Wednesday, January 22, 2025

13 ವರ್ಷದ ನಂತ್ರ ಡೆಲ್ಲಿಯಲ್ಲಿ ವಿಕ್ರಾಂತ್ ರೋಣನ ಖದರ್

ಆಲ್ ಇಂಡಿಯಾ ಕಟೌಟ್ ಕಿಚ್ಚನ ಪ್ಯಾನ್ ವರ್ಲ್ಡ್​ ಸಿನಿಮಾ ರಿಲೀಸ್​ಗೆ ಕೌಂಟ್​ಡೌನ್ ಶುರುವಾಗಿದೆ. ದೇಶದ ಮೂಲೆ ಮೂಲೆಯಲ್ಲಿ ರೋಣನ ರಂಗು ಸಖತ್ ಜೋರಿದೆ. ಅದ್ರಲ್ಲೂ ರಾಷ್ಟ್ರ ರಾಜಧಾನಿ ಡೆಲ್ಲಿಯಲ್ಲಿ ಬೀಡುಬಿಟ್ಟಿರೋ ವಿಆರ್ ಟೀಂಗೆ ಸೆಂಟ್ರಲ್ ಮಿನಿಸ್ಟರ್​​ನಿಂದ ಭರ್ಜರಿ ವೆಲ್ಕಂ ಸಿಕ್ಕಿದೆ. ಈ ಕುರಿತ ಒಂದು ಸ್ಪೆಷಲ್ ಇಂಟರೆಸ್ಟಿಂಗ್ ಸ್ಟೋರಿ ನೀವೇ ಓದಿ.

  • ಮಿನಿಸ್ಟರ್ ಜತೆ ಬ್ರೇಕ್​ಫಾಸ್ಟ್.. ಮೀಡಿಯಾ ಜತೆ ಚಿಟ್​ಚಾಟ್
  • ಅಂದು ರಾಜಮೌಳಿಯ ಈಗ.. ಇಂದು ವಿಕ್ರಾಂತ್ ರೋಣ
  • ರಿವೀಲ್ ಆಯ್ತು ಟೆಕ್ನಿಷಿಯನ್ಸ್ ಮೇಕಿಂಗ್ ಹಿಂದಿನ ರೋಚಕತೆ

ಊರಲ್ಲೆಲ್ಲಾ ಚಾಲ್ತಿಯಲ್ಲಿರೋ ಒಂದೇ ಒಂದು ಹೆಸ್ರು ವಿಕ್ರಾಂತ್ ರೋಣ ಅನ್ನೋದು ಬಾಲಿವುಡ್ ಗ್ಲಾಮರ್ ಡಾಲ್ ಜಾಕ್ವೆಲಿನ್ ಫರ್ನಾಂಡಿಸ್ ಹೊಡೆಯೋ ಡೈಲಾಗೇ ಆದ್ರೂ, ಅದು ಅಕ್ಷರಶಃ ಸತ್ಯ. ಸದ್ಯ ಭಾರತೀಯ ಚಿತ್ರರಂಗದಲ್ಲೆಲ್ಲಾ ಚಾಲ್ತಿಯಲ್ಲಿರೋ ಏಕೈಕ ಹೆಸ್ರು ನಮ್ಮ ಕನ್ನಡದ ವಿಕ್ರಾಂತ್ ರೋಣ. ಹೌದು. ಅಷ್ಟರ ಮಟ್ಟಿಗೆ ಸ್ಯಾಂಪಲ್ಸ್​ನಿಂದ ಎಲ್ಲೆಲ್ಲೂ ಹವಾ, ಹಂಗಾಮ ಮಾಡ್ತಿದೆ ಟೀಂ ವಿಆರ್.

ಆಲ್ ಇಂಡಿಯಾ ಕಟೌಟ್ ಕಿಚ್ಚ ಸುದೀಪ್ ಈ ಸಿನಿಮಾದಿಂದ ವರ್ಲ್ಡ್​ ಕಟೌಟ್ ಆಗಿ ಬದಲಾಗ್ತಿದ್ದು, ಕನ್ನಡ ಹಾಗೂ ಇಂಡಿಯನ್ ಲಾಂಗ್ವೇಜಸ್ ಜೊತೆ ಇಂಗ್ಲೀಷ್​ನಲ್ಲೂ ಈ ಚಿತ್ರ ವಿಶ್ವದಾದ್ಯಂತ ಬಿಗ್​ಸ್ಕ್ರೀನ್​ ಮೇಲೆ ರಾರಾಜಿಸಲಿದೆ. ಅನೂಪ್ ಭಂಡಾರಿ ಕ್ರಿಯಾಶೀಲತೆಯ ಕೈಗನ್ನಡಿಯಂತಿರೋ ರೋಣ, ಜಾಕ್ ಮಂಜು ನಿರ್ಮಾಣದಲ್ಲಿ ಅಷ್ಟೇ ರಿಚ್ ಆಗಿ ಮೂಡಿಬಂದಿದೆ.

ಅಜನೀಶ್ ಲೋಕನಾಥ್​ ಕಂಪೋಸ್ ಮಾಡಿರೋ ಆಲ್ಬಂನ ಒಂದೊಂದೇ ಹಾಡು ಸಿಕ್ಕಾಪಟ್ಟೆ ಸದ್ದು ಮಾಡ್ತಿವೆ. ರಕ್ಕಮ್ಮ, ಲುಲ್ಲಾಬಿ ಹಾಗೂ ಹೇ ಫಕೀರಾ ಸಾಂಗ್ಸ್ ಕೇಳುಗರಿಗೆ ಮಸ್ತ್ ಮಜಾ ಕೊಡ್ತಿವೆ. ವಿಶ್ಯುವಲಿ ಕೂಡ ಟ್ರೀಟ್ ಕೊಡಲಿದ್ದು, ಲಿರಿಕಲ್ ವಿಡಿಯೋಗಳ ಮಧ್ಯೆ ಇರೋ ಸಣ್ಣಪುಟ್ಟ ದೃಶ್ಯಗಳು ಕಣ್ಮನ ತಣಿಸುತ್ತಿವೆ.

ಅಂದಹಾಗೆ ಕಿಚ್ಚನೊಟ್ಟಿಗೆ ಜಾಕ್ವೆಲಿನ್, ನೀತಾ ಅಶೋಕ್, ನಿರೂಪ್ ಭಂಡಾರಿ, ರವಿಶಂಕರ್ ಗೌಡ ಹೀಗೆ ದೊಡ್ಡ ತಾರಾಗಣವಿದೆ. ಸಿಕ್ಕಾಪಟ್ಟೆ ಬಿಗ್ ಸ್ಕೇಲ್​ನಲ್ಲಿ ಸಿನಿಮಾನ ಮಾಡಿರೋ ಇವ್ರು, ಅಷ್ಟೇ ದೊಡ್ಡ ಮಟ್ಟದಲ್ಲಿ ಪ್ರೊಮೋಷನ್ಸ್ ಕೂಡ ಮಾಡ್ತಿದ್ದಾರೆ. ಅದ್ರಂತೆ ಟ್ರೈಲರ್ ಲಾಂಚ್ ವೇಳೆ ಒಂದಷ್ಟು ರಾಜ್ಯ ಸುತ್ತಿದ್ದ ವಿಆರ್ ಟೀಂ, ಇದೀಗ ರಾಷ್ಟ್ರದ ರಾಜಧಾನಿ ಡೆಲ್ಲಿಯಲ್ಲಿ ಬೀಡುಬಿಟ್ಟಿದೆ.

ಸುಮಾರು 13 ವರ್ಷಗಳ ನಂತ್ರ ಕಿಚ್ಚನ ಡೆಲ್ಲಿ ಪ್ರಯಾಣ ಇದಾಗಿದ್ದು, ರಾಜಮೌಳಿಯ ಈಗ ಸಿನಿಮಾದ ಬಳಿಕ ಸಿನಿಮಾ ವಿಚಾರ ಕಿಚ್ಚ ಡೆಲ್ಲಿಗೆ ತೆರಳಿರೋದು ಇದೇ ಮೊದಲು. ಹಾಗಾಗಿ ಇದು ಸಖತ್ ಇಂಟರೆಸ್ಟಿಂಗ್ ಹಾಗೂ ಇಂಪ್ರೆಸ್ಸೀವ್ ಆಗಿದೆ. ವಿಶೇಷ ಅಂದ್ರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವ್ರು ಸುದೀಪ್​ರನ್ನ ಸ್ವಾಗತಿಸಿ, ಜೊತೆಗೆ ಉಪಾಹಾರ ಸವಿದು, ತಂಡಕ್ಕೆ ಶುಭಾಶಯ ಕೋರಿ ನಂತ್ರ ಬೀಳ್ಕೊಟ್ಟಿದ್ದಾರೆ.

ಮಿನಿಸ್ಟರ್ ಜೊತೆ ಬ್ರೇಕ್​ಫಾಸ್ಟ್ ಬಳಿಕ ಅಲ್ಲಿನ ಮೀಡಿಯಾಗಳ ಜೊತೆ ಚಿಟ್​ಚಾಟ್ ಮುಗಿಸಿ, ಇಂದು ತಡರಾತ್ರಿ ಅಥ್ವಾ ನಾಳೆ ಬೆಳಗ್ಗೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ ಕಿಚ್ಚ ಅಂಡ್ ಟೀಂ. ಇನ್ನು ಟೆಕ್ನಿಷಿಯನ್ಸ್ ಕೈಚಳಕದ ಹಿಂದಿನ ಮೇಕಿಂಗ್ ರೋಚಕತೆಗಳನ್ನ ವಿಡಿಯೋಗಳ ಮೂಲಕ ರಿವೀಲ್ ಮಾಡ್ತಿದೆ ಚಿತ್ರತಂಡ. ಸಿನಿಮಾಟೋಗ್ರಫರ್, ಮ್ಯೂಸಿಕ್ ಡೈರೆಕ್ಟರ್, ಆರ್ಟ್​ ಡೈರೆಕ್ಟರ್ ಹೀಗೆ ಬಹುತೇಕ ತಂತ್ರಜ್ಞರ ಪರಿಶ್ರಮ ಎಷ್ಟಿದೆ ಅನ್ನೋದು ಮೇಕಿಂಗ್​ನಿಂದ ಬಹಿರಂಗವಾಗಿದೆ.

ಒಟ್ಟಾರೆ ಇದೇ ಜುಲೈ 28ಕ್ಕೆ ವಿಶ್ವದಾದ್ಯಂತ ರೋಣನ ಪ್ರಪಂಚ ಪ್ರೇಕ್ಷಕರಿಗೆ ತೆರೆದುಕೊಳ್ಳಲಿದ್ದು, ದಿನಗಣನೆ ಶುರುವಾಗಿದೆ. ಕನ್ನಡದ ಚಿತ್ರಗಳು ಸಿನಿದುನಿಯಾನ ರೂಲ್ ಮಾಡ್ತಿರೋ ಈ ಸುವರ್ಣ ಯುಗದಲ್ಲಿ ಮತ್ತೊಬ್ಬ ಡೇರ್ ಡೆವಿಲ್ ಎಂಟ್ರಿ ಅದ್ರ ಗಮ್ಮತ್ತನ್ನು ಹೆಚ್ಚಿಸಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES