ರಾಯಚೂರು: ಸಿಂಧನೂರ ತಾಲೂಕಿನ ಬಾಲಾಜಿ ಕ್ಯಾಂಪ್ ಬಳಿ ಸಂಭವಿಸಿದ ಭೀಕರ ರಸ್ತೆ ದುರಂತದಲ್ಲಿ ದಂಪತಿ ಸೇರಿ ಒಂದೇ ಕುಟುಂಬದ ನಾಲ್ವರು ಧಾರುಣವಾಗಿ ಮೃತಪಟ್ಟಿದ್ದಾರೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಮೃತದೇಹಗಳು ಕಾರಿನಲ್ಲೇ ಸಿಲುಕಿ ಪೀಸ್ ಪೀಸ್ ಆಗಿವೆ. ಲಾರಿಯ ವೇಗದ ಹೊಡೆತಕ್ಕೆ ಅಪ್ಪಚ್ಚಿಯಾದ ಕಾರು. ಹೈದ್ರಾಬಾದ್ ಮೂಲದ ಅಮರದೀಪ್, ಪೂರ್ಣಿಮಾ ದಂಪತಿ ಹಾಗೂ ಇಬ್ಬರು ಮಕ್ಕಳಾದ ಜಲೀನ್ ಮತ್ತು ಮಾಹಿನ್ ಸಾವಿನಲ್ಲೂ ಒಂದಾದ ನತದೃಷ್ಟರು.
ಮೃತ್ಯುಕೂಪವಾದ ರಾಯಚೂರು-ಸಿಂಧನೂರು ರಾಜ್ಯ ಹೆದ್ದಾರಿ
ರಸ್ತೆ ಅವ್ಯವಸ್ಥೆಯಿಂದ ಇಲ್ಲಿ ಮರುಕಳಿಸುತ್ತಿವೆ ಅವಘಾತಗಳು
ಇನ್ನು ರಾಯಚೂರು-ಸಿಂಧನೂರು ರಾಜ್ಯ ಹೆದ್ದಾರಿ ನಿತ್ಯವೂ ಮೃತ್ಯುಕೂಪವಾಗಿ ಮಾರ್ಪಟ್ಟಿದೆ. 95km ಉದ್ದದ ಈ ರಸ್ತೆ ಸಂಪೂರ್ಣವಾಗಿ ಅವ್ಯವಸ್ಥೆಯಿಂದ ಕೂಡಿದೆ.ಹೀಗಾಗಿ ಈ ರಸ್ತೆಯಲ್ಲಿ ನಿತ್ಯವೂ ಅಪಘಾತಗಳು ಸಂಭವಿಸುತ್ತಲೆ ಇವೆ. ನೆಪಮಾತ್ರಕ್ಕೆ ಕೆಲವೆಡೆ ರಸ್ತೆಗೆ ತೇಪೆ ಹಚ್ಚುವ ಕಾಮಗಾರಿ ಮಾಡಿ ಕೈತೊಳೆದುಕೊಳ್ಳಲಾಗಿದೆ. ಹೀಗಾಗಿ ಈ ಹೆದ್ದಾರಿಯಲ್ಲಿ ಸಂಭವಿಸ್ತಿರುವ ರಸ್ತೆ ಅಪಘಾತಗಳಿಗೆ ನಿಯಂತ್ರಣವೇ ಇಲ್ಲದಂತಾಗಿದೆ. ಈ ಹೆದ್ದಾರಿ ದುರಸ್ತಿ ಮಾಡದೆ ನಿರ್ಲಕ್ಷ್ಯವಹಿಸಿರುವ ಅಧಿಕಾರಿಗಳಿಗೆ ಸ್ಥಳೀಯರು ನಿತ್ಯವೂ ಹಿಡಿಶಾಪ ಹಾಕ್ತಿದ್ದಾರೆ.
ಇನ್ನು ಸಿಂಧನೂರು ಗ್ರಾಮೀಣ ವೃತ್ತ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಬಳಗಾನೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿದ್ದು ಬಿರಾದಾರ್, ಪವರ ಟಿವಿ ರಾಯಚೂರು