Thursday, January 23, 2025

ಹಾಸನದಲ್ಲಿ ಮಹಾಮಳೆಗೆ ಇಬ್ಬರು ಬಲಿ

ಹಾಸನ : ಮೀನು ಹಿಡಿಯಲು ಹೋದವೇಳೆ ತೆಪ್ಪ ಮಗುಚಿ ಇಬ್ಬರು ಜಲ ಸಮಾಧಿಯಾದ ಘಟನೆ ಹಾಸನದಲ್ಲಿ ನಡೆದಿದೆ.

ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದ ಮೂವರು ಸ್ನೇಹಿತರು. ಭಾರಿ ಮಳೆನಡುವೆ ಗಾಳಿಯಿಂದ ಕೆರೆಯ ಮದ್ಯದಲ್ಲಿ ತೆಪ್ಪ ಮಗುಚಿಬಿದ್ದಿತ್ತು. ನೀರಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಮತ್ತೋರ್ವ ಪಾರಾಗಿದ್ದಾನೆ.

ಕಿಶೋರ್(38) ಮತ್ತು ರಾಜಣ್ಣ(50) ಮೃತರಾಗಿದ್ದು, ಕೆರೆಯಲ್ಲಿ ಮೀನು ಸಾಕಿದ್ದ ಕಿಶೋರ್, ಮೀನು ಬೆಳೆದಿದ್ದರಿಂದ ಮಾರಾಟ ಮಾಡಲು ಮೀನು ಹಿಡಿಯಲು ಸ್ನೇಹಿತರು ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ದೋಣಿ ಮಗುಚಿ ಇಬ್ಬರು ಮೃತರಾಗಿದ್ದಾರೆ. ಕೆರೆಯಲ್ಲಿ ಕಾರ್ಯಾಚರಣೆ ನಡೆಸಿ ಅಗ್ನಿಶಾಮಕ ಸಿಬ್ಬಂದಿ ಕಿಶೋರ್ ಮೃತದೇಹ ಹೊರತೆಗೆದಿದ್ದಾರೆ. ಮತ್ತೊಂದು ಮೃತದೇಹಕ್ಕಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.

RELATED ARTICLES

Related Articles

TRENDING ARTICLES