Wednesday, January 22, 2025

ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಬಲಿ

ಬೆಳಗಾವಿ : ವೈದ್ಯರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದ ಘಟನೆ ಬಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

ಬಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಬಲಿಯಾಗಿದ್ದು, ಹೊನ್ನಿಹಾಳ ಗ್ರಾಮದ ನಿವಾಸಿ ಸುನಿತಾ ಎಂಟು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆಯಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು ಕ್ಯಾರೇ ಎನ್ನದ ವೈದ್ಯರು. ಸೀಜರಿನ್ ಮಾಡುವಂತೆ ಕಾಲು ಹಿಡಿದು ಕೇಳಿಕೊಂಡ್ರೂ ನಿರ್ಲಕ್ಷ್ಯ ಮಾಡಿದ್ದು, ಇಂದು ಹರಿಗೆ ಸಂದರ್ಭದಲ್ಲಿ ಮಗು ಸಾವನ್ನಪ್ಪಿದೆ.

ಇನ್ನು, ಹಾರ್ಟ್ ಬೀಟ್ ಕಡಿಮೆ ಆಗಿ ಮಗು ಮೃತಪಟ್ಟಿದೆ ಅಂತಾ ಹೇಳ್ತಿರುವ ವೈದ್ಯರು. ಒಂಬತ್ತು ತಿಂಗಳು ಒಂಬತ್ತು ದಿನ ಆದ್ರೂ ಸೀಜರಿನ್ ಮಾಡದೇ ನಿರ್ಲಕ್ಷ್ಯ ಮಾಡಿದ್ದು, ಸೀಜರಿನ್ ಮಾಡದೇ ನಿರ್ಲಕ್ಷ್ಯ ತೋರಿ ಇಂದು ಮಗು ಸಾಯಿಸಿದ್ದಾರೆ. ನಮಗೆ ಜೀವಂತ ಮಗು ಕೊಡಿ ಅಂತಾ ಕಣ್ಣೀರಿಡ್ತಿರುವ ಕುಟುಂಬಸ್ಥರು. ಮಗು ಮೃತಪಟ್ಟರು ವೈದ್ಯರು, ಸಿಬ್ಬಂದಿ ಹೊರ ಬಾರಲಿಲ್ಲಿ ಸ್ಥಳಕ್ಕೆ ಎಪಿಎಂಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES