Monday, December 23, 2024

ಚಿರು 154ನಲ್ಲಿ ರವಿತೇಜಾ; ಅನ್ನಯ್ಯ ಕಾಂಬೋ ರಿಪೀಟ್

ಮಾಸ್​​ ಜೋಡಿ ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡ್ರೆ ಅಭಿಮಾನಿಗಳಂತೂ ಹಬ್ಬದೂಟ. ಇದೀಗ ಘಟಾನುಘಟಿ ತಾರೆಯರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸೋಕೆ ತಯಾರಾಗಿದ್ದಾರೆ. ಈ ಮಾಸ್​ ಜೋಡಿ ಒಂದಾಗ್ತಿರೋ ಸುದ್ದಿ ಬಿಂಕಿ ಬಿರುಗಾಳಿಗಿಂತ ವೇಗವಾಗಿ ಮೂಲೆ ಮೂಲೆಗಳಲ್ಲೂ ಸೌಂಡ್​ ಮಾಡ್ತಿದೆ. ಅಬ್ಬಬ್ಬಾ..! ಎಂತಾ ಗುಡ್​ ನ್ಯೂಸ್​ ಅಂತಾ ಬಾಯಲ್ಲಿ ಬೆರಳಿಟ್ಟುಕೊಂಡಿರೋ ಅಭಿಮಾನಿಗಳಿಗೆ ಇನ್ನಷ್ಟು ಇಂಟ್ರೆಸ್ಟಿಂಗ್ ಮಾಹಿತಿ ತಿಳಿಸ್ತೀವಿ.

ಚಿರು 154ನಲ್ಲಿ ರವಿತೇಜಾ.. ಅನ್ನಯ್ಯ ಕಾಂಬೋ ರಿಪೀಟ್

​​ಮಾಸ್​ ಮಹಾರಾಜ ಮತ್ತು ಮೆಗಾಸ್ಟಾರ್​​ ಮಸ್ತ್​ ಕಾಂಬೋ

ಅನ್ನಯ್ಯ..! ಹಾಯ್​ ಬ್ರದರ್​​​..! ಕೈಕುಲುಕಿದ ಜೋಡಿ

ವೆಲ್ಕಮ್​​ ಬ್ರದರ್​ ಎಂದು ಕೈಹಿಡಿದು ಸ್ವಾಗತಿಸಿದ ಚಿರು

ಹೆಸರಿಗೆ ತಕ್ಕಂತೆ ತಮ್ಮ ಯೌವ್ವನ, ಗ್ಲಾಮರಸ್​​​​, ಚಾರ್ಮಿಂಗ್​​ನಲ್ಲೂ ಸೂಪರ್​ ಸ್ಟಾರ್​​ ಚಿರಂಜೀವಿ ಅವರದ್ದು, ಚಿರಂಜೀವಿಯ ತೇಜಸ್ಸು. ಹೌದು ನಾನು ಹೇಳ್ತಾ ಇರೋದು ಟಾಲಿವುಡ್​ ಸೂಪರ್​ ಸ್ಟಾರ್​ ಚಿರಂಜೀವಿ ಬಗ್ಗೆ. ಮೊನ್ನೆಯಷ್ಟೆ ಮಗನ ಜೊತೆ ಕೈ ಜೋಡಿಸಿದ್ದ ಮೆಗಾಸ್ಟಾರ್​, ಯುವನಟರು ಕೂಡ ನಾಚುವಂತೆ ಆ್ಯಕ್ಷನ್​​ ಮಾಡಿದ್ರು. ಆಚಾರ್ಯ ಸಿನಿಮಾ ನಂತ್ರ ಮುಂದೇನು ಅಂತಾ ಕಾಯ್ತಿದ್ದ ಫ್ಯಾನ್ಸ್​ ಪಾಲಿಗೆ ಮೆಗಾ ಸುದ್ದಿಯೊಂದು ಹೊರ ಬಿದ್ದಿದೆ.

