ಬೆಂಗಳೂರು : 2019ರಲ್ಲಿ IMA ಮುಖ್ಯಸ್ಥ ಮನ್ಸೂರ್ ಅಲಿಖಾನ್ ಬರೋಬ್ಬರಿ 14 ಸಾವಿರ ಜನರಿಗೆ ವಂಚನೆ ಮಾಡಿ ತಲೆ ಮರಸಿಕೊಂಡಿದ್ದ. ಇಂತಹ ನಯ ವಂಚಕನ ಜಾಡು ಹಿಡಿದ ಪವರ್ ಟಿವಿ, ದುಬೈ, ಸಿಂಗಾಪುರ್ ಸೇರಿದಂತೆ ಹಲವು ಕಡೆ ಪವರ್ ಫುಲ್ ಸ್ಟಿಂಗ್ ಮಾಡೋ ಮೂಲಕ ವಂಚಕನ ಬಂಧನಕ್ಕೆ ಆಗ್ರಹಿಸಿತ್ತು. ಇದ್ರಿಂದ ಸರ್ಕಾರದ ಹಿರಿಯ IAS ಅಧಿಕಾರಿಯಾದ ಹರ್ಷಗುಪ್ತಾರನ್ನ ನೇಮಕ ಮಾಡಿತ್ತು. ಹರ್ಷಗುಪ್ತಾ ಸುಮಾರು 5 ಸಾವಿರ ಕುಟುಂಬಗಳಿಗೆ ಈಗಾಗಲೇ ತಲಾ 50 ಸಾವಿರ ಹಣವನ್ನ ಅವರವರ ಖಾತೆಗಳಿಗೆ ಜಮೆ ಮಾಡಿದ್ರು.. ಇನ್ನೇನು ಮನ್ಸೂರ್ ಅಲಿಖಾನ್ ಆಸ್ತಿಗಳನ್ನ ಮಾರಾಟ ಮಾಡಿ ವಂಚಿತರಿಗೆ ಪರಿಹಾರ ನೀಡೋ ಸಮಯದಲ್ಲಿ ಸರ್ಕಾರ ಇದ್ದಕ್ಕಿದ್ದಂತೆ ಹರ್ಷ ಗುಪ್ತಾರನ್ನ ವರ್ಗಾವಣೆ ಮಾಡಿದ್ದಾರೆ. ಆದ್ರೆ ಈಗ ಆ ಸ್ಥಳಕ್ಕೆ ಇನ್ಚಾರ್ಜ್ ಡಿಸಿಯನ್ನ ನೇಮಿಸಿರೋದ್ರಿಂದ ಸದ್ಯ ಯಾವುದೇ ವಿಚಾರಣೆಗಳು ನಡೀತಿಲ್ಲ. ಇದ್ರಿಂದ ಕೂಡಲೇ IAS ಅಧಿಕಾರಿಯನ್ನ ನೇಮಿಸಿ ಅಂತ ಬಿಜೆಪಿ ಮುಖಂಡ ಅಬ್ದುಲ್ ಮಜೀದ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಅಷ್ಟೇ ಅಲ್ಲದೇ ಹಲಾಲ್ ಸ್ಕ್ಯಾಮ್ ಮಾಡಿರುವ ಮನ್ಸೂರ್ ಅಲಿಖಾನ್ ತಮ್ಮ ಆಸ್ತಿಗಳನ್ನ ಮಾರಾಟ ಮಾಡದಂತೆ ಸುಪ್ರೀಂಕೋರ್ಟ್ ನಲ್ಲಿ ದಾವೆ ಸಲ್ಲಿಸಿದ್ದಾರಂತೆ. ಇದರಿಂದ ಮನ್ಸೂರ್ ಅಲಿಖಾನ್ ಹೂಡಿರುವ ಮೊಕದ್ದಮೆಯನ್ನು ವಜಾಗೊಳಿಸಿ, ಉಳಿದ ಬಾಕಿದಾರರಿಗೆ ನ್ಯಾಯ ದೊರಕಿಸಿ ಕೊಡಿ ಅಂತ ಪ್ರಧಾನಿ ನರೇಂದ್ರ ಮೋದಿಯವರಿಗೆ ಬಿಜೆಪಿ ಅಲ್ಪ ಸಂಖ್ಯಾತರ ಘಟಕ ಕೂಡಾ ಆಗ್ರಹಿಸುತ್ತಿದೆ.
IMA ಬಹುಕೋಟಿ ವಂಚನೆಯಲ್ಲಿ ಕೇವಲ ಮನ್ಸೂರ್ ಅಲಿಖಾನ್ ಮಾತ್ರ ಅಷ್ಟೇ ಅಲ್ಲದೇ ಮನ್ಸೂರ್ ಅಲಿಖಾನ್ರ ಮಾವ ಅಬ್ಬಾಸ್ ಕೂಡಾ ಭಾಗಿಯಾಗಿದ್ದಾರೆ. ಇಲ್ಲಿ ದೋಚಿದ ಹಣವನ್ನೆಲ್ಲಾ ದುಬೈನಲ್ಲಿ ಇನ್ವೆಸ್ಟ್ಮೆಂಟ್ ಮಾಡಿದ್ದಾರೆ. ಕೂಡಲೇ ಅಬ್ಬಾಸ್ ರನ್ನ ಬಂಧಿಸಿ ಅವರ ಬಳಿ ಇರೋ ಅಕ್ರಮ ಆಸ್ತಿಯನ್ನ ವಶಕ್ಕೆ ಪಡೆದು, ನೊಂದವರಿಗೆ ಪರಿಹಾರ ಘೋಷಣೆ ಮಾಡಬೇಕು ಅನ್ನೋದು ನೊಂದವರ ಆಗ್ರಹವಾಗಿದೆ.
ಮಲ್ಲಾಂಡಹಳ್ಳಿ ಶಶಿಧರ್, ಪವರ್ ಟಿವಿ, ಬೆಂಗಳೂರು