ಬೆಂಗಳೂರು : ಕೋವಿಡ್ನಿಂದ ಅನೇಕ ಕುಟುಂಬ ಬೀದಿಗೆ ಬಂದಿದೆ. ಇಂತಹ ಸಂದರ್ಭದಲ್ಲಿ ಜನರ ಮೇಲೆ ಹೊರೆ ಹಾಕ್ತಿದ್ದೀರಾ ಎಂದು ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾಡಿದರು.
ಇಂದಿನಿಂದ ದುಬಾರಿ ದುನಿಯಾ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ನಿಂದ ಅನೇಕ ಕುಟುಂಬ ಬೀದಿಗೆ ಬಂದಿದೆ. ಇಂತಹ ಸಂದರ್ಭದಲ್ಲಿ ಜನರ ಮೇಲೆ ಹೊರೆ ಹಾಕ್ತಿದ್ದೀರಾ. GST ಬಗ್ಗೆ ನಾನು ಮೊದಲೇ ವಿರೋಧ ಮಾಡಿದ್ದೆ. ಹಗ್ಗ ಕೊಟ್ಟು ಕುತ್ತಿಗೆ ಕೊಟ್ಟಿದ್ದೀರಾ ಅಂತ ಹೇಳಿದ್ದೆ. ಈ ನೀತಿಯನ್ನ ಪುನರ್ ಪರಿಶೀಲನೆ ಮಾಡಬೇಕೆಂದು ಕೇಂದ್ರಕ್ಕೆ ಒತ್ತಾಯ ಮಾಡಿದರು.
ಅಲ್ಲದೇ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಇದು. ಪೆಟ್ರೋಲ್ ಬೆಲೆ, ದಿನ ನಿತ್ಯದ ವಸ್ತು ಬೆಲೆ ಏರಿಕೆ ಆಗಿದೆ. ಈಗ ಆಹಾರ ಪದಾರ್ಥಗಳಿಗೆ GST ಏರಿಕೆ ಮಾಡಲಾಗಿದೆ.ಇದು ಜನ ವಿರೋಧಿ ಸರ್ಕಾರ. ಮೋದಿ ಅವರು ಉಚಿತ ಕಾರ್ಯಕ್ರಮ ಬೇಡ ಅಂತಾರೆ. ಈ ದೇಶದಲ್ಲಿ 1.7 ಮಿಲಿಯನ್ ಆಹಾರದ ಕೊರತೆಯಿಂದ ಸಾವಾಗುತ್ತಿದೆ. ಶ್ರೀಲಂಕಾಗಿಂತ ನಮ್ಮ ಸ್ಥಿತಿ ಸರಿಯಿಲ್ಲ. ನಮ್ಮ ರಾಷ್ಟ್ರದಲ್ಲಿ ಬಡತನ ರೇಖೆ ಬಡ ದೇಶಕ್ಕಿಂತ ಹಿಂದೆ ಇದೆ. GDP ಜೊತೆ ಬಡತನ ರೇಖೆ ಕಡಿಮೆ ಮಾಡಲು ಸರ್ಕಾರ ಕೆಲಸ ಮಾಡಬೇಕು. ಎರಡು ಹೊತ್ತು ಊಟಕ್ಕೆ ಗತಿ ಇಲ್ಲದ ಪರಿಸ್ಥಿತಿ ಇದೆ. ಹಾಲು,ಮೊಸರು, ಉಪ್ಪಿನಕಾಯಿ ಮೇಲೆ ಟ್ಯಾಕ್ಸ್ ಹೆಚ್ಚು ಮಾಡಿ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ ಎಂದು ಗುಡುಗಿದರು.
GST ಹೆಚ್ಚಳ ಬಡವರ ಮೇಲೆ ಪ್ರಭಾವ ಬೀರೋದು, ನೇರವಾಗಿ ಬಡವರ ಮೇಲೆ ಹೊರೆ ಆಗುತ್ತದೆ. ಬಿಜೆಪಿ ಸಮರ್ಥನೆ ಮಾಡಿಕೊಳ್ಳಬೇಕು
ನೂರು ಸುಳ್ಳು ಹೇಳಿ ಒಂದು ಸತ್ಯ ಮಾಡೋದು ಅವರ ಗುಣ.8 ವರ್ಷದಿಂದ ಎಲ್ಲಿ ಒಳ್ಳೆ ದಿನಗಳು ಬಂತು? ಡಾಲರ್ ಬೆಲೆ ಏನಾಗಿದೆ?
ಫಾರಿನ್ ಎಕ್ಸ್ ಚೇಂಜ್ ಕೂಡಾ ಖಾಲಿ ಆಗ್ತಿದೆ. ನಮ್ಮ ಕೇಂದ್ರ ಸರ್ಕಾರದ ನೀತಿಯಿಂದ ವಿದೇಶದವರು ಬಂಡವಾಳ ಹೂಡಿಕೆ ವಾಪಸ್ ಪಡೆದಿದ್ದಾರೆ. ಇದನ್ನು ಚರ್ಚೆ ಮಾಡಬೇಕು ಎಂದು ಆಕ್ರೋಶ ಹೊರಹಾಕಿದರು.