ರಾಜ್ಯದಲ್ಲಿ ನಿರಂತರ ಮಳೆ ಜನಜೀವನವನ್ನೆ ಅಸ್ತವ್ಯಸ್ತಗೊಳಿಸಿದೆ. ಮುಳುಗಡೆ ಜಿಲ್ಲೆಯಲ್ಲೂ ವರುಣನ ಅವಾಂತರ ಒಂದಾ ಎರಡಾ. ಅದ್ರಲ್ಲೂ ಮುಂಗಾರು ಮಳೆಗೆ ಬಿತ್ತನೆ ಮಾಡಿದ ರೈತ ಬೆಳೆ ಚನ್ನಾಗಿ ಬಂತಲ್ಲಾ ಅನ್ನೋ ಖುಷಿಗೆ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆ ರೈತನ ಕಣ್ಣಲ್ಲಿ ಕಣ್ಣೀರು ತರಿಸಿದೆ. ಬೆಳೆಗೆ ಹಳದಿ ರೋಗ ತಗಲಿದ್ದು, ರೈತ ಕಂಗಾಲಾಗಿದ್ದಾನೆ.
ಒಂದೆಡೆ ನಿರಂತರ ಮಳೆ. ಮತ್ತೊಂದೆಡೆ ಅಧಿಕ ಮಳೆಯಿಂದ ಹಳದಿ ರೋಗಕ್ಕೆ ತುತ್ತಾದ ಹೆಸರು ಬೆಳೆ. ಇನ್ನೊಂದೆಡೆ ಹೆಸರು ಬೆಳೆದ ಹೊಳದಲ್ಲಿ ಕಣ್ಣೀರಿಡುತ್ತಿರುವ ಅನ್ನದಾತ.ಇಂತಹ ಮನಕಲಕುವ ದೃಶ್ಯ ಕಂಡು ಬಂದಿದ್ದು ಬಾಗಲಕೋಟೆಯಲ್ಲಿ. ಹೌದು ನಿರಂತರ ಮಳೆ ಹಿನ್ನೆಲೆ ಬಾಗಲಕೋಟೆ ರೈತ ದೇವದಾಸ್ ಮಂಕಣಿ ಕುಟುಂಬ ಅಕ್ಷರಶಃ ನಲುಗಿ ಹೋಗಿದೆ. ೧೩ ಎಕರೆ ಜಮೀನಿನಲ್ಲಿ ಬೆಳೆದ ಹೆಸರು ಬೆಳೆಗೆ ಹಳದಿ ರೋಗ ತಗಲಿದ್ದು,ಸಂಪೂರ್ಣ ಬೆಳೆ ಹಾನಿಗೊಳಗಾಗಿದೆ.ರೈತ ದೇವದಾಸ್ ಮಂಕಣಿ ಕಣ್ಣೀರಿಡುತ್ತಿರೋ ದೃಶ್ಯ ಮನ ಕಲಕುವಂತಿದೆ.
ಇನ್ನು ದೇವದಾಸ್ ಮಂಕಣಿ ತನ್ನ ೧೩ ಎಕರೆ ಜಮೀನಿನಲ್ಲಿ ಹೆಸರು ಬಿತ್ತನೆಗೆ 2 ಲಕ್ಷ ಸಾಲ ಮಾಡಿಕೊಂಡಿದ್ದು. ಹಳದಿ ರೋಗಕ್ಕೆ ತುತ್ತಾದ ಹೆಸರು ಕೀಳಲು ಕೂಲಿಗಳಿಗೆ ಮತ್ತೆ ಪಗಾರ ನೀಡಬೇಕಿದೆ.ಉತ್ತಮ ಫಸಲು ಕೈಗೆಟಕುತ್ತೆ ಎಂದು ಕನಸು ಕಾಣ್ತಿದ್ದ ರೈತನಿಗೆ ಇದೀಗ ಸಾಲ ಯಮನಂತೆ ಎದುರು ನಿಂತಿದೆ.ಇತ್ತ ಹೊಲದಲ್ಲಿನ ಬೆಳೆ ಹಾನಿಯಾಗಿದ್ದು ರೈತ ದೇವದಾಸ್ ಮಾಡಿದ ಸಾಲ ಹೇಗೆ ತೀರಿಸುವುದು ಎಂದು ಕಣ್ಣಿರಿಡುತ್ತಿದ್ದಾನೆ.ಬಿತ್ತನೆ ಬೀಜ ಗೊಬ್ಬರಕ್ಕಾಗಿ ಮಾಡಿಕೊಂಡ ಸಾಲ ಹೇಗೆ ತೀರಿಸುವುದು ಮಳೆಯಿಂದ ಹೆಸರು ಬೆಳೆ ಹಾನಿಯಾಗಿದೆ.
ಒಟ್ಟಿನಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಹೆಸರು ಬೆಳೆಗೆ ಹಳದಿ ರೋಗ ಬಾಧೆ ತಗಲಿದ್ದು.ಹೆಸರು ಬಿತ್ತನೆ ಮಾಡಿದ ರೈತನಿಗೆ ಸಂಪೂರ್ಣ ಬೆಳೆ ಹಾನಿಯಾಗಿದೆ.ಸರ್ಕಾರ ಹಾನಿಗೊಳಗಾದ ಅನ್ನದಾತನಿಗೆ ಸಮರ್ಪಕ ಪರಿಹಾರ ನೀಡುವ ಕೆಲಸ ಮಾಡಿ, ರೈತನ ಕಷ್ಟಕ್ಕೆ ಸರ್ಕಾರ ನೆರವಾಗುತ್ತಾ ಎಂದು ಕಾದು ನೋಡಬೇಕಿದೆ…
ನಿಜಗುಣ ಮಠಪತಿ,ಪವರ್ ಟಿವಿ ಬಾಗಲಕೋಟೆ……