Sunday, December 22, 2024

ಮಳೆಯಿಂದ ಕೆಸರು ಗದ್ದೆಯಂತಾದ ಕಾಲೋನಿ..!

ಗದಗ: ಈ ದೃಶ್ಯಗಳು ಕಂಡು ಬಂದಿದ್ದು ಗದಗದ ಎಸ್.ರಾಧಾಕೃಷ್ಣನ್ ನಗರದಲ್ಲಿ. ಇಲ್ಲಿ ಸುಮಾರು 350ಕ್ಕೂ ಅಧಿಕ ಮನೆಗಳು, ಸುಮಾರು 2 ಸಾವಿರ ಜನಸಂಖ್ಯೆ ಇದೆ‌. ಆದ್ರೆ ಇಲ್ಲಿ ಕಾಲೋನಿ ಆದಾಗಿನಿಂದ ಮೂಲಭೂತ ಸೌಕರ್ಯಗಳು ಮರೀಚಿಕೆ ಆಗಿವೆ. ಸಣ್ಣ ಮಳೆ ಬಂದ್ರೆ ಸಾಕು ಈ ಪ್ರದೇಶ ಕೆಸರು ಗದ್ದೆಯಂತಾಗುತ್ತೆ. ಹೊರಗಡೆ ಬಂದ್ರೆ ಬಿದ್ದು ಕೈಕಾಲು ಮುರಿದುಕೊಳ್ಳುತ್ತಿದ್ದಾರೆ. ಇದರಿಂದ ರೋಸಿಹೋದ ಜನರು ಸಚಿವರು, ಅಧಿಕಾರಿಗಳ ಹೆಸರಲ್ಲಿ ಕಾಗದದ ದೋಣಿ ಮಾಡಿ ನೀರಲ್ಲಿ ಹರಿಬಿಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಇನ್ನೂ ಇದಕ್ಕೆಲ್ಲ ವಾರ್ಡ್​ ಸದಸ್ಯರು ಹೇಳೋದೇ ಬೇರೆ. ನಾವು ಆಯ್ಕೆಯಾಗಿ ಇದೀಗ ಕೇವಲ‌ ಆರು ತಿಂಗಳು ಆಗಿದೆ. ಅದರಲ್ಲಿ ಎರಡು ತಿಂಗಳು ನಗರಸಭೆ ಅಧಿಕಾರದ ಸಮಸ್ಯೆ ಕೋರ್ಟ್​ನಲ್ಲಿತ್ತು. ಉಳಿದ‌ ನಾಲ್ಕು ತಿಂಗಳಲ್ಲಿ ಇಲ್ಲಿನ‌ ಸಮಸ್ಯೆಗಳ ಬಗೆಹರಿಸುವುದಕ್ಕೆ ಸೌಲಭ್ಯಗಳ ಯೋಜನೆಗಳನ್ನ ಸಿದ್ಧಪಡಿಸಲಾಗಿದೆ. ಆದರೆ‌ ತಾಂತ್ರಿಕ‌ ಸಮಸ್ಯೆಯಿಂದ ತಡವಾಗ್ತಿದ್ದು ಜನತೆ ಅರ್ಥ ಮಾಡಿಕೊಳ್ಳಬೇಕು‌ ಅಂತಿದ್ದಾರೆ.

ಗದಗದ ಎಸ್. ರಾಧಾಕೃಷ್ಣನ್ ನಗರಕ್ಕೀಗ ಕಿಚಿಪಿಚಿ ನಗರ ಅಂತ ಖ್ಯಾತಿ ಆಗಿದೆ. ಇಲ್ಲಿಯ ಕಲುಷಿತ ವಾತಾವರಣದಿಂದ ಜನ ಅನಾರೋಗ್ಯಕ್ಕೆ ಒಳಗಾಗ್ತಿದ್ದಾರೆ. ಮನೆಯಿಂದ ಹತ್ತು ಮೀಟರ್ ಹೊರಗೆ ಬರಲಾಗುವುದಿಲ್ಲ. ಅದೇನೆ ಇರಲಿ. ಆದಷ್ಟು ಬೇಗ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತಕಡೆ ಗಮನ ಹರಿಸಿ ಸ್ಥಳೀಯರ ಸಮಸ್ಯೆ ಬಗೆಹರಿಸಲಿ ಎಂಬುದು ಎಲ್ಲರ ಬೇಡಿಕೆ.

ಮಹಲಿಂಗೇಶ್ ಹಿರೇಮಠ. ಪವರ್ ಟಿವಿ, ಗದಗ

RELATED ARTICLES

Related Articles

TRENDING ARTICLES