Thursday, January 23, 2025

ಕೇಜ್ರಿವಾಲ್‌ ವಿರುದ್ಧ ಗೌತಮ್ ಗಂಭೀರ್ ಗರಂ

ನವದೆಹಲಿ: ಮಾಜಿ ಕ್ರಿಕೆಟಿಗ ಮತ್ತು ದೆಹಲಿಯ ಬಿಜೆಪಿ ಸಂಸದ ಗೌತಮ್ ಗಂಭೀರ್ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಮೋಸಗಾರ ಎಂದು ಕರೆದಿದ್ದಾರೆ.

ತನ್ನನ್ನು ತಾನು ಸಾಮಾನ್ಯ ಎಂದು ಬಣ್ಣಿಸಿಕೊಳ್ಳುವ ಕೇಜ್ರಿವಾಲ್ ದೆಹಲಿಯ 11 ಲಕ್ಷ ಮನೆಗಳಿಗೆ ಮೋಸ ಮಾಡಿ ಉಚಿತ ವಿದ್ಯುತ್ ಮಾರುತ್ತಿದ್ದಾರೆ ಎಂಬ ಸುಳ್ಳನ್ನು ಮಾರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.ಈ ಬಗ್ಗೆ ಟ್ವೀಟ್‌ ಮಾಡಿರುವ ಗೌತಮ್ ಗಂಭೀರ್ ಅರವಿಂದ್ ಕೇಜ್ರಿವಾಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಇನ್ನು, ಕಳೆದ 7 ವರ್ಷಗಳಲ್ಲಿ ವಿದ್ಯುತ್ ಕಂಪನಿಗಳ ಗಳಿಕೆಯಲ್ಲಿ ಯಾವುದೇ ಇಳಿಕೆಯಾಗಿಲ್ಲ ಎಂದರು. ದೆಹಲಿಯಿಂದ ಕಂಪನಿಗಳು ಪ್ರತಿ ವರ್ಷ 20 ಸಾವಿರ ಕೋಟಿ ರೂ ಗಳಿಸುತ್ತಿವೆ. 20 ಸಾವಿರ ಕೋಟಿಯಲ್ಲಿ 16 ಸಾವಿರ ಕೋಟಿ ರೂ ದೆಹಲಿಯ 11 ಲಕ್ಷ ಕುಟುಂಬಗಳ ಬೆನ್ನು ಮುರಿದು ಸಂದಾಯ ಮಾಡಲಾಗುತ್ತಿದೆ ಎಂದಿದ್ದಾರೆ.

RELATED ARTICLES

Related Articles

TRENDING ARTICLES