Wednesday, December 25, 2024

ಮೈದುಂಬಿ ಹರಿಯುತ್ತಿದೆ ಕಪಿಲತೀರ್ಥ ಜಲಪಾತ

ಕೊಪ್ಪಳ : ಮುಂಗಾರು ಮಳೆಗೆ ಕಬ್ಬರಗಿಯ ಕಪಿಲತೀರ್ಥ ಜಲಪಾತ ಮೈದುಂಬಿ ಹರಿಯುತ್ತಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಬ್ಬರಗಿ ಬಳಿಯ ಬೆಟ್ಟದಲ್ಲಿರುವ ಜಲಪಾತ ಇದಾಗಿದ್ದು, ಸ್ಥಳೀಯರ ಪ್ರಕಾರ ಈ ಜಲಪಾತದ ಹೆಸರು ಕಪಲೆಪ್ಪನ ದಿಡಗು ಎಂದಾಗಿದೆ.

ಇನ್ನು, ಸುಮಾರು 40 ಅಡಿ ಎತ್ತರದಿಂದ ಜಲಪಾತ ಧುಮ್ಮುಕ್ಕುತ್ತಿದ್ದು, ಜಲಪಾತ ನೋಡಲು ಸುತ್ತಲಿನ ಜನರು ಸೇರಿದಂತೆ ಹೊರ ಜಿಲ್ಲೆ ಯಿಂದ ಕೂಡ ಆಗಮಿಸಿ ಜಲಪಾತದ ಸೌಂದರ್ಯವನ್ನು ಕಂಡು ಕಣ್ಣ್​​​​ತುಂಬಿಕೊಂಡರು. ಪರಿಸರದ ಮಧ್ಯೆ ಸುಂದರ ಜಲಪಾತ ಇದ್ದು, ಜನಮನ ಸೆಳೆಯುತ್ತಿದೆ. ಕಳೆದ ಒಂದು ವಾರದಿಂದ ಸುರಿದ ಮಳೆಯಿಂದಾಗಿ ಜಲಪಾತಕ್ಕೆ ಜೀವ ಕಳೆ ಬಂದಿದೆ. ಮಳೆಗಾಲದಲ್ಲಿ ಪಲೆಪ್ಪ ಜಲಪಾತ ಪ್ರವಾಸಿ ತಾಣವಾಗುತ್ತದೆ.

RELATED ARTICLES

Related Articles

TRENDING ARTICLES