Sunday, January 12, 2025

ಸಾಹಿತಿ ಬಿ.ಎಲ್ ವೇಣುಗೆ 3ನೇ ಬೆದರಿಕೆ ಪತ್ರ

ಚಿತ್ರದುರ್ಗ : ಸಾಹಿತಿ ಹಾಗೂ ಕಾದಂಬರಿಕಾರ ಬಿ.ಎಲ್. ವೇಣು ಅವರಿಗೆ ಇದೀಗ 3ನೇ ಬೆದರಿಕೆ ಪತ್ರ ಬಂದಿರೋದಾಗಿ ತಿಳಿದು ಬಂದಿದೆ.

ಕೈಬರಹದಲ್ಲಿರುವಂತ ಪತ್ರದಲ್ಲಿ ಇದುವರೆಗೆ ಯಾಕೆ ಬಹಿರಂಗವಾಗಿ ಕ್ಷಮೆ ಕೇಳಿಲ್ಲ ಎಂಬುದಾಗಿ ವಾರ್ನ್ ಮಾಡಲಾಗಿದೆ. ಇಂದು ಸಾಹಿತಿ ಬಿ.ಎಲ್ ವೇಣುಗೆ ಬಂದಿರುವಂತ ಬೆದರಿಕೆಯ 3ನೇ ಪತ್ರದಲ್ಲಿ ನೀವು ಯಾಕೆ ಇನ್ನೂ ಕ್ಷಮೆ ಕೇಳಿಲ್ಲ. ನಿಮಗೆ ತಾಕತ್ತಿದ್ದರೇ ದೇಶದ್ರೋಹಿ ಸಂಘಟನೆಗಳಿಗೆ ಬುದ್ದಿ ಹೇಳಿ ಎಂಬುದಾಗಿ ಎಚ್ಚರಿಸಲಾಗಿದೆ.

ಇನ್ನೂ ಪಿಎಫ್‌ಐ, ಎಸ್​​ಡಿಪಿಐ ಹಾಗೂ ಸಿಎಫ್‌ಐ ನಂತಹ ದೇಶದ್ರೋಹಿ ಸಂಘಟನೆಗಳಿಗೆ ಬುದ್ಧಿಹೇಳಬೇಕು. ಪಠ್ಯದಲ್ಲಿ ಭಗವದ್ಗೀತೆ ಬೇಡ ಎಂದ 61 ಎಡಬಿಡಂಗಿಗಳಿಗೆ ತಿಳಿ ಹೇಳಬೇಕು ಎಂದು ಹೇಳಲಾಗಿದೆ.

61 ಜನ ಕಿಡಿಗೇಡಿ ಸಾಹಿತಿಗಳು ಹಿಂದೂಗಳಿಗೆ ನೀತಿ ಪಾಠ ಹೇಳುವ ಅಗತ್ಯವಿಲ್ಲ. 2047ಕ್ಕೆ ಭಾರತ ಇಸ್ಲಾಂಮಿಕ್ ಆಳ್ವಿಕೆಯಲ್ಲಿ ಇರುತ್ತದೆ ಎಂಬುದಾಗಿ ಬಿಹಾರದ ಪಾಟ್ನಾದಲ್ಲಿ ಸೆರೆಸಿಕ್ಕಂತ ಶಂಕಿತ ಉಗ್ರನೇ ಹೇಳಿದ್ದಾನೆ ಎಂಬುದಾಗಿಯೂ ತಿಳಿಸಲಾಗಿದೆ. ಅಂದಹಾಗೇ 3ನೇ ಬೆದರಿಕೆಯ ಪತ್ರವನ್ನು ಸಾಹಿತಿ ಬಿ.ಎಸ್. ವೇಣು ಅವರ ಚಿತ್ರದುರ್ಗದ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ನಿವಾಸಕ್ಕೆ ಕಳುಹಿಸಲಾಗಿದೆ.

RELATED ARTICLES

Related Articles

TRENDING ARTICLES