Monday, December 23, 2024

ಆ.12ಕ್ಕೆ ಮೂರು ಶೇಡ್​​ಗಳಲ್ಲಿ ಡೈನಾಮಿಕ್ ಪ್ರಿನ್ಸ್ ಅಬ್ಬರ

ಬಾಲಿವುಡ್​ನ ಗ್ರೀಕ್ ಗಾಡ್ ಹೃತಿಕ್ ಸ್ಟೈಲ್​ನಲ್ಲಿ ಅಬ್ಬರಿಸೋಕೆ ಬರ್ತಿದ್ದಾರೆ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್. ಅವ್ರಿಗೆ ಕರುನಾಡ ವೇದ ಕೂಡ ಸಾಥ್ ನೀಡಿದ್ದು, ಮಾಫಿಯಾ ಅಡ್ಡಾದಲ್ಲಿ ಏನೆಲ್ಲಾ ನಡೀತು ಅನ್ನೋದು ಸದ್ಯ ಟಾಕ್ ಆಫ್ ದಿ ಟೌನ್ ಆಗಿದೆ. ಪ್ರಜ್ಜು- ಶಿವಣ್ಣ ಭೇಟಿಯ ಅವಿಸ್ಮರಣೀಯ ಕ್ಷಣಗಳು ನಿಮಗಾಗಿ ಕಾಯ್ತಿದೆ.

ಹೃತಿಕ್ ಕ್ರಿಶ್ ಮಾಸ್ಕ್ ಧರಿಸಿ ಬಂದ ಹ್ಯಾಂಡ್ಸಮ್ ಹೀರೋ 

ಆ- 12ಕ್ಕೆ ಮೂರು ಶೇಡ್​​ಗಳಲ್ಲಿ ಡೈನಾಮಿಕ್ ಪ್ರಿನ್ಸ್ ಅಬ್ಬರ

ಮಾಫಿಯಾ ಅಡ್ಡಾದಲ್ಲಿ ಕರುನಾಡ ವೇದ ಶಿವಣ್ಣ ಕಲರವ

ಮತ್ತೆ ಖಾಕಿ ಖದರ್​ನಲ್ಲಿ ಗನ್ ಹಿಡಿದು ಘರ್ಜಿಸಿದ ಪ್ರಜ್ಜು..!

ಇದು ರೀಸೆಂಟ್ ಆಗಿ ರಿಲೀಸ್ ಆಗಿರೋ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್​ರ ಅಬ್ಬರ ಟೀಸರ್​ನ ಹೈ ವೋಲ್ಟೇಜ್ ಆ್ಯಕ್ಷನ್ ಅಬ್ಬರ. ಸೋಶಿಯಲ್​ ಮೀಡಿಯಾಗಳಲ್ಲಿ ಅಬ್ಬರಿಸ್ತಿರೋ ಈ ಒಂದೇ ಒಂದು ಟೀಸರ್, ಸಿನಿಮಾ ಮೇಲಿನ​​​​​​​​​ ನಿರೀಕ್ಷೆಯನ್ನು ಡಬಲ್ ಮಾಡಿದೆ. ಮೂರು ವಿಭಿನ್ನ ಗೆಟಪ್​ಗಳಲ್ಲಿ ಮಿಂಚ್ತಿರೋ ಪ್ರಜ್ವಲ್ ದೇವರಾಜ್,​​ ಮೊದಲ ಬಾರಿಗೆ ಕ್ರಿಶ್​ ಲುಕ್​ನಲ್ಲಿ ಕಾಣಿಸಿಕೊಂಡು ಸರ್​ಪ್ರೈಸ್​​​ ಕೊಟ್ಟಿದ್ದಾರೆ.

ಟೀಸರ್​ನಲ್ಲಿ ಕಬ್ಬಿಣದ ಸರಪಳಿ ಹಿಡಿದು ರೌಡಿಗಳನ್ನ ಬೆಂಡೆತ್ತೋ ದೃಶ್ಯಗಳು ಅದ್ಭುತವಾಗಿ ಮೂಡಿ ಬಂದಿವೆ. ಟೀಸರ್​​​ಪೂರ್ತಿ ರೋಚಕ ಆ್ಯಕ್ಷನ್​ ಸೀನ್​ಗಳಿದ್ದು, ಸಿನಿಮಾದ ಬಗ್ಗೆ ಕುತೂಹಲ ಹುಟ್ಟು ಹಾಕಿದೆ. ಕೆ ರಾಮ್​ನಾರಾಯಣ್​​ ನಿರ್ದೇಶನದಲ್ಲಿ ಅಬ್ಬರ ಸಿನಿಮಾ ತಯಾರಾಗ್ತಿದ್ದು. ಪಕ್ಕಾ ಆ್ಯಕ್ಷನ್​ ಎಂಟರ್ಟೈನರ್​ ಸಿನಿಮಾ ಇದಾಗಲಿದೆ. ಪ್ರಜ್ಜು ಜೊತೆ ಮೂವರು ನಾಯಕಿಯರು ರೊಮ್ಯಾನ್ಸ್ ಮಾಡಲಿದ್ದು, ಸಿನಿಮಾ ಇದೇ ಆಗಸ್ಟ್ 12ಕ್ಕೆ ಬಿಗ್ ಸ್ಕ್ರೀನ್ ಮೇಲೆ ರಾರಾಜಿಸಲಿದೆ.

ಇನ್ಸ್​ಪೆಕ್ಟರ್ ವಿಕ್ರಮ್ ಬಳಿಕ ಪ್ರಿನ್ಸ್ ಪ್ರಜ್ವಲ್ ಮಗದೊಮ್ಮೆ ಖಾಕಿ ತೊಟ್ಟು ಲಾಠಿ ಹಿಡಿದಿದ್ದಾರೆ. ಗನ್ ಹಿಡಿದು ಘರ್ಜಿಸೋಕೆ ಸಜ್ಜಾಗ್ತಿದ್ದಾರೆ. ಪ್ರಜ್ವಲ್​ ತಂದೆ ಡೈನಾಮಿಕ್ ಹೀರೋ ದೇವರಾಜ್​ ಕೂಡ ಈ ಸಿನಿಮಾಗಾಗಿ ಬಣ್ಣ ಹಚ್ಚಿರೋದು ವಿಶೇಷ. ಲೋಹಿತ್​ ನಿರ್ದೇಶನದಲ್ಲಿ ಅದ್ಧೂರಿಯಾಗಿ ಸಿನಿಮಾ ತಯಾರಾಗ್ತಿದೆ. ಇತ್ತೀಚೆಗೆ ಮಾಫಿಯಾ ಸಿನಿಮಾದ ಶೂಟಿಂಗ್​​ ನಗರದ ಹೆಚ್​ಎಂಟಿ ಆವರಣದಲ್ಲಿ ನಡೆಯುತ್ತಿತ್ತು. ವಿಶೇಷ ಅಂದ್ರೆ ಕರುನಾಡ ಚಕ್ರವರ್ತಿ ಶಿವಣ್ಣ ಅವ್ರ ವೇದ ಚಿತ್ರೀಕರಣ ಕೂಡ ಹೆಚ್​ಎಂಟಿಯಲ್ಲೇ ನಡೀತಿದೆ.

ಅಲ್ಲೇ ಇದ್ದ ಶಿವರಾಜ್​ಕುಮಾರ್​ರನ್ನ ಕಂಡು ಓಡೋಡಿ ಬಂದ ಪ್ರಜ್ವಲ್​ ದೇವರಾಜ್, ಶಿವಣ್ಣನ ಪ್ರೀತಿಯಿಂದ ಅಪ್ಪಿಕೊಂಡು ಕುಶಲೋಪಹರಿ ಹಂಚಿಕೊಂಡಿದ್ದಾರೆ. ಅಲ್ಲಿಗೆ ಮಾಫಿಯಾ ಮೀಟ್ಸ್ ವೇದ ಅಂದಂಗಾಯ್ತು. ಇದ್ರಿಂದ ಮಾಫಿಯಾ ತಂಡಕ್ಕೆ ಆನೆಬಲ ಬಂದಂತಾಗಿದೆ. ಪ್ರಜ್ವಲ್ ದೇವರಾಜ್ ಗೆಟಪ್, ಖಾಕಿ ಖದರ್ ಸೇರಿದಂತೆ ಮಾಫಿಯಾ ತಂಡಕ್ಕೆ ಶಿವಣ್ಣನಿಂದ ಮೆಚ್ಚುಗೆ ವ್ಯಕ್ತವಾಯ್ತು.

ಮಾಫಿಯಾ ಚಿತ್ರಕ್ಕಾಗಿ ಪ್ರಜ್ವಲ್​​ ಎರಡು ವರ್ಷಗಳಿಂದ ಬೆಳೆಸಿದ್ದ ಲಾಂಗ್​ ಹೇರ್​​ನ ತ್ಯಾಗ ಮಾಡಿದ್ದಾರೆ. ಹೇರ್​​ಕಟ್​ ಮಾಡಿಸಿ ವಿಭಿನ್ನ ಗೆಟಪ್​​ನಲ್ಲಿ ಕಾಣಿಸಿದ್ದಾರೆ. ಸಿನಿಮಾದ ನಾಯಕಿ ಅದಿತಿ ತನಿಖಾ ಪತ್ರಕರ್ತೆಯಾಗಿ ಮಿಂಚಿದ್ದಾರೆ. ಈ ಸಿನಿಮಾಗೆ ಕುಮಾರ್​ ಬಂಡವಾಳ ಹೂಡಿದ್ದು, ಸಾಧುಕೋಕಿಲ ಸೇರಿದಂತೆ ಹಿರಿಯ ಕಲಾವಿದರು ಬಣ್ಣ ಹಚ್ಚಿದ್ದಾರೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES