ್ಧಾರ ಮಾಡಿದೆ.. ಕೊರೋನಾ ಕಾರಣದಿಂದ ಸಿಂಪಲ್ ಆಗಿ ಅಚರಣೆಯಾಗಿದ್ದ ನಾಡಹಬ್ಬವನ್ನು ಈ ಬಾರಿ ಅದ್ದೂರಿಯಾಗಿ ಆಚರಣೆ ಮಾಡಲು ದಸಾರ ಸಮಿತಿ ಸಭೆಯಲ್ಲಿ ತೀರ್ಮಾನ ಮಾಡಲಾಯಿತು.. ಆದ್ರೆ, ದಸರಾ ಉದ್ಘಾಟನೆಗೆ ಯಾರು ಅನ್ನೋದು ಮಾತ್ರ ಸರ್ಕಾರ ಇನ್ನೂ ‌ನಿಗೂಢವಾಗಿಯೇ ಇಟ್ಟಿರೋದು ಕುತೂಹಲಕ್ಕೆ ಕಾರಣವಾಗಿದೆ.

ಸದ್ಯ ಈ ಬಾರಿ ನಾಡಹಬ್ಬ ದಸರಾ ಅದ್ದೂರಿಯಾಗಿ ಆಚರಣೆಯಾಗಲಿದೆ. ಸಿಎಂ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತಿರ್ಮಾನ ಮಾಡಲಾಗಿದ್ದು, ಎರಡು ತಿಂಗಳ ಮುಂಚೆಯೇ ದಸರಾ ಚಾಲನೆಗೆ ಸರ್ಕಾರ ಸೂಚಿಸಿದೆ. ಹಿಂದಿನ ವೈಭವವನ್ನು ಮರುಕಳಿಸುವಂತೆ ಅದ್ದೂರಿ ಸೆಟ್ ಲೈಟಿಂಗ್ ಹಾಗೂ ವಸ್ತು ಪ್ರದರ್ಶನ ಮಾಡಲು ಸಿದ್ದತೆಗೆ ಸೂಚಿಸಿದೆ.. ಇನ್ನು ಮುಡಾದಿಂದ 10 ಕೋಟಿ ಬಿಡುಗಡೆಯಾದ್ರೆ , ಸರ್ಕಾರದಿಂದ ಹಣ ಬಿಡುಗಡೆಗೆ ಅಲ್ಲಿನ ಡಿಸಿ ಎಸ್ಟಿಮೇಟ್  ನೀಡುವಂತೆ ಸೂಚಿಸಲಾಗಿದೆ. ಹೀಗಾಗಿ ಡಿಸಿ ಕೊಡುವ ಎಸ್ಟಿಮೇಟ್ ಮೇಲೆ ಸರ್ಕಾರ ದಸರಾಗೆ ಹಣ ಬಿಡುಗಡೆ ಮಾಡಲಿದೆ. ಇನ್ನು ಈ ಬಾರಿ ದಸರಾ ಉದ್ಘಾಟನೆಗೆ ಯಾರನ್ನು ಆಹ್ವಾನಿಸಬೇಕು ಎಂಬುದನ್ನು ನಿಗೂಢವಾಗಿಯೇ ಇಟ್ಟಿರೋ ಸಮಿತಿ, ಎಲ್ಲಾ ಸಿಎಂ ನಿರ್ಧಾರಕ್ಕೆ ಬಿಟ್ಟಿದೆ.‌ ಸದ್ಯದ ಮಾಹಿತಿ ಪ್ರಕಾರ ಮಾಜಿ ಪ್ರಧಾನಿ ದೇವೇಗೌಡ ಅಥವಾ ಬಿಎಸ್ ಯಡಿಯೂರಪ್ಪ ಇಬ್ಬರಲ್ಲಿ ಒಬ್ಬರಿಗೆ ದಸರಾ ಉದ್ಘಾಟನೆಗೆ ಆಹ್ವಾನ ‌ನೀಡ್ತಾರೆ ಎನ್ನಲಾಗಿದೆ.

ಇನ್ನು ಮೊನ್ನೆ ತಾನೇ ಸರ್ಕಾರದ ಆದೇಶವೊಂದರಲ್ಲಿ ಕನ್ನಡದ ಕಗ್ಗೊಲೆಯ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಅದರ ಬೆನ್ನಲೇ ದಸಾರ ಸಭೆಯ ಕಾರ್ಯಸೂಚಿಯಲ್ಲೂ ಸಹ ಮಹಾ ಯಡವಟ್ಟನ್ನು ಸರ್ಕಾರ ಮಾಡಿದೆ. 19-07-22ರ ಬದಲಾಗಿ 19-07-21 ಎಂದು ನಮೂದನೆ ಮಾಡಿ ಮಹಾ ಯಡವಟ್ಟನ್ನು ಸಿಬ್ಬಂದಿ ಮಾಡಿದ್ರು.. ಈ ಬಗ್ಗೆ ಗಮನಕ್ಕೆ ಬಂದರಲೂ ಯಾವುದೇ ಎಚ್ಚರಗೊಳ್ಳಲಿಲ್ಲ ಅಧಿಕಾರಿಗಳು‌ ಎಂಬುವುದು ವಿಪರ್ಯಾಸ.

ಒಟ್ಟಿನಲ್ಲಿ ಅದೇನೇ ಇರಲಿ ಕಳೆದ ಎರಡು ವರ್ಷಗಳಿಂದ ‌ಅದ್ದೂರಿಯಾಗಿ ಕಾಣದ ನಾಡಹಬ್ಬ ಈ ಬಾರಿ ಅದ್ದೂರಿತನಕ್ಕೆ ಸಾಕ್ಷಿಯಾಗಲಿದೆ.. ಮತ್ತೆ ಹಳೆಯ ದಸಾರ ವೈಭವನ್ನು ನಾಡಿನ‌ ಜನತೆ ಕಣ್ತುಂಬಿಕೊಳ್ಳಲಿದ್ದಾರೆ.

ರಾಘವೇಂದ್ರ ವಿಎನ್ ಪೊಲಿಟಿಕಲ್ ಬ್ಯೂರೋ ಪವರ್ ಟಿವಿ ಬೆಂಗಳೂರು.

RELATED ARTICLES

Related Articles

TRENDING ARTICLES