ಬೆಳಗಾವಿ: ಚನ್ನಪಟ್ಟಣದ ಯುವತಿಯ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ಹೊಸ ಟ್ವಿಸ್ಟ್ ಪಡೆದುಕೊಂಡಿದೆ. ನೊಂದ ಯುವತಿ ಬೆಳಗಾವಿಗೆ ಬಂದು ಸ್ಫೋಟಕ ಮಾಹಿತಿ ಹೊರ ಹಾಕಿದ್ದಾಳೆ. ಅಷ್ಟಕ್ಕೂ ಆಕೆ ಹೇಳಿದ್ದೇನು..?
ಕಾಂಗ್ರೆಸ್ನ ಯುವ ನಾಯಕಿ ನವ್ಯಶ್ರೀ ಅಶ್ಲೀಲ ವಿಡಿಯೋ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಕಳೆದ 15 ದಿನಗಳಿಂದ ವಿದೇಶದಲ್ಲಿ ಇದ್ದ ಚನ್ನಪಟ್ಟಣದ ನವ್ಯಶ್ರೀ, ನಿನ್ನೆ ಬೆಂಗಳೂರು ಪೊಲೀಸ್ ಕಮೀಷನರ್ ಕಚೇರಿಗೆ ಭೇಟಿ ನೀಡಿ, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆಗಿರುವ ತಮ್ಮ ಖಾಸಗಿ ಅಶ್ಲೀಲ ವಿಡಿಯೋ ಬಗ್ಗೆ ಕ್ರಮ ತೆಗೆದುಕೊಳ್ಳಲು ಮನವಿ ಮಾಡಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಅಶ್ಲೀಲ ವಿಡಿಯೋದಲ್ಲಿ ಇದ್ದ ಬೆಳಗಾವಿ ಮೂಲದ ವ್ಯಕ್ತಿ ರಾಜ್ ಕುಮಾರ್ ಟಾಕಳೆ ಹೊಸ ಆಟ ಶುರು ಮಾಡಿದ್ದಾನೆ. ನನಗೆ ಬ್ಲಾಕ್ ಮೇಲ್ ಮಾಡಲಾಗುತ್ತಿದೆ. ಜೀವ ಬೆದರಿಕೆ ಇದೆ ಎಂದು ಬೆಳಗಾವಿಯ ಎಪಿಎಂಸಿ ಠಾಣೆಗೆ ದೂರು ನೀಡಿದ್ದಾನೆ. ಆದ್ರೆ ಬೆಳಗಾವಿಯಲ್ಲಿ ಪ್ರತ್ಯಕ್ಷವಾದ ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ ಹೊಸ ಬಾಂಬ್ ಸಿಡಿಸಿದ್ದಾಳೆ. ರಾಜ್ ಕುಮಾರ್ ಟಾಕಳೆ ನನ್ನ ಗಂಡ.. ನಮ್ಮಿಬ್ಬರ ಮದುವೆಯಾಗಿದೆ. ನಮ್ಮ ಖಾಸಗಿ ವಿಡಿಯೋ ವೈರಲ್ ಮಾಡಿದವರು ಯಾರು ಎಂದು ಪತ್ತೆ ಹಚ್ಚಲು ಪೊಲೀಸ್ ಕಮಿಷನರ್ಗೆ ದೂರು ನೀಡುವುದಾಗಿ ಹೇಳಿಕೆ ನೀಡಿದ್ದಾಳೆ.
ಅಶ್ಲೀಲ ವಿಡಿಯೋ ಪ್ರಕರಣ ಕ್ಷಣಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ವಿಡಿಯೋದಲ್ಲಿ ಇದ್ದ ಸಚಿವರ ಆಪ್ತ ರಾಜ್ ಕುಮಾರ್ ಮಾಧ್ಯಮಗಳ ಕೈಗೆ ಸಿಗದೆ ತಿರುಗಾಡುತ್ತಿದ್ದಾನೆ. ಆದ್ರೆ ನವ್ಯಶ್ರೀ ಮಾತ್ರ ಈ ವಿಡಿಯೋದಲ್ಲಿ ಇದ್ದವಳು ನಾನು ಮತ್ತು ನನ್ನ ಗಂಡ ರಾಜ್ ಕುಮಾರ್ ಎಂದು ಹೇಳುತ್ತಿದ್ದಾಳೆ. ಸದ್ಯ ಈ ರಾಜ್ ಕುಮಾರ್ ಖಾನಾಪುರ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಆತನೇ ಬಂದು ಸ್ಪಷ್ಟೀಕರಣ ನೀಡಿದರೆ ಮಾತ್ರ ಯಾವುದು ಸತ್ಯ ಯಾವುದು ಸುಳ್ಳು ಎಂದು ಬಹಿರಂಗವಾಗುತ್ತದೆ.
ಒಟ್ಟಾರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಖಾಸಗಿ ವಿಡಿಯೋವನ್ನು ವೈರಲ್ ಮಾಡಿದ್ದು, ಯಾರು..? ಯಾವ ಕಾರಣಕ್ಕಾಗಿ ಈ ವಿಡಿಯೋ ವೈರಲ್ ಮಾಡಿದ್ದಾರೆ ಎಂಬುದು ಪೊಲೀಸರ ತನಿಖೆಯಿಂದ ಮಾತ್ರ ತಿಳಿಯಬೇಕಿದೆ.
ಕ್ಯಾಮರಾಮನ್ ರಾಹುಲ್ ಜೊತೆ ಅಣ್ಣಪ್ಪ ಬಾರ್ಕಿ ಪವರ್ ಟಿವಿ ಬೆಳಗಾವಿ