Friday, November 22, 2024

ರಾಯಚೂರು-ಯಾದಗಿರಿ ರೈತರ ಬದುಕು ಬೀದಿಪಾಲು

ರಾಯಚೂರು : ಇಲ್ಲಿ ಜೆಸಿಬಿಯಲ್ಲಿ ಕುಳಿತು ಉಕ್ಕಿ ಹರಿಯುವ ಕೃಷ್ಣ ನದಿಯಲ್ಲಿಳಿದು ಕ್ರಸ್ಟ್ ಗೇಟ್ ತೆಗೆಯುವ ಹರಸಾಹಸ ನಡೆಸಲಾಗ್ತಿದೆ. ಈಜುತಜ್ನರು ಇಂತಹದೊಂದು ಸಾಹಸ ನಡೆಸ್ತಿರೊದು ರಾಯಚೂರು ತಾಲ್ಲೂಕಿನ ಗುರ್ಜಾಪುರ ಗ್ರಾನದ ಬಳಿ ಕೃಷ್ಣ ನದಿಗೆ ಅಡ್ಡಲಾಗಿ ನಿರ್ಮಿಸಲಾಗ್ತಿರುವ ಬ್ಯಾರೇಜನ ಸ್ಟ್ರಕ್ ಆಗಿರುವ ಗೇಟಗಳನ್ನ ಮೇಲೆಕೆತ್ತಲು ಹರ ಸಾಹಸ ನಡೆಸಲಾಗುತ್ತಿದೆ. ಕೃಷ್ಣ ಭಾಗ್ ಜಲ ನಿಗಮ ಹಾಗೂ ಕರ್ನಾಟಕ ವಿದ್ಯುತ್ ನಿಗಮದ ಅಧಿಕಾರಿಗಳ ಬೇಜವಾಬ್ದಾರಿಗೆ ಗುರ್ಜಾಪುರ ಬ್ಯಾರೇಜನ ಗೇಟಗಳು ಕೃಷ್ಣ ನದಿ ನೀರಿನ ಹೊಡೆತಕ್ಕೆ ನಿತ್ಯವು ನಲುಗಿ ಹೊಗುತ್ತಿವೆ. ಇನ್ನು ತ್ಜನರ ತಂಡ ಬ್ಯಾರೇಜ ಬಳಿ ಬಿಡಾರ ಹೂಡಿದ್ದು ನೀರಲ್ಲೆ ಸ್ಟ್ರಕ್ ಆಗಿರುವ ಗೇಟಗಳನ್ನ ಮೇಲೆತ್ತಲು ಪರದಾಡ್ತಿದ್ದಾರೆ.

ಇನ್ನು ಬ್ರಿಜ್ ಕಮ್ ಬ್ಯಾರೇಜನ 194 ಗೇಟಗಳ ಪೈಕಿ ಕೇವಲ‌ 98 ಗೇಟಗಳನ್ನ ಮಾತ್ರ ಮೇಲೆಕೆತ್ತಲಾಗಿದೆ. ಇನ್ನಿ 90 ಕ್ಕು ಅಧಿಕ ಗೇಟಗಳು ನದಿ ನೀರಲ್ಲೆ ಸ್ಟ್ರಕ್ ಆಗಿವೆ. ಆ ಎಲ್ಲಾ ಗೇಟಗಳನ್ನ ಮೇಲೆಕೆತ್ತದೆ ಇರೊದ್ರಿಂದ ಬ್ಯಾರೇಜನಲ್ಲಿ ಸಂಗ್ರಹವಾದ ಹಿನ್ನೀರು ರಾಯಚೂರ ಮತ್ತು ಯಾದಗೀರ ನದಿಪಾತ್ರದ ರೈತರ ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆಯಲಾಗಿದ್ದ ಭತ್ತ, ಹತ್ತಿ ಕೃಷ್ಣನದಿ ಪಾಲಾಗಿದೆ. ಅಧಿಕಾರಿಗಳು ಮಾಡಿದ ಯಡವಟ್ಟಿಗೆ ನೂರಾರು ರೈತರ ಬದುಕು ಸದ್ಯ ಬೀದಿಗೆ ಬಿದ್ದಿದೆ. ಅಧಿಕಾರಿಗಳ ವಿರುದ್ದ ರೈತರು ಫುಲ್ ಗರಂ ಆಗಿದ್ದಾರೆ.

ಒಟ್ಟಿನಲ್ಲಿ ಗುರ್ಜಾಪುರ ಬ್ರಿಜ್ ಕಂ ಬ್ಯಾರೇಜನ ಎಲ್ಲಾ ಗೇಟಗಳು ತೆಗೆಯದೆ ಇದ್ದಲ್ಲಿ ನದಿ ಪಾತ್ರದ ಹಳ್ಳಿಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ಇನ್ನಾದ್ರು ರಾಯಚೂರು ಯಾದಗೀರ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸ್ಟ್ರಕ್ ಆಗಿರುವ ಗೇಟಗಳನ್ನ ಮೇಲೆಕೆತ್ತುವ ನಿಟ್ಟಿನಲ್ಲಿ ತ್ವರಿತ ಕ್ರಮ ಕೈಗೊಳ್ಳುತ್ತ ಅನ್ನೊದನ್ನ ಕಾದು ನೋಡಬೇಕಷ್ಟೆ.

ಸಿದ್ದು ಬಿರಾದಾರ್, ಪವರ ಟಿವಿ ರಾಯಚೂರು.

RELATED ARTICLES

Related Articles

TRENDING ARTICLES