ಬೆಂಗಳೂರು: ಯಾವುದೇ ವಿಘ್ನಗಳಿಲ್ಲದೆ ರಾಷ್ಟ್ರಪತಿ ಚುನಾವಣೆ ಮುಕ್ತಾಯವಾಗಿದೆ. ಅಭ್ಯರ್ಥಿಗಳ ಹಣೆಬರಹ ಬ್ಯಾಲೆಟ್ ಬಾಕ್ಸ್ ನಲ್ಲಿ ಭದ್ರವಾಗಿದೆ. ಜುಲೈ 21 ರಂದು ಮತ ಎಣಿಕೆ ನಡೆಯಲಿದ್ದು ಅಂದೇ ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದಲ್ಲೂ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಮತದಾನ ಮುಗಿದಿದೆ. ಇದೇ ಮೊದಲ ಬಾರಿಗೆ ಪೂರ್ಣಪ್ರಮಾಣದ ಮತದಾನ ನಡೆದಿದೆ.
ನೂತನ ರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಡೆದಿದ್ದು, ಘಟಾನುಘಟಿಗಳು ಮತ ಚಲಾವಣೆ ಮಾಡಿದ್ರು. ಸಂಸತ್‌ನ 776 ಸದಸ್ಯರು ಮತ್ತು 4,033 ಶಾಸಕರು ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಿದ್ರು. ಮತಗಳ ಒಟ್ಟು ಮೌಲ್ಯ 10,86,431 ಆಗಿದ್ದು, ಇದರಲ್ಲಿ ಶಾಸಕರ ಮತಗಳು 5,43,231 ಮತ್ತು ಸಂಸದರ ಮತಗಳು 5,43,200 ಆಗಿದೆ. ಜುಲೈ 21ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.
ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅವಧಿ ಜುಲೈ 24ರಂದು ಮುಕ್ತಾಯವಾಗಲಿದೆ. ಬುಡಕಟ್ಟು ಸಮುದಾಯದ ನಾಯಕಿ ದ್ರೌಪದಿ ಮುರ್ಮು ಹಾಗೂ ಮಾಜಿ ಕೇಂದ್ರ ಸಚಿವ ಯಶ್ವಂತ್ ಸಿನ್ಹಾ ಕಣದಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪ್ರಮುಖರು ಈಗಾಗಲೇ ಮತದಾನ ಮಾಡಿದ್ದಾರೆ.
ಅನಾರೋಗ್ಯ ಇದ್ದರೂ ವ್ಹೀಲ್ ಚೇರ್‌ನಲ್ಲಿ ಬಂದು, ಕರ್ತವ್ಯ ಪ್ರಜ್ಞೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮೆರೆದಿದ್ದಾರೆ.
ಈ ವೇಳೆ ಮಾತನಾಡಿರುವ ಯಶವಂತ್ ಸಿನ್ಹ, ನನಗೆ ಗೆಲುವು ಆದ್ರೆ, ಅದು ಪ್ರಜಾಪ್ರಭುತ್ವದ ಗೆಲುವು ಎಂದು ಹೇಳಿದ್ದಾರೆ.
ದೇಶಾದ್ಯಂತ ಗಣ್ಯರು ಮತ ಚಲಾಯಿಸಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಿದ್ದು, ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ವ್ಹೀಲ್‌ಚೇರ್‌ನಲ್ಲಿ ಕಾಣಿಸಿಕೊಂಡ್ರು.
ಟಿಎಂಸಿಯ 12 ಶಾಸರಿಂದ ಅಡ್ಡಮತದಾನ :
ವಿಪಕ್ಷಗಳ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಅವರನ್ನು ನಿಲ್ಲಿಸಲಾಗಿದೆ.. ಖುದ್ದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದಲ್ಲೇ ಆಯ್ಕೆ ಮಾಡಲಾಗಿದೆ.. ಆದ್ರೆ, ಟಿಎಂಸಿ 12 ಶಾಸಕರು ದ್ರೌಪತಿ ಮುರ್ಮು ಪರ ಮತ ಚಲಾಯಿಸಿದ್ದಾರೆ.. ಇದ್ರ ಜೊತೆಗೆ, ಮೇಘಾಲಯಯ 5 ಕಾಂಗ್ರೆಸ್ ಶಾಸಕರು ಕೂಡ ಕ್ರಾಸ್ ವೋಟಿಂಗ್ ಮಾಡಿ ಮುರ್ಮು ಗೆಲುವಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಎನ್‌ಡಿಎ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮ ಬಹುತೇಖವಾಗಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ.. ಆದ್ರೂ ಗೌಪ್ಯ ಮತದಾನ ನಡೆದಿರೋದ್ರಿಂದ ಈಗಲೇ ಯಾವುದನ್ನೂ ಹೇಳೋಕೆ ಸಾಧ್ಯವಿಲ್ಲ. ಆದರೆ ದ್ರೌಪದಿ ಮುರ್ಮರವರ ಜಯ ಕಟ್ಟಿಟ್ಟ ಬುತ್ತಿ ಅಂತ ಸಿಎಂ ಹೇಳಿದ್ರೆ, ಇತ್ತ ಮಾಜಿ ಸಿಎಂ ಯಡಿಯೂರಪ್ಪ ನೂರಕ್ಕೆ ನೂರರಷ್ಟು ದ್ರೌಪತಿಯವರೇ ಜಯಗಳಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಒಟ್ನಲ್ಲಿ ರಾಜ್ಯದಲ್ಲಿಂದು ನಡೆದ ರಾಷ್ಟ್ರಪತಿ ಚುನಾವಣೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಯುತವಾಗಿ ನಡೆದಿದೆ. ಎಲ್ಲಾ ಶಾಸಕರು ಗೈರಾಗದೆ ಮತದಾನ ಮಾಡಿದ್ದಾರೆ. ಬಹುತೇಖವಾಗಿ ದ್ರೌಪದಿ ಮುರ್ಮ ಮುಂದಿನ ರಾಷ್ಟ್ರಪತಿಯಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿವೆ ಎಲ್ಲಾದಕ್ಕೂ ಇನ್ನೇರಡು ದಿನದಲ್ಲಿ ಉತ್ತರ ಸಿಗಲಿದೆ..
ರಾಘವೇಂದ್ರ ವಿಎನ್ ಪೊಲಿಟಿಕಲ್ ಬ್ಯೂರೋ ಪವರ್ ಟಿವಿ ಬೆಂಗಳೂರು