Tuesday, May 21, 2024

ಒಕ್ಕಲಿಗ ಸಮುದಾಯ ನನ್ನ ಬೆಂಬಲಕ್ಕೆ ನಿಲ್ಬೇಕು: ಡಿಕೆಶಿ

ಮೈಸೂರು: ‘ಕಾಂಗ್ರೆಸ್‌ ಬಹುತೇಕ ಎಲ್ಲ ಸಮುದಾಯಗಳ ನಾಯಕರನ್ನು ರಾಜ್ಯದ ಮುಖ್ಯಮಂತ್ರಿ ಮಾಡಿದೆ. ದಲಿತ ಸಮುದಾಯದವರು ಮುಖ್ಯಮಂತ್ರಿ ಯಾಕಾಗಬಾರದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾಮೂಹಿಕ ನಾಯಕತ್ವದಲ್ಲಿ ಮುಂದಿನ ವಿಧಾನಸಭಾ ಚುನಾವಣೆ ಎದುರಿಸಿ 136ಕ್ಕಿಂತಲೂ ಹೆಚ್ಚು ಸೀಟುಗಳನ್ನು ಕಾಂಗ್ರೆಸ್‌ ಗೆಲ್ಲಲಿದೆ. ಆಂತರಿಕ ಸಮೀಕ್ಷೆಯೂ ನಮಗೆ ಬಹುಮತ ಬರಲಿದೆಯೆಂಬುದನ್ನು ಹೇಳಿದೆ. ಅರಸು, ವೀರಪ್ಪ ಮೊಯ್ಲಿ, ಗುಂಡೂರಾವ್‌, ಬಂಗಾರಪ್ಪ, ಸಿದ್ದರಾಮಯ್ಯ ಸಿ.ಎಂ ಆಗಿದ್ದಾರೆ. ದಲಿತ ಸಿ.ಎಂ ಯಾಕಾಗಬಾರದು?’ ಎಂದು ಪ್ರಶ್ನೆ ಮಾಡಿದರು.

ಇನ್ನು ಇದೇ ವೇಳೆ ಮುಂದಿನ ಸಿಎಂ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜಕೀಯ ಜೀವನದಲ್ಲಿ ಮಹತ್ವದ ಹಂತಕ್ಕೆ ಬಂದು ತಲುಪಿದ್ದೇನೆ. ಕಾಂಗ್ರೆಸ್‌ ಅನ್ನು ಅಧಿಕಾರಕ್ಕೆ ತಂದು ನನ್ನ ಕೈ ಬಲಪಡಿಸಬೇಕೆಂದು ಒಕ್ಕಲಿಗ ಸಮುದಾಯವನ್ನು ಕೇಳಿದ್ದೇನೆ. ಎಸ್.ಎಂ.ಕೃಷ್ಣ ಒಕ್ಕಲಿಗ ಸಮುದಾಯದವರು. ಅವರು ಮೊದಲಿಗೆ ಕೆಪಿಸಿಸಿ ಅಧ್ಯಕ್ಷರಾಗಿ ಬಳಿಕ ಸಿಎಂ ಆದರು. ನಾನೂ ಒಕ್ಕಲಿಗ ಸಮುದಾಯದವನು.ಕೆಪಿಸಿಸಿ ಅಧ್ಯಕ್ಷ ಆಗಿದ್ದೇನೆ ಹೀಗಾಗಿ ಸಮುದಾಯ ನನ್ನ ಜೊತೆಗೆ ನಿಲ್ಲಲಿದೆ. ಜಾತ್ಯತೀತ ತತ್ವದಲ್ಲಿ ನಂಬಿಕೆಯಿಟ್ಟವನು ಎಲ್ಲ ಸಮುದಾಯಗಳೂ ಬೆಂಬಲಿಸುವ ವಿಶ್ವಾಸವಿದೆ. ನಾನು ಸನ್ಯಾಸಿ ಅಲ್ಲ. ಮುಖ್ಯಮಂತ್ರಿ ಯಾರಾಗಬೇಕು ಅಂತ ಪಕ್ಷ ತೀರ್ಮಾನ ಕೈಗೊಳ್ಳುತ್ತೆ. ಮುಂದೆ ಏನಾಗುತ್ತೋ ನೋಡೋಣ ಎಂದರು.

ಹಿಜಾಬ್‌, ಹಲಾಲ್ ವಿವಾದದಲ್ಲಿ ನಿಲುವು ಸ್ಪಷ್ಟಪಡಿಸದ್ದರಿಂದ ಅಲ್ಪಸಂಖ್ಯಾತ ಸಮುದಾಯ ದೂರವಾಗಿದೆಯಲ್ಲ ಎಂಬ ‍ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಭ್ರಷ್ಟಾಚಾರದಲ್ಲಿ ನಿರತವಾಗಿದ್ದ ಬಿಜೆಪಿ ಸರ್ಕಾರ ಹುಟ್ಟುಹಾಕಿದ ವಿವಾದಗಳು ಶಾಂತಿ ಕದಡುತ್ತಿದ್ದವು. ಹೈಕಮಾಂಡ್‌ ಸೂಚಿಸಿದಂತೆ ನಾನು ಮಾತನಾಡಿಲ್ಲ. ಅವುಗಳ ಕುರಿತು ನಮ್ಮ ಹಲವು ನಾಯಕರು ಮಾತನಾಡಿದ್ದಾರೆ’ ಎಂದರು.

RELATED ARTICLES

Related Articles

TRENDING ARTICLES