ಬೆಂಗಳೂರು : ದಿನಬಳಕೆಯ ವಸ್ತುಗಳ ಮೇಲೆ ಶೇ.5ರಷ್ಟು GST ಹೆಚ್ಚಳದಿಂದಾಗಿ ಕೇಂದ್ರದ ನೂತನ GST ನೀತಿ ಇಂದಿನಿಂದಲೇ ಜಾರಿಯಾಗಲಿದೆ.
ಮೀನು, ಮಾಂಸ, ಗೋಧಿ ಸೇರಿ ಎಲ್ಲವೂ ಕಾಸ್ಟ್ಲಿಯಾಗಿದೆ. ಪ್ಯಾಕ್ ಮಾಡಿದ ಮೀನು, ಮಾಂಸ, ಮೊಸರು, ಜೇನು ಬೆಲ್ಲ, ತರಕಾರಿ, ಗೋಧಿ ಸೇರಿ ಹಲವು ದಿನಸಿ ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಹೋಟೆಲ್ ರೂಂಗಳ ಬಾಡಿಗೆ, ವಾಣಿಜ್ಯ ಮಳಿಗೆಗಳ ಬಾಡಿಗೆಯೂ ಹೆಚ್ಚಳವಾಗಿದೆ. ಇಂದಿನಿಂದಲೇ ನೂತನ GST ನೀತಿ ಅನ್ವಯವಾಗಿದ್ದು, ಪ್ಯಾಕೇಜ್ ಡೇರಿ ಮತ್ತು ಇತರ ಆಹಾರ ಉತ್ಪನ್ನಗಳಿಗೆ ಮೇಲೆ ಶೇ 5ರಷ್ಟು GST ಹೆಚ್ಚಳವಾಗಿದೆ.
ಮೊಸರು, ಲಸ್ಸಿ, ಮಜ್ಜಿಗೆ ದರ ₹1ರಿಂದ ₹3 ರಷ್ಟು ಹೆಚ್ಚಳ, 200 ಗ್ರಾಂ ಮೊಸರು ದರ ₹10 ರಿಂದ ₹12ಕ್ಕೆ ಹೆಚ್ಚಳ, 200 ಮಿ.ಲೀ. ಸ್ಯಾಚೆಯ ಮಜ್ಜಿಗೆ ದರ ₹7 ರಿಂದ ₹8ಕ್ಕೆ ಏರಿಕೆಯಾಗಿದೆ. 200 ಮಿ.ಲೀ. ಸ್ಯಾಚೆಯ ಲಸ್ಸಿ ದರ ₹10ರಿಂದ 11ಕ್ಕೆ ಹೆಚ್ಚಳ, ಹಾಲಿನ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಯಾವುದೆಲ್ಲಾ ದುಬಾರಿ..?
ಮೀನು, ಮಾಂಸ, ತರಕಾರಿ, ಜೇನುತುಪ್ಪ,
ಬೆಲ್ಲ, ತುಪ್ಪ, ಅಕ್ಕಿ, ಗೋಧಿ ಸೇರಿ ಇತರೆ ಧಾನ್ಯಗಳು
LED ಬಲ್ಬ್, LED ಲ್ಯಾಂಪ್, ಸೋಲಾರ್ ವಾಟರ್ ಹೀಟರ್, ಮುದ್ರಣ ಇಂಕ್
ನಿತ್ಯ 1000 ರೂ.ಗಿಂತ ಕಡಿಮೆ ಇರೋ ಹೋಟೆಲ್ ರೂಂಗೂ 12% GST ಜಾರಿ
ಚೆಕ್ ಬುಕ್, ಚರ್ಮದ ಉತ್ಪನ್ನ, ಟೈಲರಿಂಗ್, ಜವಳಿ ಸೇವೆ, ಅಂಚೆ ಇಲಾಖೆ ಬುಕ್ ಫೋಸ್ಟ್
ನಿತ್ಯ 5000ರೂ ಹೆಚ್ಚು ಶುಲ್ಕ ಇರೋ ಆಸ್ಪತ್ರೆಯ ಸ್ಪೆಷಲ್ ವಾರ್ಡ್‌ಗೆ 5% GST
ನಿತ್ಯ 5000 ಗಿಂತ ಹೆಚ್ಚಿನ ಬಾಡಿಗೆ ವಿಧಿಸೋ ಧಾರ್ಮಿಕ ಕೇಂದ್ರಗಳು,
ಮಾಸಿಕ 2500ಕ್ಕೂ ಬಾಡಿಗೆ ವಿಧಿಸೋ ವಾಣಿಜ್ಯ ಕೇಂದ್ರಗಳಿಗೂ GST ಜಾರಿಯಾಗಲಿದೆ.