Monday, December 23, 2024

ಬೆಂಗಳೂರು ವಾರ್ಡ್​​ಗೆ ಅಪ್ಪು ಹೆಸ್ರು; ಫ್ಯಾನ್ಸ್​​ ದಿಲ್​​ಖುಷ್​​​​​​​

ಶ್ರೀ ಗಂಧದ ನಾಡಿನ ಮರೆಯಲಾಗದ ಮುತ್ತು ನಮ್ಮ ನಿಮ್ಮೆಲ್ಲರ ಪ್ರೀತಿಯ ಪವರ್​ ಸ್ಟಾರ್​ ಪುನೀತ್​ ರಾಜ್​​​ಕುಮಾರ್​​​. ಅವರ ಸಲ್ಲಿಸಿದ ಸಾಮಾಜಿಕ ಸೇವೆಗೆ ಎಲ್ಲರ ಹೃದಯದಲ್ಲಿ ದೇವರಾಗಿ ನೆಲೆಸಿದ್ದಾರೆ. ಅವರಿಗೆ ಭಿನ್ನ ವಿಭಿನ್ನವಾಗಿ ಕೃತಜ್ನತೆ ಸಲ್ಲಿಸುವ ಕೆಲಸಗಳು ಪ್ರತಿ ನಿತ್ಯ ನಡೆಯುತ್ತಲೇ ಇವೆ. ಇದೀಗಬಹುದಿನಗಳ ಆಸೆಯಾಗಿದ್ದ ಕನಸು ನನಸಾಗಿದೆ.  ಬೇಂಗಳೂರಿನ ವಾರ್ಡ್​ಗೆ ಅಪ್ಪು ಹೆಸರು ಅಚ್ಚೊತ್ತಿದ್ದು  ಕೋಟಿ ಕೋಟಿ ಅಭಿಮಾನಿಗಳ ತಪಸ್ಸು ಸಾಕಾರವಾಗಿದೆ.

ಬೆಂಗಳೂರು ವಾರ್ಡ್​​ಗೆ ಅಪ್ಪು ಹೆಸ್ರು.. ಫ್ಯಾನ್ಸ್​​ ದಿಲ್​​ಖುಷ್​​​​​​​

ಅಮೃತ ಘಳಿಗೆಗೆ ಸಾಕ್ಷಿಯಾಗಿ ನಿಂತ ರಾಜಕೀಯ ಗಣ್ಯರು..!

ಮುಗಿಲು ಮುಟ್ಟಿದ ಅಪ್ಪು ಅಭಿಮಾನಿಗಳ ಹರ್ಷೋದ್ಘಾರ..!

ಪರಮಾತ್ಮನ ಪುಣ್ಯಭೂಮಿಯಲ್ಲಿ ನಿಲ್ಲದ ನೂಕು ನುಗ್ಗಲು

ಅಪ್ಪು ಕೇವಲ ನಟ ಮಾತ್ರವಲ್ಲ. ನಡೆದಾಡುವ ದೇವರಾಗಿದ್ದರು. ಅವರ ನಟನೆ, ಸಾಮಾಜಿಕ ಕಳಕಳಿ, ಮುದ್ದು ಮುಖದ ನಗು ಎಲ್ಲರ ನಿಷ್ಕಲ್ಮಶ ಪ್ರೀತಿ ಸಂಪಾದಿಸಿತ್ತು. ಬೆಂಗಳೂರಿನ ಮಹಾಲಕ್ಷ್ಮಿ ಲೇ ಔಟ್​​ನ 54 ಹಾಗೂ 55ನೇ ವಾರ್ಡ್​ಗೆ ಪುನೀತ್​ ರಾಜ್​ಕುಮಾರ್​ ಹೆಸರಿಡಬೇಕು ಎಂದು ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ರು. ನಗರಾಭಿವೃದ್ದಿ ಇಲಾಖೆಗೆ ಅಭಿಮಾನಿಗಳು ಸಲ್ಲಿಸಿದ್ದ ಮನವಿಗೆ ಸರ್ಕಾರ ಸ್ಪಂದಿಸಿದೆ.

ಕರುನಾಡಿನ ಯುವರತ್ನ, ದೊಡ್ಮನೆಯ ಹೆಮ್ಮೆಯ ಸುಪುತ್ರ ಅಪ್ಪು ಬಗ್ಗೆ ಕರ್ನಾಟಕ ಸರ್ಕಾರಕ್ಕೂ ವಿಶೇಷ ಕಾಳಜಿ ಇದೆ. ಅಪ್ಪು ಇಹಲೋಕ ತ್ಯಜಿಸಿದ ಆ ಕರಾಳ ದಿನದಂದು ಮಾನ್ಯ ಮುಖ್ಯಮಂತ್ರಿಗಳು ಅಪ್ಪು ಹಣೆಗೆ ಮುತ್ತಿಕ್ಕಿ ಕಣ್ಣೀರಾಕಿದ್ದು ಎಂದಿಗೂ ಮರೆಯುವಂತಿಲ್ಲ. ಇದೀಗ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಸ್ವತಃ  ಸಿಎಂ​​ ಬೊಮ್ಮಾಯಿಯವರೇ ಮಹಾಲಕ್ಷ್ಮಿ ಲೇಔಟ್​ನ 55ನೇ ವಾರ್ಡ್​​ಗೆ ಡಾ.ಪುನೀತ್​ ರಾಜ್​​ಕುಮಾರ್​ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಮಹಾಲಕ್ಷ್ಮಿ ಲೇಔಟ್​​ನ 55ನೇ ವಾರ್ಡ್​ಗೆ ಅಪ್ಪು ಹೆಸರನ್ನು ಅಧಿಕೃತಗೊಳಿಸಲು ಅದ್ಧೂರಿ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭದಲ್ಲಿ ಅಭಿಮಾನಿಗಳ ಹರ್ಷಕ್ಕೆ ಪಾರವೇ ಇರಲಿಲ್ಲ. ಕೈಯಲ್ಲಿ ಅಪ್ಪು ಬಾವಚಿತ್ರವಿರುವ ಭಾವುಟಗಳು ರಾರಾಜಿಸ್ತಾ ಇದ್ದವು. ಈ ಕ್ಷಣ ಎಲ್ಲವೂ ಅಮೃತ ಘಳಿಗೆಯಲ್ಲಿ ಮಾತ್ರ ಆಗಲು ಸಾಧ್ಯ. ಇದು ಪುಣ್ಯದ ದಿನ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.

ಸ್ಥಳಿಯ ಶಾಸಕ ಹಾಗೂ ಸಚಿವ ಕೆ.ಗೋಪಾಲಯ್ಯ ಮಾತನಾಡಿ, ನಿಮ್ಮೆಲ್ಲರ ಮನವಿಗೆ ನಾವು ಸ್ಪಂದಿಸಿದ್ದೇವೆ.ಅವರ ಸಾಧನೆ ಏನು ಅನ್ನೋದು ಎಲ್ಲರಿಗೂ ಗೊತ್ತಿದೆ. ಪ್ರತಿ ಬಾನುವಾರ ಇಂದಿಗೂ 25000 ಸಾವಿರಕ್ಕೂ ಅಧಿಕ ಮಂದಿ ಅವರನ್ನ  ನೋಡಲು ಬರುತ್ತಾರೆ. ಇಂತಹ ಕಲಾವಿದ ಮತ್ತೊಬ್ಬ  ಸಿಗೋದಿಲ್ಲ ಎಂದ್ರು.

ಅಂತೂ ಕೊನೆಗೂ ಕಾವೇರಿ ನಗರ ವಾರ್ಡ್​​ ಈಗ ಕಾವೇರಿ ಮಣ್ಣಿನ ಸುಪುತ್ರನ ಹೆಸರಾಗಿ ಬದಲಾಗಿದೆ. 55ನೇ ವಾರ್ಡ್​​ಗೆ ಡಾ.ಪುನೀತ್​ ರಾಜ್​​ ಕುಮಾರ್​ ವಾರ್ಡ್​ ಎಂದು ನಾಮಕರಣ ಮಾಡಲಾಗಿದೆ. ಅಧಿಕೃತವಾಗಿ ಘೋಷಣೆಯಾಗ್ತಾ ಇದ್ದಂತೆ ಎಲ್ಲೆಡೆ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಏನೆ ಇರಲಿ ಅಪ್ಪು ಅಜರಾಮರ ಅನ್ನೋ ಮಾತು ಮತ್ತೆ ಮಾತು ಪ್ರೂವ್​ ಆಗ್ತಿದೆ. ಹ್ಯಾಟ್ಸ್​​ ಆಫ್​​ ಅಪ್ಪು ಸರ್​​​. ಮತ್ತೆ ಹುಟ್ಟಿ ಬನ್ನಿ.

ರಾಕೇಶ್​ ಆರುಂಡಿ , ಫಿಲ್ಮ್​​​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES