Monday, December 23, 2024

ಧಾರಾಕಾರ ಮಳೆಗೆ ಕುಸಿದ ಮನೆ

ಹಾಸನ : ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಅರೆಮಲೆನಾಡು ಅರಕಲಗೂಡು ತಾಲೂಕಿನಲ್ಲಿ ಈ ಬಾರಿ ಆರಿದ್ರಾ ಮತ್ತು ಪುನರ್ವಸು ಎರಡೂ ಮಳೆಗಳು ಮಲೆನಾಡಿನಲ್ಲಿ ಸುರಿಯುವಂತೆ ಆರ್ಭಟಿಸಿವೆ.

ತಾಲೂಕಿನ ವ್ಯಾಪ್ತಿಯಲ್ಲಿ ಕಾವೇರಿ, ಹೇಮಾವತಿ ಎರಡೂ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನಿರಂತರ ಮಳೆಯಿಂದ ತಾಲೂಕಿನಾದ್ಯಂತ ಸಾಕಷ್ಟು ಬೆಳೆ, ಆಸ್ತಿ-ಪಾಸ್ತಿಗೆ ಹಾನಿಯಾಗಿದೆ. ಹೆಗ್ಗಡಿಹಳ್ಳಿ ಗ್ರಾಮದ ಹೆಚ್‌.ಜಿ.ರವಿ ಎಂಬುವವರ ಮನೆ ಕುಸಿದಿದೆ.

15 ದಿನಗಳಿಂದ ಬಿಟ್ಟು ಬಿಡದೆ ಮಳೆ ಸುರಿದಿದ್ದರಿಂದ ಕೈ ಹಂಚಿನ ಮನೆ ಗೋಡೆ ಕುಸಿದಿದೆ. ಮನೆ ಕಳೆದುಕೊಂಡಿರುವ ರವಿ ಅವರ ಕುಟುಂಬ ತಮ್ಮ ಸಹೋದರ ಸತೀಶ್‌ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಅರಕಲಗೂಡು ತಹಶೀಲ್ದಾರ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ರವಿ ಮನವಿ ಮಾಡಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES