Monday, December 23, 2024

ರೋಣ ಪ್ರೀ ರಿಲೀಸ್​ ಇವೆಂಟ್​​ ಬಗ್ಗೆ ಕಿಚ್ಚ ಖಾಸ್​​ಬಾತ್​​

ಕ್ಷಣ ಕ್ಷಣಕ್ಕೂ ರೋಣ ಟೀಮ್​ ಕಡೆಯಿಂದ ಹೊಚ್ಚ ಹೊಸ ಅಪ್ಡೇಟ್​ ಸಿಗ್ತಿದೆ. ಪ್ರಮೋಷನ್​​ ಭರ್ಜರಿಯಾಗಿ ನಡಿತಿದೆ. ಗುಮ್ಮನ ಅಟ್ಟಹಾಸಕ್ಕೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇವೆ. ಇತ್ತ NFT ಮೆಂಬರ್​ಶಿಪ್​ ಪಡೆದಿರೋ ಚಿತ್ರತಂಡ ಪ್ರೀಮಿಯರ್​​ ಶೋಗೆ ಅದ್ಧೂರಿ ತಯಾರಿ ನಡೆಸಿದೆ. ರೋಣನ ಅಸಲಿ ಮಸಲತ್ತು ಏನ್​ ಗೊತ್ತಾ..?

ರೋಣ ಪ್ರೀ ರಿಲೀಸ್​ ಇವೆಂಟ್​​ ಬಗ್ಗೆ ಕಿಚ್ಚ ಖಾಸ್​​ಬಾತ್​​..!

NFT ಮೆಂಬರ್​ಶಿಪ್​​​.. ಪ್ರೇಕ್ಷಕರಿಗೆ ರೆಡ್​ ಕಾರ್ಪೆಟ್​​ ಎಂಟ್ರಿ

ಜುಲೈ 25ಕ್ಕೆ ವಿಕ್ರಾಂತ್​ ರೋಣ ಪ್ರೀ ರಿಲೀಸ್​ ರಂಗು

‘ಕಿಚ್ಚ ವರ್ಸ್​’​ ಲೋಕದಲ್ಲಿ ಗುಮ್ಮನ ಹೊಸ ಜಗತ್ತು

ಕಿಚ್ಚನ ಸಿನಿಕರಿಯರ್​​ನಲ್ಲಿ ರಿಲೀಸ್​​ಗೂ ಮುನ್ನವೆ ಈ ಪಾಟಿ ಸದ್ದು ಗದ್ದಲ ಮಾಡ್ತಿರೋ ಸಿನಿಮಾ ಅಂದ್ರೆ ವಿಕ್ರಾಂತ್​ ರೋಣ. ಟೀಸರ್​​​,ಟ್ರೈಲರ್​ ,ಮೂಲಕ ಗುಮ್ಮನ ಭಯಾನಕ ಅವತಾರವನ್ನು ಪುಟ್ಟದಾಗಿ ತೆರೆದಿಟ್ಟಿದ್ದರೂ, ಭಯಂಕರವಾಗಿ ಬೆಚ್ಚಿ ಬಿದ್ದಿರೋ ಚಿತ್ರಪ್ರೇಮಿಗಳು ಸಿನಿಮಾವನ್ನು ದೊಡ್ಡ ಪರದೆಯ ಮೇಲೆ ಕಣ್ತುಂಬಿಕೊಳ್ಳೋಕೆ ತುದಿಗಾಲಲ್ಲಿ ನಿಂತಿದ್ದಾರೆ.