ಮೆಗಾಸ್ಟಾರ್​ ಚಿರಂಜೀವಿ ಅವ್ರ ಮೆಗಾ 154 ಸಿನಿಮಾ ತಯಾರಾಗ್ತಿದೆ. ಇನ್ನೂ ಟೈಟಲ್​​ ಫೈನಲ್​ ಆಗದೇ ಇರೋ  ಈ ಚಿತ್ರದ ಪೋಸ್ಟರ್​​ ಸಖತ್​ ಕ್ರೇಜ್​ ಕ್ರಿಯೇಟ್​ ಮಾಡಿದೆ. ಸೋಶಿಯಲ್​​ ಮೀಡಿಯಾಗಳಲ್ಲಿ ಟಾಪ್​ ಟ್ರೆಂಡಿಂಗ್​ನಲ್ಲಿರೋ ಈ ರೋಚಕ ಸುದ್ದಿ ಅಭಿಮಾನಿಗಳ ಪಾಲಿಗೆ ಮೆಗಾ ಗುಡ್​​​ನ್ಯುಸ್​ ಆಗಿದೆ. ಯೆಸ್​​.. ಮೆಗಾ 154 ಚಿತ್ರಕ್ಕೆ ಮಾಸ್​ ಫೋರ್ಸ್​​ ರವಿತೇಜಾ, ಮೆಗಾ ಸ್ಟಾರ್ಮ್​ ಚಿರಂಜೀವಿ ಜೊತೆಯಾಗಿ ಆ್ಯಕ್ಟ್​ ಮಾಡ್ತಿದ್ದಾರೆ. ಅನ್ನಯ್ಯ ಕಾಂಬೋ ರಿಪೀಟ್​ ಅಗ್ತಿರೋ ಸುದ್ದಿ ಕೇಳಿ ಫ್ಯಾನ್ಸ್​ ಕೂಡ ಥ್ರಿಲ್ ಆಗಿದ್ದಾರೆ.

ಮುಂಬರುವ ಚಿರು ಚಿತ್ರಕ್ಕಾಗಿ ಮಾಸ್​​ ಮಹಾರಾಜ ರವಿತೇಜಾ ಜತೆಯಾಗ್ತಿದ್ದಂತೆ ಚಿತ್ರರಂಗದಲ್ಲಿ ಸೆನ್ಷೇಷನ್​ ಕ್ರಿಯೇಟ್​ ಆಗಿದೆ. ಸಿನಿಮಾದ ಕಥೆಯ ಬಗ್ಗೆ ಕುತೂಹಲ ಕೆರಳಿಸಿದೆ. ಈ ರೋಮಾಂಚಕ ಸುದ್ದಿಯನ್ನು ನಿರ್ದೇಶಕ ಕೆ.ಎಸ್​ ರವೀಂದ್ರ ತಮ್ಮ ಸಾಮಾಜಿಕ ಖಾತೆಯಲ್ಲಿ ಹರಿಬಿಟ್ಟಿದ್ದಾರೆ. ಇದ್ರ ಜತೆಯಲ್ಲಿ ಬಾಬಿ, ನನ್ನ ಮೊದಲ ಹೀರೋ ಹಾಗೂ ನನ್ನ ಮೆಚ್ಚಿನ ಹೀರೋ ಇಬ್ಬರನ್ನು ಸ್ವಾಗತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಕೆ.ಎಸ್​​ ರವೀಂದ್ರ ಅಲಿಯಾಸ್​ ಬಾಬಿಗೆ  ಈ ಇಬ್ಬರೂ ಸೂಪರ್​ ಸ್ಟಾರ್​ಗಳಿಗೆ ಡೈರೆಕ್ಟ್​ ಮಾಡೋದೆ ಅದ್ಭುತ ಕ್ಷಣವಾಗಿದೆ. ಕೊನೆಯಲ್ಲಿ ನಿಮಗೆಲ್ಲಾ ಥಿಯೇಟ್​​ನಲ್ಲಿ ಮೆಗಾ ಮಾಸ್​​ ಆ್ಯಕ್ಷನ್​​ ಸೀಕ್ವೇನ್ಸ್​​​ಗಳ ಭರ್ಜರಿ ಮನರಂಜನೆಯ  ರಸದೌತಣ ನೀಡೋ ಭರವಸೆ ಕೊಡುತ್ತೇನೆ ಎಂದಿದ್ದಾರೆ.

ಇದ್ರ ಜತೆಯಲ್ಲಿ ಈ ಜೋಡಿಯ ವೀಡಿಯೋ ಕ್ಲಿಪ್​​ ಒಂದು ಸಖತ್​ ವೈರಲ್​ ಆಗಿದ್ದು, ಕ್ಯಾರಾವ್ಯಾನ್​​ ಒಳಗೆ ಚಿರಂಜೀವಿ ಕೂತಿದ್ದಾರೆ. ಬಾಗಿಲು ತಟ್ಟುವ ರವಿತೇಜಾ ಹಾಯ್​ ಅನ್ನಯ್ಯ ಎಂದು ಕರೆಯುತ್ತಾರೆ. ತಕ್ಷಣಕ್ಕೆ ಹಾಯ್​ ಬ್ರದರ್​​​, ವೆಲ್ಕಮ್​ ಎಂದು ಒಳಗೆ ಕರೆದುಕೊಳ್ಳುತ್ತಾರೆ. ಈ ವೀಡಿಯೋ ಕಿಚ್ಚು ಹಚ್ಚಿದ್ದು ಸಖತ್​ ವೈರಲ್​ ಆಗಿದೆ.

ರವಿತೇಜ ಕೂಡ ಟ್ವೀಟ್​ ಮಾಡಿ, ಮೆಗಾಸ್ಟಾರ್​ ಜತೆ ಆ್ಯಕ್ಟ್ ಮಾಡೋಕೆ ತುಂಬಾ ಸಂತೋಷವಾಗಿದೆ, ನಾನು ಕೂ ಉತ್ಸುಕನಾಗಿದ್ದೇನೆ ಎಂದಿದ್ದಾರೆ. ಈ ಮುಂಚೆ ಅನ್ನಯ್ಯ ಸಿನಿಮಾದಲ್ಲಿ ಈ ಜೋಡಿ ಒಂದಾಗಿತ್ತು. ಟಾಲಿವುಡ್​ನಲ್ಲಿ ಈ ಸಿನಿಮಾ ಬ್ಲಾಕ್​ ಬಸ್ಟರ್​​ ದಾಖಲೆ ಬರೆದಿತ್ತು. ಈ ಸಿನಿಮಾದಲ್ಲಿ ಚಿರು, ರವಿತೇಜಾ ಎಮೋಷನ್​​ ಸೀನ್ಸ್​​ ಸಖತ್​ ಆಗಿ ವರ್ಕ್​ ಆಗಿತ್ತು. ತುಂಬಾ ವರ್ಷಗಳ ನಂತ್ರ ಈ ಜೋಡಿ ಮತ್ತೆ ಒಂದಾಗ್ತಿದ್ದು, ಸಿನಿಮಾ ಮೇಲೆ ಭರವಸೆ ಮೂಡಿಸಿದೆ.

ಮೆಗಾ 154 ಸಿನಿಮಾದಲ್ಲಿ ಇಬ್ಬರೂ ಕೂಡ ಚಾಲೆಂಜಿಂಗ್​ ರೋಲ್​ ಲೀಡ್​ ಮಾಡ್ತಿದ್ದಾರೆ. ಬಾಬಿ ನಿರ್ದೇಶನದಲ್ಲಿ ಮೈತ್ರಿ ಮೂವಿ ಮೇಕರ್ಸ್​ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಶ್ರುತಿ ಹಾಸನ್​​ ನಟಿಸ್ತಿದ್ದಾರೆ. ನವೀನ್​ ಹಾಗೂ ರವಿಶಂಕರ್​​ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆ ಮೂಡಿದೆ. ಏನೆ ಇರಲಿ ಮೆಗಾ ಮಾಸ್​ ಕಾಂಬೋ ಕಮಾಲ್​​ ನೋಡೋಕೆ ಸ್ವಲ್ಪ ದಿನ ವೆಯ್ಟ್​ ಮಾಡಲೇಬೇಕು.

ರಾಕೇಶ್​ ಅರುಂಡಿ, ಫಿಲ್ಮ್​​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES