Friday, January 10, 2025

ಬಡಕುಟುಂಬಕ್ಕೆ ವಿಚಿತ್ರ ಕಾಯಿಲೆ..!

ಬಾಗಲಕೋಟೆ : ಶಿರಗುಪ್ಪಿ ತಾಂಡಾದ ಸಂಗೀತಾ ಲಮಾಣಿ ಅವರ ಮಕ್ಕಳಾದ ಪ್ರಶಾಂತ್ (12), ಚೇತನ್(9) ವರ್ಷದ ಮಕ್ಕಳು ಥಲಸ್ಸಿಮಿಯಾ ಕಾಯಿಲೆ ಬಳಲುತ್ತಿದ್ದಾರೆ.ಕಡು ಬಡತನದ ನಡುವೆ ಇಬ್ಬರು ಮಕ್ಕಳ ಶಸ್ತ್ರ ಚಿಕಿತ್ಸೆಗೆ ಆರ್ಥಿಕ ನೆರವು ಬೇಕಿದೆ. ಬೆಂಗಳೂರಿನ ನಾರಾಯಣ ಹೃದಯಾಲಯದ ಆಸ್ಪತ್ರೆಯಲ್ಲಿ ತೋರಿಸಿದ್ದು, 77 ಲಕ್ಷ ರೂ.ಖರ್ಚಾಗುತ್ತದೆ ಎಂದು ಹೇಳಿದ್ದಾರೆ. ಬಡತನದಲ್ಲಿ ಮಕ್ಕಳ ಚಿಕಿತ್ಸೆಗೆ ಬೇಕಾದ ಹಣ ಭರಿಸಲು ಕುಟುಂಬಕ್ಕೆ ಅಸಾಧ್ಯವಾಗಿದೆ.ಮಕ್ಕಳನ್ನ ಬದುಕುಳಿಸಿಕೊಳ್ಳಲು ತಾಯಿ ಸಂಗೀತಾ ಮಕ್ಕಳ ಶಸ್ತ್ರ ಚಿಕಿತ್ಸೆಗೆ ದಾನಿಗಳಿಂದ ಆರ್ಥಿಕ ನೆರವಿಗೆ ಮನವಿ ಮಾಡಿಕೊಳ್ತಿದ್ದಾರೆ.

ಇನ್ನು ಸಂಗೀತಾ ಲಮಾಣಿ ಅವರ ಮಕ್ಕಳ ಬದುಕಿಗೆ ಮಾರಕವಾದ ಥಲಸ್ಸಿಮಿಯಾ ಕಾಯಿಲೆಯ ಸುದ್ದಿ ತಿಳಿಯುತ್ತಿದ್ದಂತೆ ಬಾಗಲಕೋಟೆಯ ಪೇಂಟರ್ಸ್‌ ಸಂಘ ಸಂಗೀತಾ ಅವರ ಮನೆಗೆ ಭೇಟಿ ನೀಡಿ ಮಕ್ಕಳ ಚಿಕಿತ್ಸೆಗೆ 1 ಲಕ್ಷ ರೂಪಾಯಿ ನೀಡಿ ಮಾನವಿಯತೆ ಮೆರೆದಿದೆ. ಎಲ್ಲರೂ ತಮ್ಮ ಕೈಲಾದಷ್ಟು ಸಹಾಯ ಮಾಡುವಂತೆ ಮನವಿ ಮಾಡಿದೆ.

ಒಟ್ಟಿನಲ್ಲಿ ಮಾರಣಾಂತಿಕ ಥಲಸ್ಸಿಮಿಯಾ ಕಾಯಿಲೆ ಬಡ ಕುಟುಂಬದ ನೆಮ್ಮದಿಯನ್ನೇ ಕಿತ್ತುಕೊಂಡಿದೆ.ದಾನಿಗಳು ತಮ್ಮ ಕೈಲಾದಷ್ಟು ಈ ಕುಟುಂಬಕ್ಕೆ ಧನಸಹಾಯ ಮಾಡಿದ್ರೆ ಮಾತ್ರ ಮಕ್ಕಳು ಬದುಕುಳಿಯಲು ಸಾಧ್ಯ.

ನಿಜಗುಣ ಮಠಪತಿ, ಪವರ್ ಟಿವಿ,ಬಾಗಲಕೋಟೆ

RELATED ARTICLES

Related Articles

TRENDING ARTICLES