ರಾ.ರಾ.ರಕ್ಕಮ್ಮನ ಲಂಗ ದಾವಣಿ ಸ್ಟೆಪ್ಸ್​ಗೆ ಬಿಂದಾಸ್​ ಆಗಿ ಹೆಜ್ಜೆ ಹಾಕಿದ್ದ ಪ್ರೇಕ್ಷಕರು, ರಾಜಕುಮಾರಿಯ ಜೋಗುಳ ಹಾಡಿಗೆ ತಲೆದೂಗಿದೆ. ಇದ್ರ ಜೊತೆಯಲ್ಲಿ ಹಳ್ಳಿಹೈದನಾಗಿ ಸದ್ದು ಮಾಡಿದ ಹೇಯ್​ ಫಕೀರ ಸಾಂಗ್​ ಕೂಡ ಸಿಕ್ಕಾಪಟ್ಟೆ ಹಲ್​ಚಲ್​ ಎಬ್ಬಿಸಿತ್ತು. ಇದಾದ ನಂತ್ರ ಸುದ್ದಿಗೋಷ್ಟಿ ಕರೆದಿದ್ದ ರೋಣ ಟೀಮ್​​ ಸರ್​​​ಪ್ರೈಸ್​ ನ್ಯೂಸ್​​ ನೀಡಿದೆ.

ಕೆಜಿಎಫ್​ ನಂತ್ರ NFT ಮೆಂಬರ್​​ಶಿಪ್​​ ಪಡೆದು,ಅದನ್ನು ಸಖತ್​ ಡಿಫರೆಂಟ್​ ಆಗಿ ಬಳಸಿಕೊಳ್ಳೋಕೆ ತಯಾರಿ ನಡೆಸಿದೆ. ಸಿಲ್ವರ್​​. ಗೋಲ್ಡ್​​​​, ಪ್ಲಾಟಿನಂ ಟಿಕೆಟ್​​ ನೀಡೋ ಮೂಲಕ ಪ್ರೇಕ್ಷಕರಿಗೆ ಪ್ರೀಮಿಯರ್ ಶೋಗಳಲ್ಲಿ ರೆಡ್​​​ ಕಾರ್ಪೆಟ್​​ ವೆಲ್ಕಮ್​​ ನೀಡೋ ಪ್ಲ್ಯಾನ್​ ಮಾಡಿಕೊಂಡಿದೆ. ಈ ಮೂಲಕ ವಿಶ್ವದಲ್ಲಿಯೇ ಮೊದಲ ಬಾರಿಗೆ ಕಿಚ್ಚನ ಅಭಿಮಾನಿಗಳಿಗೆ ಹೊಸ ಫೀಲ್​ ಸಿಗಲಿದೆ. ವಿಶೇಷ ಪಾರ್ಟಿ, ತಾರೆಯರ ಜೊತೆ ನೇರ ನೇರ ಮಾತುಕತೆಯ ಅದೃಷ್ಠ ಸಿಗಲಿದೆ.

ಕಿಚ್ಚವರ್ಸ್​ ಎಂಬ ಹೊಸ ಲೋಕ ವಿಕ್ರಾಂತ್​ ರೋಣ ಸಿನಿಮಾವನ್ನು ನಿಮ್ಮ ಜೀವನದ ಅವಿಭಾಜ್ಯ ಸವಿನೆನಪಾಗಿಸಲಿದೆ. ಸಿಲ್ವರ್​​, ಗೋಲ್ಡ್​​​, ಪ್ಲಾಟಿನಂ, ಡೈಮಂಡ್​​ ಮೆಂಬರ್​ಶಿಪ್​​ ಕೊಟ್ಟು ಅಭಿಮಾನಿಗಳಿಗೆ ಬಂಪರ್​ ಆಫರ್​ ನೀಡಲಿದೆ. ಸಿಲ್ವರ್​ ಮೆಂಬರ್​ಶಿಪ್​​​ ಪಡೆದವ್ರಿಗೆ ಲೀಡ್​​ ಆ್ಯಕ್ಟರ್​ ಸಮ್ಮುಖದಲ್ಲಿ ರೆಡ್​ ಕಾರ್ಪೆಟ್​ ಆಹ್ವಾನ, ಜೊತೆಗೆ ಪಾಪ್​​ಕಾರ್ನ್​​​, NFT ಲೋಗೋ ಸಿಗಲಿದೆ. ಗೋಲ್ಡ್​​ ಮೆಂಬರ್​ ಶಿಪ್​​ ಪಡೆದವರಿಗೆ ಇದ್ರ ಜೊತೆಯಲ್ಲಿ ಆಟೋಗ್ರಾಫ್​​​​ ಇರುವ ಮಗ್​ ದೊರೆಯಲಿದೆ.

ಈ ತರಹದ ಹೊಸ ಪ್ರಯತ್ನವನ್ನು ವಿಶ್ವದಲ್ಲಿಯೇ ಮೊದಲ ಬಾರಿಗೆ ಪರಿಚಯಿಸಿದ ಸಿನಿಮಾಗಳ ಸಾಲಿಗೆ ವಿಕ್ರಾಂತ್​ ರೋಣ ಮೊದಲು ಎನ್ನಲಾಗ್ತಿದೆ. ಇಷ್ಟೆ ಅಲ್ಲದೇ, ಪ್ಲಾಟಿನಮ್​​ ಸದಸ್ಯರಿಗೆ ನೆಚ್ಚನ ನಟನ ಜೊತೆಗೆ ಫೋಟೋ ತೆಗೆದುಕೊಳ್ಳುವ ಸದವಕಾಶ ಕೂಡ ಸಿಗಲಿದೆ. ಬಂಪರ್ ಆಫರ್​ ಅಂದ್ರೆ, ಡೈಮಂಡ್ ಮೆಂಬರ್​ಶಿಪ್​​. ಕಿಚ್ಚ ಕ್ರಿಯೇಷನ್​ ಅಡಿಯಲ್ಲಿ ಪಾರ್ಟಿಯಲ್ಲಿ ಪಾಲ್ಗೊಳ್ಳುವ ಜೊತೆಗೆ ಒನ್​ ಟು ಒನ್​​ 10 ನಿಮಿಷಗಳ ಇಂಟ್ರಾಕ್ಷನ್​​​​ಗೆ ಅವಕಾಶ ಕಲ್ಪಿಸಲಾಗಿದೆ. ​​

ಕಿಚ್ಚನ ಭರ್ಜರಿ ಆ್ಯಕ್ಟಿಂಗ್​, ಅನೂಪ್​​ ಭಂಡಾರಿ ನಿರ್ದೆಶನದ ಕರಾಮತ್ತು, ಜಾಕ್ವೆಲಿನ್​ ಜಾದು ಎಲ್ಲವೂ ಮಿಕ್ಸ್​ ಆಗಿ ಕನ್ನಡದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸೋಕೆ ಸಿನಿಮಾ ತುದಿಗಾಲಲ್ಲಿ ನಿಂತಿದೆ. ಜಾಕ್​ ಮಂಜು ನಿರ್ಮಾಣದಲ್ಲಿ ಸಿನಿಮಾ ರಿಚ್​ ಆಗಿ ಮೂಡಿ ಬಂದಿದೆ. ಅಜನೀಶ್​ ಲೋಕನಾಥ್​ ಸಂಗೀತದ ಅಲೆಯಲ್ಲಿ ಎಲ್ಲರೂ ಮುಳುಗಿರೋದು ಈ ಚಿತ್ರದ ಹಾಡುಗಳ ಮೂಲಕ ಸಾಭೀತಾಗಿದೆ. ವಿಲಿಯಮ್​ ಡೇವಿಡ್​ ಕ್ಯಾಮೆರಾ ಕಣ್ಣು ನಿಮ್ಮನ್ನು ಹೊಸ ಪ್ರಪಂಚಕ್ಕೆ ತೆಗೆದುಕೊಂಡು ಹೋಗಲಿದೆ. ಒಟ್ಟಾರೆ ಚಿತ್ರದ ಇನ್ನಷ್ಟು ಅಪ್ಡೇಟ್​ಗೆ ಕಾಯ್ತಿರೋ ಫ್ಯಾನ್ಸ್​ಗೆ ಭರ್ಜರಿ ಮನರಂಜನೆ ಕಾದಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES