Monday, May 20, 2024

ಉತ್ತರಕನ್ನಡದಲ್ಲಿ ಕೊಂಚ ಕಡಿಮೆಯಾದ ವರುಣನ ಅಬ್ಬರ

ಕಾರವಾರ : ಉತ್ತರಕನ್ನಡದಲ್ಲಿ ವರುಣನ ಅಬ್ಬರ ಕಡಿಮೆಯಾದರೂ ಪ್ರವಾಹ ಆತಂಕ ತಣ್ಣಗಾಗಲಿಲ್ಲ.

ಮಳೆ ಕಡಿಮೆಯಾದ್ರೂ ತಣ್ಣಗಾಗದ ಪ್ರವಾಹ ಆತಂಕ ಕುಮಟ, ಹೊನ್ನಾವರ ತಾಲೂಕಿನ ಗ್ರಾಮಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಶಿರಸಿ-ಸಿದ್ದಾಪುರದಲ್ಲಿ ವ್ಯಾಪಕ ಮಳೆಯಿಂದ ಪ್ರವಾಹ ಭೀತಿ ಉಂಟಾಗಿದ್ದು, ಅಘನಾಶಿನಿ, ಶರಾವತಿ ಉಕ್ಕಿ ಹರಿಯುತ್ತಿದೆ.

ಇನ್ನು, ಕೊನ್ನಳ್ಳಿ, ಊರಕೇರಿ,ಮೂರೂರು ಗ್ರಾಮದಲ್ಲಿ ಮನೆಗಳಗೆ ನುಗ್ಗಿದ ನೀರು. ಹೊನ್ನಾವರ ತಾಲೂಕಿನ ಮಾವಿನಕುರ್ವಾ, ಗುಂಡಬಾಳ, ಚಿಕ್ಕನಕೋಡ, ಹಡಿನಬಾಳ, ಗುಡ್ನಕಟ್ಟು ಗ್ರಾಮದಲ್ಲಿ ಇನ್ನೂ ಪ್ರವಾಹ ತಗ್ಗಲಿಲ್ಲ. ಕುಮಟ-ಹೊನ್ನಾವರ ದಲ್ಲಿ ಬಿಡುಬಿಟ್ಟಿರುವ NDRF ರಕ್ಷಣಾ ತಂಡ ತೋಟ, ಗದ್ದೆಗಳಿಗೆ‌ ನುಗ್ಗಿದ ಪ್ರವಾಹ ನೀರು ಕೃಷಿ ಜಮೀನುಗಳು ಜಲಾವೃತವಾಗಿದೆ. ದೋಣಿ ಮೂಲಕ ನೆರೆ ಸಂತ್ರಸ್ತರನ್ನ ಕಾಳಜಿ ಕೇಂದ್ರಕ್ಕೆ ಶಿಫ್ಟ್‌ ಮಾಡಲಾಗಿದೆ.

RELATED ARTICLES

Related Articles

TRENDING ARTICLES