Thursday, December 26, 2024

ಶಿರಾಡಿ ಘಾಟ್ ಸಂಪೂರ್ಣ ಬಂದ್

ಹಾಸನ : ಬೆಂಗಳೂರು- ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟಿ ರಸ್ತೆ ಮತ್ತೊಮ್ಮೆ ಬಂದ್‌ ಆಗಿದೆ. ಸಕಲೇಶಪುರ ತಾಲ್ಲೂಕಿನ ದೋಣಿಗಲ್ ಬಳಿ ಭೂಕುಸಿತ ಉಂಟಾಗಿದ್ದು, ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಿರುವುದರಿಂದ ಕರಾವಳಿ ಹಾಗೂ ರಾಜಧಾನಿಗೆ ಇದ್ದ ಸಂಪರ್ಕ ಕೊಂಡಿಕಳಚಿದೆ.

ಪ್ರಮುಖವಾಗಿ ವಾಣಿಜ್ಯ ವಹಿವಾಟು ಹಾಗೂ ಪ್ರಯಾಣಿಕ ಸಾರಿಗೆಗೆ ಸಮಸ್ಯೆ ಉಂಟಾಗಿದೆ. ಸರಕುಗಳನ್ನು ಹೊತ್ತು ಮಂಗಳೂರಿನ ಎನ್‌ಎಂಪಿಟಿಗೆ ತೆರಳುತ್ತಿದ್ದ ಸರಕು ಸಾಗಣೆ ಲಾರಿಗಳು ನಗರದ ಹೊರವಲಯ ದೇವರಾಯಪಟ್ಟಣದ ಬಳಿ ಸಾಲುಗಟ್ಟಿ ನಿಂತಿವೆ..ಮಳೆ ಹೀಗೆ ಮುಂದುವರೆದರೆ ಮತ್ತಷ್ಟು ಭೂ ಕುಸಿತ ಉಂಟಾಗುವ ಸಾಧ್ಯತೆಯಿದೆ.

RELATED ARTICLES

Related Articles

TRENDING ARTICLES