Saturday, September 21, 2024

ರಾಷ್ಟ್ರೀಯ ಹೆದ್ದಾರಿ 275 ಮಡಿಕೇರಿ ಸಂಪೂರ್ಣ ಬಂದ್

ಕೊಡಗು: ಮಡಿಕೇರಿ ನಗರದ ಡಿಸಿ ಕಛೇರಿ ಬಳಿ ತಡೆಗೋಡೆ ಕುಸಿತ ಆತಂಕ ರಾಷ್ಟ್ರೀಯ ಹೆದ್ದಾರಿ 275 ಮಡಿಕೇರಿ ಬಳಿ ಸಂಪೂರ್ಣ ಬಂದ್ ಆಗಿದೆ.

7 ಕೋಟಿ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ತಡೆಗೋಡೆಗೆ ಹಾಕಿದ್ದ ಸ್ಲ್ಯಾಬ್‌ಗಳು ಉಬ್ಬಿ ಬೀಳುವ ಆತಂಕದಲ್ಲಿದೆ. ಹೆದ್ದಾರಿ ಅಧಿಕಾರಿಗಳು ತಡೆಗೋಡೆಗೆ ರಂದ್ರ ಕೊರೆಸಿದ್ದು, ರಂದ್ರ ಕೊರೆದ ಬಳಿಕ ಕುಸಿತದ ಭೀತಿ ಮತ್ತಷ್ಟು ಹೆಚ್ಚಾಗಿದೆ. ರಸ್ತೆ ಬದಿಯ ತಡೆಗೋಡೆ ಕುಸಿದ್ರೆ ಹೆದ್ದಾರಿ ಸಂಪೂರ್ಣ ಬಂದ್ ಸಾಧ್ಯತೆ ಹೆಚ್ಚಾಗಿದ್ದರಿಂದ ತಡರಾತ್ರಿ ಅಧಿಕಾರಿಗಳ‌ ಸಲಹೆ ಮೇಲೆ ದಿಢೀರ್ ಹೆದ್ದಾರಿ ಬಂದ್ ಮಾಡಲಾಗಿದೆ.

ಇನ್ನು, ಮಡಿಕೇರಿಯ ಟೋಲ್‌ಗೇಟ್ ಬಳಿಯೇ ಹೆದ್ದಾರಿ ಬಂದ್ ಮಾಡಿದ ಪೊಲೀಸರು. ಪರ್ಯಾಯವಾಗಿ ಮಡಿಕೇರಿ ಮೇಕೇರಿಯಲ್ಲಿ ಪೊಲೀಸರು ರಸ್ತೆ ವ್ಯವಸ್ಥೆ ಕಲ್ಪಿಸಿದ್ದಾರೆ. ಸಣ್ಣ ರಸ್ತೆಯಲ್ಲಿ ಸಾಗಲು‌ ಪರದಾಡಿದ ಬೃಹತ್ ವಾಹನಗಳ ಸವಾರರು. ಜರ್ಮನ್ ಟೆಕ್ನಾಲಜಿ ಬಳಸಿ ತಡೆಗೋಡೆಯನ್ನು ನಿರ್ಮಿಸಿದ್ದಾರೆ. ತಡೆಗೊಡಯ ಮಧ್ಯೆ ಮಧ್ಯೆ ಸ್ಲಾಬ್ ಗಳು ಹಾನಿಯಾಗಿದ್ದು, ಪೊಲೀಸ್ ಅಧಿಕಾರಿಗಳು & ಹೆದ್ದಾರಿ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

RELATED ARTICLES

Related Articles

TRENDING ARTICLES