Monday, December 23, 2024

ನರ್ಮದಾ ನದಿಗೆ ಉರುಳಿದ ಬಸ್‌: 12 ಜನರ ಸಾವು, 15 ಮಂದಿಯ ರಕ್ಷಣೆ

ಮಧ್ಯಪ್ರದೇಶ: ಮಹಾರಾಷ್ಟ್ರ ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ವೊಂದು ಮಧ್ಯಪ್ರದೇಶದ ಧಾರ್‌ ಜಿಲ್ಲೆಯ ಕಾಲಾಘಾಟ್‌ ಸಂಜಯ್‌ ಸೇತು ಬಳಿ ಸೇತುವೆ ಮೇಲಿಂದ ನರ್ಮದಾ ನದಿಗೆ ಬಿದ್ದಿದ್ದು 12 ಮಂದಿ ಮೃತಪಟ್ಟಿದ್ದಾರೆ. 15 ಮಂದಿಯನ್ನು ರಕ್ಷಣೆ ಮಾಡಲಾಗಿದೆ.

ಬಸ್‌ ಮಧ್ಯಪ್ರದೇಶದ ಇಂದೋರ್‌ನಿಂದ ಮಹಾರಾಷ್ಟ್ರದ ಪುಣೆಗೆ ತೆರಳುತ್ತಿತ್ತು. ಈ ವೇಳೆ ದುರಂತ ಸಂಭವಿಸಿದೆ.

15 ಜನರನ್ನು ಈವರೆಗೆ ರಕ್ಷಣೆ ಮಾಡಿರುವುದಾಗಿ ಮಧ್ಯಪ್ರದೇಶದ ಸಚಿವ ನರೋತ್ತಮ ಮಿಶ್ರಾ ಸುದ್ದಿ ಸಂಸ್ಥೆ ಎಎನ್‌ಐಗೆ ಮಾಹಿತಿ ನೀಡಿದ್ದಾರೆ.

ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

RELATED ARTICLES

Related Articles

TRENDING ARTICLES