Monday, December 23, 2024

ಹೈದ್ರಾಬಾದ್​ನಲ್ಲಿ ಲಾಲ್​ಸಿಂಗ್​ ಸ್ಪೆಷಲ್ ಪ್ರೀಮಿಯರ್

ಆಮೀರ್​ ಖಾನ್​​ ಸಿನಿಮಾಗಳಂದ್ರೆ ಒತ್ತಾಗಿ ಹೆಚ್ಚು ಹೇಳಬೇಕಾಗಿಲ್ಲ. ಅವ್ರ ಹಾರ್ಡ್​​​​ ವರ್ಕ್​​, ಡೆಡಿಕೇಷನ್​​​​​​ಗೆ ಯಾವ ನಟರೂ ಸಾಟಿಯಾಗಲ್ಲ. ಸಿನಿಮಾ ಮಿಸ್ಟರ್​​ ಪರ್ಫೆಕ್ಟ್​​ಗೆ ಒಮದು ತಪಸ್ಸು ಇದ್ದಂತೆ. ಅದಕ್ಕಾಗಿ ಅವರು ಹಾಕೋ ಏಫರ್ಟ್​​ ನೆಕ್ಸ್ಟ್​ ಲೆವೆಲ್​​ ಇರುತ್ತೆ. ಇದೀಗ ಲಾಲ್​​ ಸಿಂಗ್​ ಚಡ್ಡಾ ಸಿನಿಮಾ ಸರತಿ. ಈ ಸಿನಿಮಾದ ಪ್ರೀಮಿಯರ್​​ ಶೋನಾ ಟಾಲಿವುಡ್​​​​ನ ಘಟಾನುಘಟಿಗಳು ಎಂಜಾಯ್​​ ಮಾಡಿದ್ದಾರೆ. ಇವ್ರ ಮುಂದೆ ಮಿಸ್ಟರ್​ ಪರ್ಫೆಕ್ಟ್​​ ಗಳಗಳನೆ ಕಣ್ಣೀರಾಕಿದ್ದಾರೆ. ಯೆಸ್​​.. ಆಮೀರ್​​ ಅತ್ತಿದ್ಯಾಕೆ ಗೊತ್ತಾ..?

ಹೈದ್ರಾಬಾದ್​ನಲ್ಲಿ ಲಾಲ್​ಸಿಂಗ್​ ಸ್ಪೆಷಲ್ ಪ್ರೀಮಿಯರ್..!

ರಾಜಮೌಳಿ, ಚಿರಂಜೀವಿ ಮುಂದೆ ಆಮೀರ್ ಕಣ್ಣೀರು

ಮಿಸ್ಟರ್​ ಪರ್ಫೆಕ್ಟ್​​​ ತಬ್ಬಿ ಸಮಾಧಾನ ಮಾಡಿದ ಮೆಗಾಸ್ಟಾರ್

ಸಿನಿಮಾ ಬಗ್ಗೆ ಪಾಸಿಟಿವ್​​ ಕಮೆಂಟ್ಸ್​​​.. ತಾರೆಯರ ಗುಣಗಾನ

ಬಾಲಿವುಡ್​ನಲ್ಲಿ ಸಿಕ್ಕಾಪಟ್ಟೆ ಹಿಟ್​​ ಸಿನಿಮಾಗಳನ್ನು ಕೊಟ್ಟಿರೋ ಮಿಸ್ಟರ್ ಪರ್ಫೆಕ್ಟ್​ ತಾಕತ್ತಿನ ಬಗ್ಗೆ ಎಲ್ಲರಿಗೂ ಗೊತ್ತಿದೆ. ಸಿನಿಮಾಗಳ ಆಯ್ಕೆಯ ವಿಚಾರದಲ್ಲಿ ಆಮೀರ್​ ಸಕತ್​ ಚ್ಯೂಸಿ. ಅವ್ರು ತೆರೆಯ ಮೇಲೆ ನಟಭಯಂಕರ. ಆ್ಯಕ್ಟಿಂಗ್​​​​, ಎಮೋಷನ್ಸ್​​​ ಎಲ್ಲಾ ವಿಭಾಗದಲ್ಲೂ ಚಚ್ಚಿ ಬಿಸಾಕಿಬಿಡುವ ಪ್ರತಿಭಾನ್ವಿತ ಕಲಾವಿದ ಅಮೀರ್ ಖಾನ್​. ಇದೀಗ ಅವ್ರ ಮೋಸ್ಟ್​ ಎಕ್ಸ್​​ಪೆಕ್ಟೆಡ್​​ ಮೂವಿ ಲಾಲ್​​ ಸಿಂಗ್​ ಚಡ್ಡಾ ತೆರೆಗೆ ಬರೋಕೆ ದಿನ ಎಣಿಸ್ತಿದೆ.

ಹಾಲಿವುಡ್​​ನ ಫಾರೆಸ್ಟ್​​ ಗಂಪ್​​ ಚಿತ್ರದ ಹಿಂದಿ ರಿಮೇಕ್​​ ಲಾಲ್​​ಸಿಂಗ್​​ ಚಡ್ಡಾ. ಈ ಸಿನಿಮಾ ರಿಲೀಸ್​ಗೂ ಮುನ್ನ ಟಾಲಿವುಡ್​ ಸ್ಟಾರ್​​​ಗಳಿಗಾಗಿ ಪ್ರೀಮಿಯರ್​ ಶೋ ಆಯೋಜನೆ ಮಾಡಿತ್ತು. ಈ ಸ್ಪೆಷಲ್​​ ಶೋ ನೋಡಿ ಸೆಲೆಬ್ರಿಟಿ ಎದುರೇ ಅಮೀರ್​ ಗಳಗಳನೆ ಅತ್ತುಬಿಟ್ರು. ಯೆಸ್​​.. ನಾಗಚೈತನ್ಯ, ನಾಗಾರ್ಜುನ, ನಿರ್ದೇಶಕ ಎಸ್​​.ಎಸ್. ರಾಜಮೌಳಿ, ಪುಷ್ಫ ಡೈರೆಕ್ಟರ್​ ಸುಕುಮಾರ್​​ ಈ ಸ್ಪೆಷಲ್​​ ಶೋಗೆ ಸ್ಪೆಷಲ್​​ ಗೆಸ್ಟ್​ ಆಗಿದ್ರು. ಈ ಶೋ ನೋಡಿದ ಮೇಲೆ ಆಮೀರ್​ ಖಾನ್​​ ಭಾವುಕರಾಗಿಬಿಟ್ರು. ಇದೀಗ ಈ ವೀಡಿಯೋ ಸಖತ್​ ವೈರಲ್​ ಆಗಿದ್ದು ಸಖತ್​ ಸೌಂಡ್​ ಮಾಡ್ತಿದೆ.

ಬಾಲಿವುಡ್​ ಸೂಪರ್​ ಸ್ಟಾರ್​ ಆಗಿರೋ ಆಮೀರ್​ ಖಾನ್​​, ಟಾಲಿವುಡ್​​ ತಾರೆಯರಿಗೆ ಆಹ್ವಾನ ಕೊಟ್ಟಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಲಾಲ್​ಸಿಂಗ್​ ಚಡ್ಡಾ ಸಿನಿಮಾದಲ್ಲಿ ಸ್ಪೆಷಲ್​ ರೋಲ್​ನಲ್ಲಿ ತೆಲುಗು ನಟ ನಾಗಚೈತನ್ಯ ಕಾಣಿಸಿಕೊಳ್ತಿದ್ದಾರೆ. ಹಾಗಾಗಿ ಟಾಲಿವುಡ್​ಗೂ ಆಮೀರ್​ಗೂ ಎಲ್ಲಿಲ್ಲದ ಪ್ರೀತಿಯ ನಂಟು ಶುರುವಾಗಿದೆ. ಈ ಸಿನಿಮಾದ ಪ್ರಮೋಷನ್​​​ಗೆ ಈ ಸನ್ನಿವೇಶ ಎನರ್ಜಿಟಿಕ್​​ ಕಿಕ್​ಸ್ಟಾರ್ಟ್​​ ಕೊಟ್ಟಿದೆ.

ಎಲ್ಲರೂ ಸ್ವಲ್ಪ ಹೊತ್ತು ಹರಟೆ ಹೊಡೆದು ನಂತ್ರ, ಸಿನಿಮಾ ವೀಕ್ಷಣೆ ಮಾಡಿದ್ರು. ಎಲ್ಲರೂ ಸಖತ್​ ಪಾಸಿಟಿವ್​ ಆಗಿ ರಿಯಾಕ್ಟ್​​ ಮಾಡಿದ್ದಾರೆ. ಜೊತೆಗೆ ಚಿರಂಜೀವಿ ಕೂಡ ಸಖತ್​ ಎಗ್ಸೈಟ್​ ಆಗಿದ್ರು. ಸುಕುಮಾರ್​​, ರಾಜಮೌಳಿ ಸಿನಿಮಾದ ಕಲವು ಅಮೇಜಿಂಗ್​ ದೃಶ್ಯಗಳ ಬಗ್ಗೆ ಚರ್ಚೆ ಮಾಡ್ತಾ ಇದ್ದರು. ಈ ಸನ್ನಿವೇಶದಲ್ಲಿ ಭಾವುಕರಾಗಿದ್ದ ಆಮೀರ್​ ಕಣ್ಣೀರಾಕಿದ ಪ್ರಸಂಗ ಕೂಡ ನಡೆಯಿತು. ತಕ್ಷಣಕ್ಕೆ ಮೆಗಾಸ್ಟಾರ್​ ತಬ್ಬಿಕೊಂಡು ಸಮಾಧಾನ ಮಾಡಿದ್ದಾರೆ.

ಲಾಲ್​ಸಿಂಗ್​ ಚಡ್ಡಾ ಆಗಸ್ಟ್​ 11ಕ್ಕೆ ವರ್ಲ್ಡ್​ ವೈಡ್​​ ರಿಲೀಸ್ ಆಗ್ತಿದೆ. ಕಾಲಿಲ್ಲದ ಸಾಮಾನ್ಯ ವ್ಯಕ್ತಿಯ ಅಸಮಾನ್ಯ ಕಥೆ ಇದಾಗಿದ್ದು, ಸಖತ್​ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದ ನಾಯಕಿಯಾಗಿ ಕರೀನಾ ಕಪೂರ್​ ಕಾಣಿಸಿದ್ದಾರೆ. ಅದ್ವೈತ್​ ಚಂದನ್​​ ನಿರ್ದೇಶನದಲ್ಲಿ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆಯಂತೆ. ಈ ಸಿನಿಮಾಗೆ ಆಮೀರ್ ಹಾಗೂ ಅವ್ರ​ ಮಾಜಿ ಪತ್ನಿ ಕಿರಣ್​ ರಾವ್​ ಕೂಡ ಬಂಡವಾಳ ಹೂಡಿದ್ದು, ಎಲ್ಲರ ಕುತೂಹಲ ಕೆರಳಿಸಿದೆ. ಮಿಸ್ಟರ್​ ಪರ್ಫೆಕ್ಟ್​​​ಗೂ ಈ ಸಿನಮಾ ಸ್ಪೆಷಲ್​​ ಆಗಿರೋದ್ರಿಂದ ಬಾಕ್ಸ್​ ಆಫೀಸ್​ ಲೂಟಿ ಮಾಡುತ್ತಾ ಕಾದು ನೋಡ್ಬೇಕು.

ರಾಕೇಶ್​ ಆರುಂಡಿ, ಫಿಲ್ಮ್​​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES